ಸನ್‌ರೈಸರ್ಸ್ ಮಾಲೀಕರ ಮೇಲೆ ಗಂಭೀರ ಆರೋಪ ಮಾಡಿದ ತಂಡದ ಪ್ಲೇಯರ್, ಐಪಿಎಲ್‍‌ಗೆ ಬಿತ್ತು ಬಾಂಬ್

Published : Jun 05, 2026, 01:37 PM IST

ಸನ್‌ರೈಸರ್ಸ್ ಹೈದರಾಬಾದ್ ಮಾಲಕಿ ಕಾವ್ಯ ಮಾರನ್ ವಿರುದ್ದ ತಂಡದ ವಿದೇಶಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಗಂಭೀರ ಆರೋಪ ಮಾಡಿದ್ದಾರೆ. ಮಾಲೀಕರ ಇಷ್ಟದ ಆಟಗಾರ ಸೇರಿದಂತೆ ಹಲವು ಮಾತು ಇದೀಗ ಕೋಲಾಹಲ ಸೃಷ್ಟಿಸಿದೆ.

PREV
16
ಕೋಲಾಹಲ ಸೃಷ್ಟಿಸಿದ ಆರೋಪ

ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಆರ್‌ಸಿಬಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಇದೀಗ ಪ್ರತಿ ಫ್ರಾಂಚೈಸಿಗಳು ತಮ್ಮ ತಂಡದ ಪ್ಲಸ್ ಮೈನಸ್ ಕುರಿತು ಚರ್ಚೆ ನಡೆಸುತ್ತಿದೆ. ಮುಂದಿನ ಟೂರ್ನಿಗೆ ತಂಡದ ಬದಲಾವಣೆ ಕುರಿತು ಚರ್ಚಿಸುತ್ತಿದೆ. ಇದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿದೇಶಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಗಂಭೀರ ಆರೋಪ ಐಪಿಎಲ್‌ನಲ್ಲೇ ಕೋಲಾಹಲ ಸೃಷ್ಟಿಸಿದೆ.

26
ಕಾವ್ಯ ಮಾರನ್ ಮೇಲೆ ಆರೋಪ

ಪ್ಲೇ ಆಫ್‌‌ನಿಂದ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್ ಇದೀಗ ಸೋಲಿನ ಜೊತೆ ಮಾಲೀಕರ ಮೇಲೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ಈ ಆರೋಪ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೂ ಮಾಲೀಕರ (ಕಾವ್ಯ ಮಾರನ್) ಹಸ್ತಕ್ಷೇಪ ಇರುತ್ತೆ ಎಂದಿದ್ದಾರೆ.

36
ಮಾಲೀಕರಿಗೆ ಇಷ್ಟ ಆದ್ರೆ ಸಾಕು

ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ಲೇಯಿಂಗ್ 11 ಆಯ್ಕೆ ವೇಳೆ ಮೂರು ಕೆಟರಿಗೆ ಇದೆ. ಈ ಪೈಕಿ ಮಾಲೀಕರಿಗೆ ಇಷ್ಟವಾಗುವ ಕೆಟರಿಗೆ ಇದೆ. ಮಾಲೀಕರಿಗೆ ಇಷ್ಟದ ಆಟಗಾರನಾಗಿದ್ದರೆ ಆತನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಖಚಿತವಾಗಿರುತ್ತದೆ. ಆತ ಎಷ್ಟೇ ಕಳಪೆಯಾಗಿದ್ದರೂ ಸ್ಥಾನ ಭದ್ರವಾಗಿರುತ್ತದೆ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಹೇಳಿದ್ದಾರೆ.

46
ಐಪಿಎಲ್‌ನಲ್ಲಿ ಮೂರು ಆಟದಾರರು

ಐಪಿಎಲ್ ಟೂರ್ನಿಯಲ್ಲಿ ಮೂರು ಆಟಗಾರರಿರುತ್ತಾರೆ. ತಂಡದಲ್ಲಿ ಸ್ಥಾನ ಖಚಿತಗೊಂಡಿರುವ ಆಟಗಾರರು, ಪರಿಸ್ಥಿತಿಗೆ ತಕ್ಕಂತೆ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರು, ಮೂರನೇಯದ್ದು ನನ್ನ ರೀತಿ ಆಟಗಾರರರು. ಅಂದರೆ ತಂಡದಲ್ಲಿರುತ್ತಾರೆ. ಒಂದು ಅವಕಾಶವೂ ಸಿಗುವುದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಹೇಳುತ್ತೇನೆ ಎಂದು ಲಿಯಾಮ್ ಘಟನೆಯನ್ನೂ ಬಿಚ್ಚಿಟ್ಟಿದ್ದಾರೆ.

56
ಸಲೀಲ್ ಆರೋರಾ ಮೇಲೆ ಪ್ರೀತಿ

ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ಸಲೀಲ್ ಅರೋರಾನ ಖರೀದಿಗೆ ಮುಂದಾಗಿತ್ತು. ಹೈದರಾಬಾದ್ ಹೆಚ್ಚು ಹಣ ನೀಡಿ ಸಲೀಲ್ ಆರೋರಾ ಖರೀದಿಸಿತ್ತು. ಕಾರಣ ಸನ್‌ರೈಸರ್ಸ್ ಮಾಲೀಕ ಕಾವ್ಯ ಮಾರನ್‌ಗೆ ಆಟಗಾರ ಇಷ್ಟ. ಇಷ್ಟದ ಕಾರಣ ಆತನಿಗೆ ಪ್ಲೇಯಿಂಗ್ 11 ಸ್ಥಾನ ಖಚಿತವಾಗಿತ್ತು. ನಾಯಕ, ಕೋಚ್ ಜೊತೆಗೆ ಮಾಲೀಕರೂ ಹಸ್ತಕ್ಷೇಪ ಮಾಡುತ್ತಾರೆ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಗಂಭೀರ ಆರೋಪ ಮಾಡಿದ್ದಾರೆ.

66
ವೆಟ್ಟೋರಿ ಬಳಿ ಪ್ರಶ್ನಿಸಿದಾಗ ಉತ್ತರ ಸಿಕ್ಕಿತ್ತು

ಸನ್‌ರೈಸರ್ಸ್ ತಂಡದಲ್ಲಿ ಮೂವರು ವಿದೇಶಿ ಆಟಗಾರರನ್ನು ಆಡಿಸುತ್ತಿದ್ದರು. ಮತ್ತೊಂದು ಸ್ಥಾನ ಖಾಲಿ ಇದ್ದರೂ ನನಗೆ ಅವಕಾಶ ನೀಡಲಿಲ್ಲ. ಕೋಟ್ ಡೆನಿಯಲ್ ವೆಟೋರಿಯನ್ನು ಕೇಳಿದಾಗ, ಈ ಹುಡುಗ ನಮ್ಮ ಮಾಲೀಕರಿಗೆ ಪಂಚ ಪ್ರಾಣ. ಹೀಗಾಗಿ ಆತ ಪ್ಲೇಯಿಂಗ್ 11ನಲ್ಲಿ ಇರುತ್ತಾನೆ. ಪ್ಯಾಟ್ ಕಮಿನ್ಸ್ ವಾಪಾಸ್ ಬಂದ ಬಳಿಕವೂ ಕಾಂಬಿನೇಷನ್ ಬದಲಾಗಲ್ಲ ಎಂದು ವೆಟ್ಟೋರಿ ಹೇಳಿದ್ದರು. ಯಾರಾದರೂ ಗಾಯಗೊಂಡರೆ ನಿನಗೆ ಅವಕಾಶ ಸಿಗುತ್ತೆ ಎಂದು ವೆಟ್ಟೋರಿ ನನಗೆ ಹೇಳಿದ್ದರು. ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ ಹೇಳಿಕೆ ಇದೀಗ ಐಪಿಎಲ್ ಮಾಲೀಕರ ಹಸ್ತಕ್ಷೇಪ ಕುರಿತು ಭಾರಿ ಚರ್ಚೆಯಾಗುವಂತೆ ಮಾಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories