ಬರೋಬ್ಬರಿ 11,956 ಕೋಟಿ ರು.ಗೆ Rajasthan Royals ಮಾಲೀಕತ್ವ ಹರಾಜು? ಖರೀದಿಸಲು ಒಲವು ತೋರಿವೆ ಈ ಸಂಸ್ಥೆಗಳು!

Published : Jan 29, 2026, 02:31 PM IST

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಕೆಲವು ತಂಡಗಳ ಮಾಲೀಕತ್ವ ಬದಲಾಗುವ ಸಾಧ್ಯತೆಯಿದೆ. ಈ ಪೈಕಿ ರಾಜಸ್ಥಾನ ರಾಯಲ್ಸ್‌ ಮಾಲೀಕತ್ವ ದಾಖಲೆಯ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ 

PREV
16
ಆರ್‌ಸಿಬಿಗೂ ಮೊದಲೇ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವದ ಹರಾಜು?

ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಮಾಲೀಕತ್ವ ಯಾರ ಪಾಲಾಗಲಿದೆ ಎನ್ನುವ ಕುತೂಹಲಗಳ ಜೋರಾಗಿದೆ. ಹೀಗಿರುವಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಮಾಲಿಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

26
11,956 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಸೇಲ್?

ಹೌದು, ಚೊಚ್ಚಲ ಆವೃತ್ತಿಯ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತಂಡದ ಖರೀದಿಗಾಗಿ ಬರೋಬ್ಬರಿ 1.3 ಬಿಲಿಯನ್‌ ಡಾಲರ್‌(11,956 ಕೋಟಿ ರು.) ಮೌಲ್ಯದ ಬಿಡ್‌ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ. ಒಂದು ವೇಳೆ ಅದು ನಿಜವಾದರೆ ರಾಜಸ್ಥಾನ ರಾಯಲ್ಸ್‌ ತಂಡ ಐಪಿಎಲ್‌ನ ಮೊದಲ ಬಿಲಿಯೇನರ್‌ ತಂಡ ಎನಿಸಿಕೊಳ್ಳಲಿದೆ.

36
ಎಮರ್ಜಿಂಗ್‌ ಮೀಡಿಯಾ ವೆಂಚರ್ಸ್‌ ಒಡೆತನದಲ್ಲಿದೆ ರಾಜಸ್ಥಾನ ರಾಯಲ್ಸ್ ತಂಡ

ರಾಜಸ್ಥಾನ ತಂಡ ಸದ್ಯ ಎಮರ್ಜಿಂಗ್‌ ಮೀಡಿಯಾ ವೆಂಚರ್ಸ್‌ ಒಡೆತನದಲ್ಲಿದೆ. ಈ ನಡುವೆ ಹಲವು ಸಂಸ್ಥೆಗಳು ಖರೀದಿಗೆ ಮುಂದೆ ಬಂದಿದ್ದು, ಕಲ್ ಸೋಮಾನಿ, ಟೈಮ್ಸ್‌ ಇಂಟರ್ನೆಟ್‌, ಬ್ಲಾಕ್ ಸ್ಟೋನ್‌ ಇಂಕ್‌, ಕಾರ್ಲಿಲ್‌ ಗ್ರೂಪ್‌ ಇಂಕ್‌ ಒಲವು ತೋರಿದೆ ಎನ್ನಲಾಗಿದೆ. ತಂಡದ ಆರಂಭಿಕ ಬಿಡ್‌ ಮೊತ್ತ 9209 ಕೋಟಿ ರು. ಎಂದು ಹೇಳಲಾಗುತ್ತಿದೆ.

46
ಆರ್‌ಸಿಬಿ ತಂಡದ ಮಾಲೀಕತ್ವ ಪಡೆಯಲು ಹಲವು ಉದ್ಯಮಿಗಳು ಆಸಕ್ತಿ

ಕಳೆದ ಬಾರಿ ಚಾಂಪಿಯನ್‌ ಆಗಿದ್ದ ಆರ್‌ಸಿಬಿ ತಂಡ ಮಾರಾಟವಾಗುವ ಬಗ್ಗೆ ಈಗಾಗಲೇ ಸುದ್ದಿ ಹರಿದಾಡುತ್ತಿದೆ. ಇದಕ್ಕಾಗಿ ಈಗಾಗಲೇ ಬಿಡ್‌ ಕೂಡಾ ಆಹ್ವಾನಿಸಲಾಗಿದೆ. ಹಲವು ಉದ್ಯಮಿಗಳು ಆರ್‌ಸಿಬಿ ತಂಡವನ್ನು ಖರೀದಿಸಲು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ

56
ಆರ್‌ಸಿಬಿಗೂ ಮೊದಲೇ ರಾಜಸ್ಥಾನ ರಾಯಲ್ಸ್ ಮಾಲೀಕತ್ವ ಸೇಲ್?

ಇದರ ನಡುವೆಯೇ ರಾಜಸ್ಥಾನ ರಾಯಲ್ಸ್‌ ತಂಡದ ಖರೀದಿಗೆ ಬಿಡ್‌ ಸಲ್ಲಿಕೆಯಾಗಿರುವ ಬಗ್ಗೆ ವರದಿಯಾಗುತ್ತಿದೆ. ಇದರ ಪ್ರಕಾರ, ಆರ್‌ಸಿಬಿಗೂ ಮುನ್ನ ರಾಜಸ್ಥಾನ ರಾಯಲ್ಸ್‌ ತಂಡದ ಮಾಲಿಕತ್ವ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

66
ಮುಂಬರುವ ಐಪಿಎಲ್ ಟೂರ್ನಿಗೆ ಸಜ್ಜಾಗಿರುವ ರಾಜಸ್ಥಾನ ರಾಯಲ್ಸ್‌

ರಾಜಸ್ಥಾನ ರಾಯಲ್ಸ್ ತಂಡವು 2008ರಲ್ಲಿ ಐಪಿಎಲ್ ಟ್ರೋಫಿ ಜಯಿಸಿದ ಬಳಿಕ ಮತ್ತೆ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಫ್ರಾಂಚೈಸಿಯು ಸಾಕಷ್ಟು ಅಳೆದುತೂಗಿ ಆಟಗಾರರನ್ನು ಖರೀದಿಸಿದ್ದು, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories