ರವೀಂದ್ರ ಜಡೇಜಾ ಇನ್‌ಸ್ಟಾಗ್ರಾಂ ಅಕೌಂಟ್ ನಾಪತ್ತೆ! ಚೆನ್ನೈ ಸೂಪರ್ ಕಿಂಗ್ಸ್ ತೊರೆಯೋದು ಗ್ಯಾರಂಟಿನಾ?

Published : Nov 10, 2025, 01:43 PM IST

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತನ್ನ ರೀಟೈನ್ಷನ್ ಮಾಹಿತಿಯನ್ನು ಫೈನಲ್ ಮಾಡಬೇಕಿದೆ. ಆದರೆ ಸಿಎಸ್‌ಕೆ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಟ್ರೇಡಿಂಗ್ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಂ ಅಕೌಂಟ್ ನಾಪತ್ತೆಯಾಗಿದೆ.

PREV
19
ಆಟಗಾರರ ರೀಟೈನ್ಷನ್‌ಗೆ ನವೆಂಬರ್ 15 ಡೆಡ್‌ಲೈನ್

ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮನ್ನ ಇದೇ ನವೆಂಬರ್ 15ರೊಳಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ರೀಟೈನ್ ಆಟಗಾರರ ಹೆಸರನ್ನು ಅಂತಿಮಗೊಳಿಸಲು ಡೆಡ್‌ಲೈನ್ ನೀಡಲಾಗಿದೆ. ಇನ್ನು ಡಿಸೆಂಬರ್ 15ರ ವೇಳೆಗೆ ಐಪಿಎಲ್ ಆಟಗಾರರ ಹರಾಜು ನಡೆಯುವ ಸಾಧ್ಯತೆಯಿದೆ.

29
ಸಂಜುಗಾಗಿ ಜಡ್ಡುಗೆ ಸಿಎಸ್‌ಕೆ ಗೇಟ್‌ಪಾಸ್?

ಇದೆಲ್ಲದರ ನಡುವೆ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ತಂಡಕ್ಕೆ ಕರೆತರಲು ಫ್ರಾಂಚೈಸಿ ಚಿಂತನೆ ನಡೆಸಿದ್ದು, ಇದಕ್ಕಾಗಿ ಸ್ಟಾರ್ ಆಲ್ರೌಂಡರ್ ಜಡೇಜಾ ಅವರನ್ನು ರಾಜಸ್ಥಾನಕ್ಕೆ ಬಿಟ್ಟುಕೊಡಲು ಸಿಎಸ್‌ಕೆ ಫ್ರಾಂಚೈಸಿ ಮುಂದಾಗಿದೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

39
ಸ್ಯಾಮ್ ಕರ್ರನ್ ಕೂಡಾ ಸಿಎಸ್‌ಕೆ ತೆಕ್ಕೆಗೆ

ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಟ್ರೇಡಿಂಗ್ ಡೀಲ್ ಚರ್ಚೆ ಸದ್ಯ ಜಾರಿಯಲ್ಲಿದೆ. ಜಡೇಜಾ ಜತೆಗೆ ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರ್ರನ್ ಅವರನ್ನು ರಾಜಸ್ಥಾನಕ್ಕೆ ಬಿಟ್ಟುಕೊಡಲು ಚೆನ್ನೈ ಸೂಪರ್ ಕಿಂಗ್ಸ್ ಮುಂದಾಗಿದೆ ಎಂದು ವರದಿಯಾಗಿದೆ.

49
ಜಡ್ಡು ಇನ್‌ಸ್ಟಾಗ್ರಾಂ ಅಕೌಂಟ್ ನಾಪತ್ತೆ

ಇನ್ನು ಇದೆಲ್ಲದರ ನಡುವೆ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಅಧಿಕೃತ ಇನ್‌ಸ್ಟಾಗ್ರಾಂ ಅಕೌಂಟ್ ಸೋಷಿಯಲ್ ಮೀಡಿಯಾದಿಂದ ನಾಪತ್ತೆಯಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

59
ಜಡ್ಡು ಸೋಷಿಯಲ್ ಮೀಡಿಯಾ ಅಕೌಂಟ್ ಅಪ್‌ಡೇಟ್

ಸ್ವತಃ ರವೀಂದ್ರ ಜಡೇಜಾ ಅವರೇ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಡಿಆಕ್ಟಿವೇಟ್ ಮಾಡಿದ್ದಾರೆಯೇ ಅಥವಾ ತಾಂತ್ರಿಕ ಕಾರಣದಿಂದ ಅಕೌಂಟ್ ಡೀ-ಆಕ್ಟಿವೇಟ್ ಆಗಿದೆಯೇ ಎನ್ನುವುದರ ಕುರಿತಂತೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

69
19ನೇ ವಯಸ್ಸಿಗೆ ಐಪಿಎಲ್‌ಗೆ ಜಡ್ಡು ಪಾದಾರ್ಪಣೆ

ರವೀಂದ್ರ ಜಡೇಜಾ ತಮ್ಮ 19ನೇ ವಯಸ್ಸಿನಲ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿದಿದ್ದರು. ಆ ವರ್ಷ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

79
ರಾಜಸ್ಥಾನ ಮೂಲಕ ಐಪಿಎಲ್‌ಗೆ ಜಡ್ಡು ಪಾದಾರ್ಪಣೆ

2009ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಜಡ್ಡು, ಮರು ವರ್ಷ ರಾಯಲ್ಸ್ ತಂಡದ ಅಧಿಕಾರಿಗಳಿಗೆ ತಿಳಿಸದೆ ಮುಂಬೈ ಇಂಡಿಯನ್ಸ್‌ನ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು. ಒಪ್ಪಂದ ಉಲ್ಲಂಘಿಸಿದ ಆಟಗಾರನ ವಿರುದ್ಧ ರಾಯಲ್ಸ್ ಬಿಸಿಸಿಐಗೆ ದೂರು ನೀಡಿತ್ತು. ಬಿಸಿಸಿಐ, ಜಡೇಜಾಗೆ ಐಪಿಎಲ್ ಆಡುವುದರಿಂದ ಒಂದು ವರ್ಷ ನಿಷೇಧ ಹೇರಿತ್ತು.

89
2012ರಿಂದ ಚೆನ್ನೈ ತಂಡದ ಭಾಗವಾಗಿರೋ ಜಡ್ಡು

ಇನ್ನು ಇದಾದ ಬಳಿಕ 2012ರಿಂದ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಸಿಎಸ್‌ಕೆ ನಿಷೇಧಕ್ಕೊಳಗಾದಾಗ 2016 ಮತ್ತು 2017 ರ ಸೀಸನ್‌ಗಳಲ್ಲಿ ಗುಜರಾತ್ ಲಯನ್ಸ್‌ ಪರ ಆಡಿದ್ದರು. ಇದಾದ ಬಳಿಕ ಮತ್ತೆ ಸಿಎಸ್‌ಕೆ ತಂಡವನ್ನು ಕೂಡಿಕೊಂಡರು.

99
ಸಿಎಸ್‌ಕೆ ತೊರೆಯುತ್ತಾರಾ ಜಡ್ಡು?

ಇದೀಗ ರವೀಂದ್ರ ಜಡೇಜಾ ಇನ್‌ಸ್ಟಾಗ್ರಾಂ ಅಕೌಂಟ್ ನಾಪತ್ತೆಯಾಗಿರುವುದು, ಚೆನ್ನೈ ಸೂಪರ್ ಕಿಂಗ್ಸ್ ತೊರೆಯುವ ಸೂಚನೆ ಎನ್ನುವಂತಹ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

Read more Photos on
click me!

Recommended Stories