ಭಾರತದ ಸ್ಪಿನ್ ದಿಗ್ಗಜ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಕೊನೆಯ ಐಪಿಎಲ್ ಸೀಸನ್ ಅನ್ನು ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಲ್ಲಿ ಆಡಿದ್ರು.
ಭಾರತದ ಸ್ಪಿನ್ ದಿಗ್ಗಜ ಆರ್. ಅಶ್ವಿನ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. 2009ರಲ್ಲಿ ಸಿಎಸ್‌ಕೆ ತಂಡದಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಅಶ್ವಿನ್, 2025ರ ಸೀಸನ್‌ನೊಂದಿಗೆ ತಮ್ಮ ಐಪಿಎಲ್ ಪಯಣವನ್ನು ಮುಗಿಸಿದ್ದಾರೆ. ಈಗ ವಿಶ್ವದಾದ್ಯಂತದ ವಿವಿಧ ಲೀಗ್‌ಗಳಲ್ಲಿ ಆಡುವುದಾಗಿ ಹೇಳಿದ್ದಾರೆ.
ಅಶ್ವಿನ್ ತಮ್ಮ ನಿರ್ಧಾರವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ತಿಳಿಸಿದ್ದಾರೆ. “ಇಂದು ವಿಶೇಷ ದಿನ, ಹೊಸ ಆರಂಭ. ನನ್ನ ಐಪಿಎಲ್ ಪಯಣ ಇಲ್ಲಿಗೆ ಮುಕ್ತಾಯ. ಆದರೆ ವಿವಿಧ ಲೀಗ್‌ಗಳಲ್ಲಿ ಆಡುವ ಹೊಸ ಅಧ್ಯಾಯ ಶುರುವಾಗಿದೆ” ಅಂತ ಹೇಳಿದ್ದಾರೆ.
25
16 ಐಪಿಎಲ್ ಸೀಸನ್‌ಗಳನ್ನ ಆಡಿದ್ದ ಅಶ್ವಿನ್
ಅಶ್ವಿನ್ 16 ಐಪಿಎಲ್ ಸೀಸನ್‌ಗಳಲ್ಲಿ ಒಟ್ಟು 221 ಪಂದ್ಯಗಳನ್ನಾಡಿ 187 ವಿಕೆಟ್ ಪಡೆದಿದ್ದಾರೆ. ಅವರ ಬೌಲಿಂಗ್ ಸರಾಸರಿ 30.22 ಮತ್ತು ಎಕಾನಮಿ 7.20. ಅತ್ಯುತ್ತಮ ಬೌಲಿಂಗ್ 34/4.
ಬ್ಯಾಟ್ಸ್‌ಮನ್ ಆಗಿಯೂ ಅಶ್ವಿನ್ ೯೨ ಇನ್ನಿಂಗ್ಸ್‌ಗಳಲ್ಲಿ ೮೩೩ ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ೧೧೮.೧೫ ಮತ್ತು ಸರಾಸರಿ ೧೩.೦೧. ಅತ್ಯಧಿಕ ವೈಯಕ್ತಿಕ ಸ್ಕೋರ್ ೫೦ ರನ್.
35
ಚೆನ್ನೈನಿಂದ ಐಪಿಎಲ್ ಆರಂಭ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅಶ್ವಿನ್ 2010 ಮತ್ತು 2011ರ ಐಪಿಎಲ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2010ರ ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಪ್ಲೇಯರ್ ಆಫ್ ದಿ ಸೀರೀಸ್ ಆಗಿದ್ದರು. 2011ರ ಐಪಿಎಲ್ ಫೈನಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಕ್ರಿಸ್ ಗೇಲ್‌ರನ್ನ ಔಟ್ ಮಾಡಿದ್ದರು. 2014ರಲ್ಲಿ ಮತ್ತೊಮ್ಮೆ ಚಾಂಪಿಯನ್ಸ್ ಲೀಗ್ ಗೆದ್ದರು.
2025ರಲ್ಲಿ ಸಿಎಸ್‌ಕೆ 9.75 ಕೋಟಿ ರೂ.ಗಳಿಗೆ ಅಶ್ವಿನ್‌ರನ್ನ ಮತ್ತೆ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ 9 ಪಂದ್ಯಗಳಲ್ಲಿ ಕೇವಲ 7 ವಿಕೆಟ್ ಪಡೆದಿದ್ದರು.
ಸಿಎಸ್‌ಕೆ ಜೊತೆಗೆ ರೈಸಿಂಗ್ ಪುಣೆ ಸೂಪರ್ ಜೈಂಟ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಗೂ ಅಶ್ವಿನ್ ಆಡಿದ್ದಾರೆ. 2018ರಲ್ಲಿ ಪಂಜಾಬ್ ತಂಡದ ನಾಯಕರಾಗಿದ್ದರು. ರಾಜಸ್ಥಾನ್‌ನಲ್ಲಿ ಚಹಲ್ ಜೊತೆ ಉತ್ತಮ ಸ್ಪಿನ್ ಜೋಡಿ ರಚಿಸಿದ್ದರು. ಐಪಿಎಲ್‌ನಲ್ಲಿ ಒಟ್ಟು 187 ವಿಕೆಟ್ ಪಡೆದು ಟಾಪ್ 5 ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.
55
ವಿದೇಶಿ ಲೀಗ್‌ಗಳತ್ತ ಅಶ್ವಿನ್
ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕಾದರೆ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬೇಕು. ಈ ನಿಯಮದಂತೆ ಅಶ್ವಿನ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಬಿಗ್ ಬ್ಯಾಷ್, SA20, ILT20, ಹಂಡ್ರೆಡ್ ಮತ್ತು ಸಿಪಿಎಲ್‌ನಂತಹ ಟೂರ್ನಿಗಳಲ್ಲಿ ಆಡಬಹುದು.
“ಫ್ರಾಂಚೈಸಿಗಳು, ಐಪಿಎಲ್ ಮತ್ತು ಬಿಸಿಸಿಐಗೆ ಧನ್ಯವಾದಗಳು. ಮುಂದಿನ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ” ಅಂತ ಅಶ್ವಿನ್ ಹೇಳಿದ್ದಾರೆ.