ಫಲಿಸಿತು ರಾಹುಲ್ ದ್ರಾವಿಡ್ ಪ್ರಾರ್ಥನೆ; ಅಂಜನಾದ್ರಿ ಹನುಮನ ದರ್ಶನದ ಬೆನ್ನಲ್ಲೇ ಸ್ಪೋಟಕ ಅರ್ಧಶತಕ ಚಚ್ಚಿದ ಅನ್ವಯ್!

Published : Jul 07, 2026, 10:42 AM IST

ಬೆಂಗಳೂರು: ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ತಮ್ಮ ಮಗನ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿ ಎನ್ನುವ ಸದುದ್ದೇಶದಿಂದ ಯಂತ್ರೋದ್ಧಾರಕ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕಿರಿಯ ಪುತ್ರ ಅನ್ವಯ್ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. 

PREV
16
ತಂದೆಗೆ ತಕ್ಕ ಮಗ

ಭಾರತ ಕ್ರಿಕೆಟ್ ತಂಡದ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ತಮ್ಮ ಸರಳ ನಡೆ ನುಡಿಯ ಮೂಲಕ ಗಮನ ಸೆಳೆದಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಸಂಕಷ್ಟದ ಸಂದರ್ಭದಲ್ಲಿ ಕ್ರೀಸ್‌ನಲ್ಲಿ ಏಕಾಂಗಿಯಾಗಿ ಗೋಡೆಯಂತೆ ನಿಂತು ದ್ರಾವಿಡ್ ತಂಡವನ್ನು ಅಪಾಯದಿಂದ ಪಾರು ಮಾಡಿದ ಹಲವು ಉದಾಹರಣೆಗಳಿವೆ. ಇದೀಗ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕೂಡಾ ತಂದೆಯ ಹಾದಿಯಲ್ಲಿಯೇ ಅಂಬೆಗಾಲಿಡುತ್ತಿದ್ದಾರೆ.

26
ಹಂಪಿ, ಅಂಜನಾದ್ರಿಗೆ ಭೇಟಿ ನೀಡಿದ ರಾಹುಲ್ ದ್ರಾವಿಡ್ ದಂಪತಿ

ಹೌದು, ರಾಹುಲ್ ದ್ರಾವಿಡ್ ಇತ್ತೀಚೆಗಷ್ಟೇ ತಮ್ಮ ಪತ್ನಿ ವಿಜೇತ ಪಂಡರ್ಕರ್ ಅವರ ಜತೆ ಐತಿಹಾಸಿಕ ಹಂಪಿ ಹಾಗೂ ಪುರಾಣ ಪ್ರಸಿದ್ದ ಅಂಜನಾದ್ರಿಯ ಬೆಟ್ಟಕ್ಕೆ ಭೇಟಿ ನೀಡಿ, ತಮ್ಮ ಮಕ್ಕಳ ಕ್ರಿಕೆಟ್ ಬದುಕು ಉಜ್ವಲವಾಗಲಿ ಎನ್ನುವ ಉದ್ದೇಶದಿಂದ ವಿಶೇಷ ಪೂಜೆ ಸಲ್ಲಿಸಿದ್ದರು. ಇನ್ನು ಈ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದರೆ ಮನಸ್ಸಿಗೆ ಶಾಂತಿ, ಧೈರ್ಯ, ಏಕಾಗ್ರತೆ ಹಾಗೂ ಅಡೆತಡೆ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

36
ಚೊಚ್ಚಲ ಅಂಡರ್-19 ಅರ್ಧಶತಕ ಚಚ್ಚಿದ ದ್ರಾವಿಡ್ ಕಿರಿಯ ಪುತ್ರ

ಇದೀಗ ರಾಹುಲ್ ದ್ರಾವಿಡ್ ಪ್ರಾರ್ಥನೆ ಫಲಿಸಿದಂತೆ ಭಾಸವಾಗುತ್ತಿದೆ. ಏಕೆಂದರೆ, ರಾಹುಲ್ ದ್ರಾವಿಡ್ ತಮ್ಮ ಪತ್ನಿ ಸಮೇತ ಯಂತ್ರೋದ್ಧಾರಕ ಹನುಮನನ್ನು ಪ್ರಾರ್ಥಿಸಿದ ಮೂರು ದಿನಗಳೊಳಗಾಗಿ ತಮ್ಮ ಕಿರಿಯ ಪುತ್ರ ಅನ್ವಯ್ ದ್ರಾವಿಡ್, ಅಂಡರ್-19 ಕ್ರಿಕೆಟ್‌ನಲ್ಲಿ ಭಾರತ ಪರ ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

46
ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾದ ಅನ್ವಯ್ ದ್ರಾವಿಡ್

ಹೌದು, ಶ್ರೀಲಂಕಾ ಅಂಡರ್-19 ತಂಡದ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಂಡರ್-19 ತಂಡವು 18.1 ಓವರ್‌ಗಳಲ್ಲಿ ಕೇವಲ 81 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದ ಅನ್ವಯ್ ದ್ರಾವಿಡ್, ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು.

56
ಸ್ಪೋಟಕ ಅರ್ಧಶತಕ ಚಚ್ಚಿದ ಅನ್ವಯ್ ದ್ರಾವಿಡ್

ಅನ್ವಯ್ ದ್ರಾವಿಡ್ ಕೇವಲ 67 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 87 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿ ವಿಕೆಟ್ ಒಪ್ಪಿಸಿದರು. ಇದು ಅನ್ವಯ್ ದ್ರಾವಿಡ್ ಅಂಡರ್-19 ಕ್ರಿಕೆಟ್‌ನಲ್ಲಿ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇದಷ್ಟೇ ಅಲ್ಲದೇ ಐದನೇ ವಿಕೆಟ್‌ಗೆ ಜತೆಯಾದ ಅನ್ವಯ್ ದ್ರಾವಿಡ್ ಹಾಗೂ ಅರ್ಜುನ್ ರಜಪೂತ್ ಸೇರಿ ಆಕರ್ಷಕ 144 ರನ್‌ಗಳ ಅಮೂಲ್ಯ ಜತೆಯಾಟವಾಡಿತು. ಈ ಜೋಡಿ ಭಾರತ ತಂಡವನ್ನು 81/4 ರಿಂದ 226/5 ತನಕ ತಂದು ನಿಲ್ಲಿಸಿತು.

66
ದ್ರಾವಿಡ್‌ ಪುತ್ರ ಅನ್ವಯ್‌ 87 ರನ್‌, ಆದ್ರೂ ಭಾರತ ಅಂಡರ್‌-19ಗೆ ಸೋಲು

ರಾಹುಲ್‌ ದ್ರಾವಿಡ್‌ ಪುತ್ರ ಅನ್ವಯ್‌ ದ್ರಾವಿಡ್‌ ಅರ್ಧಶತಕ(67 ಎಸೆತಕ್ಕೆ 87) ಬಾರಿಸಿದರೂ ಶ್ರೀಲಂಕಾ ವಿರುದ್ಧ ಭಾರತ ಅಂಡರ್‌-19 ತಂಡ 2ನೇ ಯೂತ್‌ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದೆ. ಇದರೊಂದಿಗೆ ಸರಣಿ 1-1 ಸಮವಾಗಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ 47.2 ಓವರ್‌ಗಳಲ್ಲಿ 285 ರನ್‌ಗೆ ಆಲೌಟಾಯಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ 48 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories