ಧೋನಿ ನಾಯಕತ್ವ ಕಣ್ತುಂಬಿಕೊಳ್ಳಲು ರೆಡಿಯಾಗಿ, 2 ವರ್ಷ ಬಳಿಕ ಸಿಎಸ್‌ಕೆ ಕ್ಯಾಪ್ಟೆನ್ಸಿ

Published : Apr 04, 2025, 07:58 PM ISTUpdated : Apr 04, 2025, 08:01 PM IST

ಧೋನಿ ಫ್ಯಾನ್ಸ್‌ಗೆ ಗುಡ್ ನ್ಯೂಸ್. 2 ವರ್ಷಗಳ ಬಳಿಕ ಎಂಎಸ್ ಧೋನಿ ಮತ್ತೆ ಸಿಎಸ್‌ಕೆ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ  ಧೋನಿ ಮತ್ತೆ ಚೆನ್ನೈ ತಂಡಕ್ಕೆ ನಾಯಕರಾಗಿ ಮರಳುತ್ತಿದ್ದಾರೆ.

PREV
16
ಧೋನಿ ನಾಯಕತ್ವ ಕಣ್ತುಂಬಿಕೊಳ್ಳಲು ರೆಡಿಯಾಗಿ, 2 ವರ್ಷ ಬಳಿಕ ಸಿಎಸ್‌ಕೆ ಕ್ಯಾಪ್ಟೆನ್ಸಿ

ಲೆಜೆಂಡ್ ಕ್ರಿಕೆಟರ್ ಎಂಎಸ್ ಧೋನಿಯನ್ನು ಮತ್ತೆ ಮೈದಾನದಲ್ಲಿ ನೋಡುವುದೇ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಅಭಿಮಾನಿಗಳಿಗಾಗಿ ಧೋನಿ ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಬ್ಯಾಟಿಂಗ್ ನೋಡಿ ಖುಷಿಪಟ್ಟಿದ್ದಾರೆ. ಇದೀಗ ಧೋನಿಯನ್ನು ಮೈದಾನದಲ್ಲಿ ನೋಡುವುದು ಮಾತ್ರವಲ್ಲ, ಧೋನಿ ನಾಯಕತ್ವ ಕಣ್ತುಂಬಿಕೊಳ್ಳಲು ಅಭಿಮಾನಿಗಳು ರೆಡಿಯಾಗಿ.

26

ಎಂ ಎಸ್ ಧೋನಿ ಬರೋಬ್ಬರಿ 2 ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಮರಳುತ್ತಿದ್ದಾರೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಧೋನಿ ಮತ್ತೆ ನಾಯಕತ್ವ ವಹಿಸಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ.

36

2023ರಲ್ಲಿ ನಾಯಕತ್ವದಿಂದ ಹಿಂದೆ ಸರಿದ ಬಳಿಕ ರುತುರಾಜ್ ಗಾಯಕ್ವಾಡ್‌ಗೆ ನಾಯಕತ್ವ ನೀಡಲಾಗಿದೆ. ಆದರೆ ರುತರಾಜ್ ಗಾಯಕ್ವಾಡ್ ಗಾಯಗೊಂಡಿದ್ದಾರೆ. ಹೀಗಾಗಿ ಎಪ್ರಿಲ್ 5 ರಂದು ನಡೆಯಲಿರುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್ ಕಣಕ್ಕಿಳಿಯುವುದು ಅನುಮಾನವಾಗಿದೆ. ಹೀಗಾಗಿ  ಧೋನಿಗೆ ಮತ್ತೆ ನಾಯಕತ್ವ ಜವಾಬ್ಜಾರಿ ಹೆಗಲೇರಲಿದೆ.

46

ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಗಾಯಗೊಂಡಿದ್ದಾರೆ.ತುಷಾರ್ ಪಾಂಡೆ ಬೌಲಿಂಗ್‌ನಲ್ಲಿ ಗಾಯಗೊಂಡಿದ್ದರು. ಗಾಯಕ್ವಾಡ್ ಸಂಪೂರ್ಣ ಚೇತರಿಸಿಕೊಂಡಿಲ್ಲ. ಅಭ್ಯಾಸದ ವೇಳೆ ಗಾಯಕ್ವಾಡ್ ಗಾಯ ಹಾಗೂ ನೋವು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬ್ಯಾಟಿಂಗ್ ಕೋಚ್  ಡೇವಿಡ್ ಹಸ್ಸಿ ಹೇಳಿದ್ದಾರೆ.

56

ಗಾಯಕ್ವಾಡ್ ಅಲಭ್ಯರಾದರೆ ಸಿಎಸ್‌ಕೆ ನಾಯಕತ್ವ ವಹಿಸಿಕೊಳ್ಳುವಂತೆ ಮತೊಬ್ಬ ಆಟಾಗಾರ ಸದ್ಯ ಸಿಎಸ್‌ಕೆ ತಂಡದಲ್ಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಧೋನಿಗೆ ನಾಯಕತ್ವ ಹೆಗಲೇರುವ ಸಾಧ್ಯತೆ ಹೆಚ್ಚಿದೆ. ಕನಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಧೋನಿ ನಾಯಕರಾಗುವ ಸಾಧ್ಯತೆ ಇದೆ.

66

2025ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ 3 ಪಂದ್ಯದಲ್ಲಿ 2 ಪಂದ್ಯದಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಸಿಎಸ್‌ಕೆ 8ನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡ ಸಿಎಸ್‌ಕೆ ತಂಡವನ್ನು ಚೆನ್ನೈನಲ್ಲಿ ಸೋಲಿಸಿತ್ತು. ಈ ಸೋಲು ಚೆನ್ನೈ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

Read more Photos on
click me!

Recommended Stories