ಮುಂಬರುವ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ಮಾಲೀಕರು ಮತ್ತು ಹೊಸ ನಾಯಕನ ನೇತೃತ್ವದಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ. ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಐಪಿಎಲ್ 2026 ರಲ್ಲಿ ಆಡುವುದು ಕಷ್ಟ ಎನ್ನಲಾಗಿದೆ. ಏನಾಯಿತು ಎಂಬ ಪೂರ್ತಿ ವಿವರ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟಿದಾರ್ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಇಂಡಿಯಾ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಪಂದ್ಯದಲ್ಲಿ ಗಾಯಗೊಂಡಿದ್ದು, ಕನಿಷ್ಠ ನಾಲ್ಕು ತಿಂಗಳು ಆಟದಿಂದ ದೂರ ಉಳಿಯಲಿದ್ದಾರೆ.
25
2025ರಲ್ಲಿ ಇತಿಹಾಸ ಸೃಷ್ಟಿಸಿದ ರಜತ್ ಪಾಟಿದಾರ್!
31 ವರ್ಷದ ರಜತ್ ಪಾಟಿದಾರ್ ಕಳೆದ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದರು. ಐಪಿಎಲ್ 2025ರಲ್ಲಿ 312 ರನ್ ಗಳಿಸಿ, ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ದುಲೀಪ್ ಟ್ರೋಫಿಯಲ್ಲೂ ಟಾಪ್ ಸ್ಕೋರರ್ ಆಗಿದ್ದರು.
35
ಗಾಯದ ಕಾರಣ 4 ತಿಂಗಳ ವಿರಾಮದಲ್ಲಿ ರಜತ್ ಪಾಟಿದಾರ್
ಇಂಡಿಯಾ ಎ ಸರಣಿಯಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದ್ದಾಗ ಪಾಟಿದಾರ್ ಗಾಯಗೊಂಡರು. ಸ್ನಾಯು ಸೆಳೆತದ ಗಾಯ ಗಂಭೀರವಾಗಿದ್ದು, ನಾಲ್ಕು ತಿಂಗಳ ವಿಶ್ರಾಂತಿ ಪಡೆಯುವಂತೆ ತಜ್ಞರು ಸೂಚಿಸಿದ್ದಾರೆ. ಇದು ಐಪಿಎಲ್ 2026ರಲ್ಲಿ ಅವರ ಭಾಗವಹಿಸುವಿಕೆಯ ಮೇಲೆ ಅನುಮಾನ ಮೂಡಿಸಿದೆ.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಈಗ ಹೊಸ ನಾಯಕನ ಹುಡುಕಾಟದಲ್ಲಿದೆ. ರಜತ್ ಪಾಟಿದಾರ್ ಸಮಯಕ್ಕೆ ಸರಿಯಾಗಿ ಫಿಟ್ ಆಗದಿದ್ದರೆ, ಜಿತೇಶ್ ಶರ್ಮಾ ಅಥವಾ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
55
ಪಾಟಿದಾರ್ ಚೇತರಿಕೆ ಮೇಲೆ ಆರ್‌ಸಿಬಿಯ ಭರವಸೆ
ರಜತ್ ಪಾಟಿದಾರ್ ಸಂಪೂರ್ಣವಾಗಿ ಚೇತರಿಸಿಕೊಂಡರೆ, ಐಪಿಎಲ್ 2026ರಲ್ಲಿ ಅವರೇ ನಾಯಕರಾಗಿ ಮುಂದುವರಿಯುವ ಸಾಧ್ಯತೆಯಿದೆ. ತಂಡವು ಈಗ ಅವರ ಆರೋಗ್ಯ ಮತ್ತು ಚೇತರಿಕೆಯ ಅಪ್‌ಡೇಟ್‌ಗಾಗಿ ಕಾಯುತ್ತಿದೆ.