ವೈರಲ್‌ ರಿಯಾಕ್ಷನ್‌ನಿಂದ ಫೇಮಸ್‌ ಆದ ಚೆನ್ನೈ ಟೀಮ್‌ ಫ್ಯಾನ್‌ಗರ್ಲ್‌ ಹೆಸರೇನು ಗೊತ್ತಾ?

Published : Apr 04, 2025, 04:55 PM ISTUpdated : Apr 04, 2025, 04:56 PM IST

ಸಿಎಸ್‌ಕೆ ಅಭಿಮಾನಿ ಆರ್ಯಪ್ರಿಯಾ ಭುಯಾನ್, ಧೋನಿ ಔಟಾದಾಗ ತೋರಿದ ರಿಯಲ್‌ ಟೈಮ್‌ ಪ್ರತಿಕ್ರಿಯೆಯಿಂದ ವೈರಲ್ ಆಗಿದ್ದಾರೆ. ಆಕೆಯ ಹೃದಯಸ್ಪರ್ಶಿ ಮುಖಭಾವ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಪ್ರತಿಕ್ರಿಯೆಗಳನ್ನು ಗಳಿಸಿದೆ.

PREV
16
ವೈರಲ್‌ ರಿಯಾಕ್ಷನ್‌ನಿಂದ ಫೇಮಸ್‌ ಆದ ಚೆನ್ನೈ ಟೀಮ್‌ ಫ್ಯಾನ್‌ಗರ್ಲ್‌ ಹೆಸರೇನು ಗೊತ್ತಾ?

ಸೋಶಿಯಲ್‌ ಮೀಡಿಯಾ ವ್ಯಕ್ತಿಗಳಿಗೆ ತಮ್ಮ ವಿಶೇಷತೆಯನ್ನು ತೋರಿಸುವ ಅವಕಾಶ ನೀಡುತ್ತದೆ. ಪ್ರತಿಭೆ, ನೋಟ ಅಥವಾ ಜ್ಞಾನವೇ ಆಗಿರಲಿ, ಅದು ತ್ವರಿತವಾಗಿ ವೈರಲ್ ಆಗಲು ಸೋಶಿಯಲ್‌ ಮೀಡಿಯಾ ಸಾಕು. ಸಿಎಸ್‌ಕೆ ತಂಡದ ಪರಮ ಅಭಿಮಾನಿಯಾಗಿರುವ ಆರ್ಯಪ್ರಿಯಾ ಭುಯಾನ್ ಜೀವನದಲ್ಲಿ ಇದು ನಿಜವಾಗಿದೆ.

26

ರಾಜಸ್ಥಾನ ರಾಯಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಗುವಾಹಟಿಯಲ್ಲಿ ನಡೆದ ಪಂದ್ಯದ ವೇಳೆ, 19 ವರ್ಷದ ಆರ್ಯಪ್ರಿಯಾ ಅವರು ಸಿಟ್ಟು ತೋರುವ ಶಾರ್ಟ್‌ ಕ್ಲಿಪ್‌ ಸಖತ್‌ ವೈರಲ್‌ ಆಗಿದೆ. ಧೋನಿ ಔಟಾದಾಗ ಅವರು ತೋರಿದ ರಿಯಲ್‌ ಟೈಮ್‌ ಪ್ರತಿಕ್ರಿಯೆ ಮೀಮ್‌ ಟ್ಯಾಂಪ್ಲೆಟ್‌ ಆಗಿದೆ. ಆಕೆಯ ಹೃದಯಸ್ಪರ್ಶಿ ಮುಖಭಾವ ತ್ವರಿತವಾಗಿ ವೈರಲ್‌ ಆಗಿ ಸೋಶಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಪ್ರತಿಕ್ರಿಯೆಗೆ ಕಾರಣವಾಗಿದೆ.

36

ಆರ್ಯಪ್ರಿಯಾ ಅವರ ಪ್ರತಿಕ್ರಿಯೆಯ ಒಂದು ಸಣ್ಣ ಕ್ಲಿಪ್ ಎಷ್ಟೊಂದು ಜನರನ್ನು ಆಕರ್ಷಿಸಿತು ಎಂದರೆ ಅವರು ರಾತ್ರೋರಾತ್ರಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. ಐಪಿಎಲ್ ಸೆನ್ಸೇಷನ್ ಹೃದಯಗಳನ್ನು ಗೆಲ್ಲುವುದನ್ನು ಮುಂದುವರೆಸುತ್ತಿದ್ದಂತೆ, ಅವರ ನಿಜಕಥೆ ಕೂಡ ಬಹಿರಂಗವಾಗಿದೆ.

46

ಗುವಾಹಟಿಯ 19 ವರ್ಷದ ಆರ್ಯಪ್ರಿಯಾ ಭುಯಾನ್, ಕ್ರಿಕೆಟ್‌ನ ಪರಮ ಅಭಿಮಾನಿ. ವಿದ್ಯಾರ್ಥಿಯಾಗಿರುವ ಈಕೆಗೆ ಧೋನಿ ಮೇಲೆ ಪ್ರೀತಿಯಿಂದ ಕ್ರಿಕೆಟ್‌ ಮೇಲೆ ಪ್ರಿತಿ ಬೆಳೆಯಿತು.ಚಿಕ್ಕ ವಯಸ್ಸಿನಲ್ಲಿಯೇ ತನ್ನ ಸಹೋದರಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಧೋನಿಗೆ ಒಡ್ಡಿಕೊಂಡ ಆರ್ಯಪ್ರಿಯಾ ಅಂದಿನಿಂದ ನಿಷ್ಠಾವಂತ ಅಭಿಮಾನಿಯಾಗಿ ಉಳಿದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಪ್ರಯಾಣದ ಬಗ್ಗೆ ಮಾತನಾಡುತ್ತಾ, "ನಾನು ಒಂಬತ್ತು ಅಥವಾ ಹತ್ತು ವರ್ಷದವಳಾಗಿದ್ದಾಗ ಅವರು ನನ್ನನ್ನು ತಂಡಕ್ಕೆ ಮತ್ತು ಧೋನಿಗೆ ಪರಿಚಯಿಸಿದರು. ಅಂದಿನಿಂದ, ನಾನು ಅಭಿಮಾನಿಯಾಗಿದ್ದೇನೆ ಮತ್ತು ನಾನು ಯಾವಾಗಲೂ CSK ಮತ್ತು ಧೋನಿಯನ್ನು ಪ್ರೀತಿಸುತ್ತೇನೆ" ಎಂದು ಹೇಳಿದ್ದಾರೆ.

56

ಆರ್‌ಆರ್ vs ಸಿಎಸ್‌ಕೆ ಪಂದ್ಯದ ವೇಳೆ ಹಳದಿ ಶಾರ್ಟ್‌ ಧರಿಸಿದ್ದ ಆರ್ಯಪ್ರಿಯಾ ಸಹಜ ಮತ್ತು ಹತಾಶೆಯಿಂದ ಪ್ರತಿಕ್ರಿಯಿಸಿದರು.  ಕೆಲವರು ಅವರನ್ನು 'ಮೀಮ್ ಗರ್ಲ್' ಎಂದು ಕರೆದರೆ, ಇನ್ನು ಕೆಲವರು ಅವರನ್ನು 'ಕ್ರಶ್' ಎಂದು ಕರೆಯಲು ಪ್ರಾರಂಭಿಸಿದರು. ಲೇಬಲ್ ಏನೇ ಇರಲಿ, ಆರ್ಯಪ್ರಿಯಾ ಅನೇಕರ ಹೃದಯಗಳನ್ನು ಗೆದ್ದಿರುವುದಂತೂ ನಿಜ.

ಧೋನಿಗೆ 10 ಓವರ್‌ ಬ್ಯಾಟ್ ಮಾಡಲು ಆಗಲ್ಲ: ಹೊಸ ಬಾಂಬ್ ಸಿಡಿಸಿದ ಸ್ಟಿಫನ್ ಪ್ಲೆಮಿಂಗ್!

66

ಆರ್ಯಪ್ರಿಯಾ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 800 ರಿಂದ 2.35 ಲಕ್ಷಕ್ಕೆ ಏರಿದೆ. ಈ ವೈರಲ್‌ ಅಂಶಕ್ಕೂ ಮುನ್ನ ನನಗೆ ಕೇವಲ 100 ಮಂದಿ ಫಾಲೋವರ್ಸ್‌ಗಳಿದ್ದರು. ನಾನು ಸಕ್ರಿಯವಾಗಿಲ್ಲ. ಆದರೆ, ವೈರಲ್‌ ಆದ ಬೆನ್ನಲ್ಲೇ ಫಾಲೋವರ್ಸ್‌ ಸಂಖ್ಯೆ ಗಗನಕ್ಕೇರಿದೆ. "ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ 1,000 ಕ್ಕಿಂತ ಕಡಿಮೆ ಫಾಲೋವರ್ಸ್‌ಗಳಿದ್ದರು. ನಾನು ದೊಡ್ಡ ಸಾಮಾಜಿಕ ಮಾಧ್ಯಮ ವ್ಯಕ್ತಿ ಅಲ್ಲ. ನನಗೆ ಅನಿಸಿದಾಗಲೆಲ್ಲಾ ನಾನು ಪ್ರಯಾಣದ ಚಿತ್ರಗಳನ್ನು ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ.

ಸೂಪರ್ ಬೌಲಿಂಗ್‌ನಿಂದ ರಾಜಸ್ಥಾನಕ್ಕೆ ಮೊದಲ ಜಯ; ಸಿಎಸ್‌ಕೆ 2ನೇ ಸೋಲು!

Read more Photos on
click me!

Recommended Stories