ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ 22 ರನ್ ಗಳಿಸಿ ಸಂಚಲನ ಮೂಡಿಸಿದ್ದಾರೆ. ಆರ್‌ಸಿಬಿ ತಂಡದಲ್ಲೂ ಆಡಿರುವ ಶೆಫರ್ಡ್ ಈ ಸಾಧನೆಯಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025) ನಲ್ಲಿ ಅಪರೂಪದ ಘಟನೆ ನಡೆದಿದೆ. ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಡಿದ ವೆಸ್ಟ್ ಇಂಡೀಸ್ ಆಲ್‌ರೌಂಡರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್ ರೊಮಾರಿಯೊ ಶೆಫರ್ಡ್ ಒಂದೇ ಚೆಂಡಿನಲ್ಲಿ 22 ರನ್ ಗಳಿಸಿದ್ದಾರೆ. ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಅಪರೂಪದ ಸಾಧನೆ ಮಾಡಿದ್ದಾರೆ.
25
ಒಂದೇ ಬಾಲ್‌ಗೆ 22 ರನ್ ಹೇಗೆ ಬಂತು?
15ನೇ ಓವರ್‌ನಲ್ಲಿ ಬೌಲರ್ ಓಶೇನ್ ಥಾಮಸ್ ಎಸೆದ ಮೂರನೇ ಚೆಂಡು ನೋ ಬಾಲ್ ಆಗಿತ್ತು. ಶೆಫರ್ಡ್ ಆ ಚೆಂಡಿಗೆ ರನ್ ಗಳಿಸಲಿಲ್ಲ. ನಂತರ ಫ್ರೀ ಹಿಟ್ ವೈಡ್ ಆಯಿತು. ಮುಂದಿನ ಚೆಂಡು ಕೂಡ ನೋ ಬಾಲ್ ಆಗಿ ಶೆಫರ್ಡ್ ಸಿಕ್ಸರ್ ಬಾರಿಸಿದರು. ಮತ್ತೊಂದು ನೋ ಬಾಲ್‌ನಲ್ಲಿ ಬೌಂಡರಿ ಬಾರಿಸಿದ ಶೆಫರ್ಡ್, ಕೊನೆಯ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು. ಹೀಗೆ ಒಂದೇ ಚೆಂಡಿನಲ್ಲಿ 22 ರನ್ ಬಂದವು.
35
ಶೆಫರ್ಡ್‌ರ ಮಿಂಚಿನ ಇನ್ನಿಂಗ್ಸ್!
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರೊಮಾರಿಯೊ ಶೆಫರ್ಡ್ 34 ಎಸೆತಗಳಲ್ಲಿ 73 ರನ್ ಗಳಿಸಿದರು. ಇದರಲ್ಲಿ ಏಳು ಸಿಕ್ಸರ್‌ಗಳಿದ್ದವು. ಅವರ ಪವರ್ ಹಿಟ್ಟಿಂಗ್‌ನಿಂದ ವಾರಿಯರ್ಸ್ ತಂಡದ ಸ್ಕೋರ್ 200 ದಾಟಿತು. ಆದರೆ ಈ ಅದ್ಭುತ ಇನ್ನಿಂಗ್ಸ್ ಕೂಡ ಗೆಲುವು ತಂದುಕೊಡಲಿಲ್ಲ.
ಗಯಾನಾ ಅಮೆಜಾನ್ ವಾರಿಯರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ಇಫ್ತಿಕಾರ್ ಅಹ್ಮದ್ 33, ಶಾಯ್ ಹೋಪ್ 23, ಬೆನ್ ಮೆಕ್‌ಡೆರ್ಮಾಟ್ 30 ರನ್ ಗಳಿಸಿದರು. ಆದರೆ 203 ರನ್‌ಗಳ ಗುರಿಯನ್ನು ಸೇಂಟ್ ಲೂಸಿಯಾ ಕಿಂಗ್ಸ್ 18.1 ಓವರ್‌ಗಳಲ್ಲಿಯೇ ಚೇಸ್ ಮಾಡಿತು.
55
ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ
ಒಂದೇ ಚೆಂಡಿನಲ್ಲಿ 22 ರನ್ ಗಳಿಸುವುದು ಕ್ರಿಕೆಟ್‌ನಲ್ಲಿ ಅತ್ಯಂತ ಅಪರೂಪದ ಸಾಧನೆ. ಇದು ಶೆಫರ್ಡ್ ಅವರನ್ನು ಪವರ್ ಹಿಟ್ಟರ್ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಐಪಿಎಲ್ 2025 ರಲ್ಲಿ ಆರ್‌ಸಿಬಿ ಪರ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸಂಚಲನ ಮೂಡಿಸಿದ್ದರು. ಈಗ ಸಿಪಿಎಲ್‌ನಲ್ಲೂ ತಮ್ಮ ಹಿಟ್ಟಿಂಗ್‌ನಿಂದ ಮತ್ತೊಮ್ಮೆ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.