ಐಪಿಎಲ್‌ನ ಗರಿಷ್ಠ ಫಾಲೋವರ್ಸ್ ತಂಡ ಆರ್‌ಸಿಬಿ, ಸಿಎಸ್‌ಕೆ ಸೇರಿ ಎಲ್ಲರ ಹಿಂದಿಕ್ಕಿ ನಂ.1

Published : Apr 04, 2025, 09:10 PM ISTUpdated : Apr 04, 2025, 09:16 PM IST

ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದೆ ತಂಡವಾಗಿ ಹೊರಹೊಮ್ಮಿದೆ. ಸಿಎಸ್‌ಕೆ ಸೇರಿ ಎಲ್ಲಾ ತಂಡವನ್ನು ಹಿಂದಿಕ್ಕಿರುವ ಆರ್‌ಸಿಬಿ ಕೆಲ ದಾಖಲೆಯನ್ನು ಬರೆದಿದೆ.

PREV
16
ಐಪಿಎಲ್‌ನ ಗರಿಷ್ಠ ಫಾಲೋವರ್ಸ್ ತಂಡ ಆರ್‌ಸಿಬಿ, ಸಿಎಸ್‌ಕೆ ಸೇರಿ ಎಲ್ಲರ ಹಿಂದಿಕ್ಕಿ ನಂ.1

ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಗೆದ್ದಿಲ್ಲ ಎಂದು ಹಲವರು ಟೀಕಿಸುತ್ತಾರೆ. ಪ್ರಶಸ್ತಿ ಗೆದ್ದಿಲ್ಲ ನಿಜ. ಆದರೆ ಇತರ ಯಾವುದೇ ತಂಡಕ್ಕಿಲ್ಲದ ಅಭಿಮಾನಿಗಳ ಬಳಗ ಆರ್‌ಸಿಬಿಗಿದೆ. ಒಂದು ಕಪ್ ಗೆದ್ದಿಲ್ಲದಿದ್ದರೂ ತಂಡದ ಮೌಲ್ಯ ಇತರ 10 ತಂಡಕ್ಕಿಂತ ಹೆಚ್ಚು. ಇದೀಗ ಆರ್‌ಸಿಬಿ ಹೊಸ ದಾಖಲೆ ಬರೆದಿದೆ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿದೆ ತಂಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

26

ಇದು 18ನೇ ಐಪಿಎಲ್ ಆವೃತ್ತಿ. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಗೂ 18ನೇ ವರ್ಷ. ವಿಶೇಷ ಅಂದರೆ ಇದೀಗ ಇನ್‌ಸ್ಟಾಗ್ರಾಂನಲ್ಲಿ ಆರ್‌ಸಿಬಿ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 18 ಮಿಲಿಯನ್. ಇನ್‌ಸ್ಟಾಗ್ರಾಂ ಫಾಲೋವರ್ಸ್‌ನಲ್ಲಿ ಸಿಎಸ್‌ಕೆ ಮೊದಲ ಸ್ಥಾನದಲ್ಲಿತ್ತು. ಇದೀಗ ಆರ್‌ಸಿಬಿ ಸಿಎಸ್‌ಕೆ ಹಿಂದಿಕ್ಕಿ ನಂಬರ್ 1 ಆಗಿದೆ.

36

ಈ ಬಾರಿಯ ಐಪಿಎಲ್ ಟೂರ್ನಿ ಆರಂಭಗೊಂಡಾಗ ಆರ್‌ಸಿಬಿ ಇನ್‌ಸ್ಟಾಗ್ರಾಂನ ಫಾಲೋವರ್ಸ್ ಸಂಖ್ಯೆ 17 ಮಿಲಿಯನ್. ಈ ವೇಳೆ ಸಿಎಸ್‌ಕೆ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 17.7 ಮಿಲಿಯನ್. ಆದರೆ ಕೇವಲ 10 ದಿನದಲ್ಲಿ ಅಂದರೆ ಸಿಎಸ್‌ಕೆ ತಂಡವನ್ನು ಮಣಿಸಿದ ಬೆನ್ನಲ್ಲೇ ಆರ್‌ಸಿಬಿ ಫಾಲೋವರ್ಸ ಸಂಖ್ಯೆ 18 ಮಿಲಿಯನ್‌ಗೆ ಏರಿಕೆಯಾಗಿದೆ.

46

ಐಪಿಎಲ್ ಟಾಪ್ ತಂಡಗಳ ಇನ್‌ಸ್ಟಾಗ್ರಾಂ ಫಾಲೋವರ್ಸ್
ಆರ್‌ಸಿಬಿ: 18.2 ಮಿಲಿಯನ್ 
ಸಿಎಸ್‌ಕೆ: 17.9 ಮಿಲಿಯನ್
ಮುಂಬೈ ಇಂಡಿಯನ್ಸ್ : 16.4 ಮಿಲಿಯನ್

ಇನ್ನುಳಿದ ತಂಡಗಳು 10 ಮಿಲಿಯನ್ ಪೂರೈಸಿಲ್ಲ. ಕೆಕೆಆರ್ 7.1 ಮಿಲಿಯನ್, ಡೆಲ್ಲಿ ಕ್ಯಾಪಿಟಲ್ಸ್ 4.3 ಮಿಲಿಯನ್, ರಾಜಸ್ಥಾನ ರಾಯಲ್ಸ್ 4.8 ಮಿಲಿಯನ್ ಫಾಲೋವರ್ಸ್ ಹೊಂದಿದೆ.
 

56

ಪಂದ್ಯ ಗೆದ್ದರೂ ಸೋತರೂ ಆರ್‌ಸಿಬಿ ಅಭಿಮಾನಿಗಳು ತಂಡವನ್ನು ಬಿಟ್ಟುಕೊಟ್ಟಿಲ್ಲ. ಆಕ್ರೋಶಗೊಂಡಿದ್ದಾರೆ, ಬೇಸರಗೊಂಡಿದ್ದಾರೆ. ಸೋಲಿನಿಂದ ಜರ್ಝಿರಿತ ಗೊಂಡಿದ್ದಾರೆ. ಕಳಪೆ ಆಟದಿಂದ ನೋವು ತೋಡಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಯಾವತ್ತೂ ಆರ್‌ಸಿಬಿ ತಂಡವನ್ನು ತೊರದಿಲ್ಲ. ಇದೇ ಕಾರಣದಿಂದ ಆರ್‌ಸಿಬಿ ಒಂದೇ ಒಂದು ಕಪ್ ಗೆಲ್ಲದಿದ್ದರೂ ಈಗಲೂ ಮೋಸ್ಟ್ ಫೇವರಿಟ್ ಟೀಂ ಆಗಿ ಮಿಂಚುತ್ತಿದೆ.

66

ಇನ್ನು ಆರ್‌ಸಿಬಿ ಪ್ರತಿ ಪೋಸ್ಟ್‌ಗೆ ಅಭಿಮಾನಿಗಳು ಭರ್ಜರಿ ಲೈಕ್ಸ್ ಕಮೆಂಟ್ಸ್ ಮಾಡುತ್ತಾರೆ. ಪ್ರತಿ ಪೋಸ್ಟ್‌ಗೂ ಮಿಲಿಯನ್ ಲೈಕ್ಸ್, ಕಮೆಂಟ್ಸ್ ಇದ್ದೇ ಇರುತ್ತೆ. ಆರ್‌ಸಿಬಿ ಅದೆಷ್ಟೇ ಸೋಲು ಕಂಡರೂ ಅಭಿಮಾನಿಗಳು ಎದೆತಟ್ಟಿ ತಾನು ಆರ್‌ಸಿಬಿ ಅಭಿಮಾನಿ ಎಂದು ಹೇಳುತ್ತಾರೆ, ಪಂದ್ಯದಲ್ಲಿ ಸಂಭ್ರಮಿಸುತ್ತಾರೆ.  ಇತರ ಯಾವುದೇ ತಂಡಕ್ಕೂ ಈ ರೀತಿಯ ಲಾಯಲ್ ಫ್ಯಾನ್ಸ್ ಇಲ್ಲ.

Read more Photos on
click me!

Recommended Stories