ಬೆಂಗಳೂರು: ಪ್ಲೇಆಫ್‌ನಲ್ಲಿ ಇರೋದು ಒಂದೇ ಒಂದು ಸ್ಪಾಟ್. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಬೇಜಾರ್ ಆಗ್ಬೇಡಿ. ನಿಮ್ಮ ಕ್ಯಾಲ್ಕುಲೇಟರ್‌ಗಳನ್ನು ಹೊರತೆಗೆಯಿರಿ. ಯಾಕಂದ್ರೆ, CSK ಪ್ಲೇಆಫ್‌ಗೆ ಹೋಗೋ ಚಾನ್ಸ್ ಇನ್ನೂ ಮುಗಿದಿಲ್ಲ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿವೆ.
26
ಇನ್ನೊಂದು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಫೈಟ್
ಇನ್ನೊಂದು ಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಹೀಗೆ ಈ ಐದು ತಂಡಗಳ ನಡುವೆ ಪೈಪೋಟಿ ಇದೆ. ಇನ್ನು ಟೂರ್ನಿಯಲ್ಲಿ ಏಳು ಸೋಲು ಕಂಡಿರುವ ಸಿಎಸ್‌ಕೆಗೆ ಈಗಲೂ ಪ್ಲೇ ಆಫ್‌ಗೇರುವ ಅವಕಾಶವಿದೆ.
36
ಮಾಡು ಇಲ್ಲವೇ ಮಡಿ ಮ್ಯಾಚ್‌ಗೆ ಸಜ್ಜಾದ ಸಿಎಸ್‌ಕೆ
ಚೆನ್ನೈ ತಂಡಕ್ಕೆ ಈಗ ಒಂದು ಮ್ಯಾಚ್ ಬಾಕಿ ಇದೆ, ಅವರ ಖಾತೆಯಲ್ಲಿ 12 ಪಾಯಿಂಟ್ಸ್ ಇದೆ. ಋತುರಾಜ್ ಗಾಯಕ್ವಾಡ್ ನಾಯಕತ್ವದ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಪಂದ್ಯ ಆಡಲಿದೆ. ಈ ಮ್ಯಾಚ್ ಗೆದ್ದರೆ ಮಾತ್ರ CSK ಪಾಯಿಂಟ್ಸ್ 14ಕ್ಕೆ ಏರುತ್ತೆ. ಒಂದು ವೇಳೆ ಸೋತರೆ, ಟೂರ್ನಿಯಿಂದ ಹೊರಬೀಳೋದು ಪಕ್ಕಾ.
ಇಲ್ಲಿಂದ ಮುಂದೆ ಬೇರೆ ತಂಡಗಳ ಫಲಿತಾಂಶ ಕೂಡ ಚೆನ್ನೈ ಪಾಲಿಗೆ ಮುಖ್ಯವಾಗುತ್ತೆ. ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ - ಈ ನಾಲ್ಕು ತಂಡಗಳು ಚೆನ್ನೈಗಿಂತ ಹೆಚ್ಚು ಅಥವಾ ಸಮನಾದ ಪಾಯಿಂಟ್ಸ್ ಪಡೆಯುವ ಸಾಧ್ಯತೆ ಇದೆ.
56
CSK ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ:
ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳು ತಮ್ಮ ಉಳಿದ ಎಲ್ಲಾ ಮ್ಯಾಚ್‌ಗಳನ್ನು ಸೋಲಬೇಕು. ಕೋಲ್ಕತ್ತಾ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬೇಕು. ಹೀಗಾದ್ರೆ, ಕೋಲ್ಕತ್ತಾ ಮತ್ತು ಪಂಜಾಬ್ 13 ಪಾಯಿಂಟ್ಸ್‌ನೊಂದಿಗೆ ಸೀಸನ್ ಮುಗಿಸಿದರೆ, ರಾಜಸ್ಥಾನ್ ಮತ್ತು ಡೆಲ್ಲಿ 12 ಪಾಯಿಂಟ್ಸ್‌ನಲ್ಲೇ ಉಳಿಯುತ್ತವೆ.
66
ಸಿಎಸ್‌ಕೆಗೆ ಈಗಲೂ ಇದೆ ಪ್ಲೇ ಆಫ್‌ಗೇರುವ ಚಾನ್ಸ್
ಆಗ, 14 ಪಾಯಿಂಟ್ಸ್‌ನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಸುಲಭವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಡಬಹುದು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ವಿರುದ್ಧ ಗೆದ್ದರೂ, ಉತ್ತಮ ನೆಟ್ ರನ್‌ರೇಟ್ CSK ಕೈಹಿಡಿಯುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.