ಬೆಂಗಳೂರು: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ದಾಖಲೆಯ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಆಸೀಸ್ ಐಸಿಸಿ ಟೂರ್ನಿಯಲ್ಲಿ 24ನೇ ಟ್ರೋಫಿ. ಇನ್ನು ಭಾರತ ಎಷ್ಟು ಐಸಿಸಿ ಟ್ರೋಫಿ ಗೆದ್ದಿದೆ ಎನ್ನುವುದನ್ನು ನೋಡೋಣ ಬನ್ನಿ.
ಐಸಿಸಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರದರ್ಶನ ಉಳಿದೆಲ್ಲಾ ತಂಡಗಳಿಗಿಂತ ಅತ್ಯುತ್ತಮವಾಗಿರುತ್ತದೆ. ಇದೀಗ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಕಾಂಗರೂ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆಸ್ಟ್ರೇಲಿಯಾ ಪುರುಷರ ತಂಡವೇ ಇರಲಿ, ಮಹಿಳಾ ತಂಡವೇ ಇರಲಿ ಐಸಿಸಿ ಟೂರ್ನಿಯಲ್ಲಿ ಕಪ್ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತವೆ. ಬನ್ನಿ ನಾವಿಂದು ಐಸಿಸಿ ಟೂರ್ನಿಯಲ್ಲಿ ಅತಿಹೆಚ್ಚು ಟ್ರೋಫಿ ಗೆದ್ದ ಐದು ತಂಡಗಳು ಯಾವುವು ಎನ್ನುವುದನ್ನು ನೋಡೋಣ.
26
1. ಆಸ್ಟ್ರೇಲಿಯಾ: 24 ಟ್ರೋಫಿ
ಐಸಿಸಿ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವೆಂದರೆ ಅದು ಆಸ್ಟ್ರೇಲಿಯಾ. ಕಾಂಗರೂ ಪಡೆ ಇದುವರೆಗೂ ಒಟ್ಟು 24 ಐಸಿಸಿ ಟ್ರೋಫಿಗಳನ್ನು ಜಯಿಸಿದೆ. ಆಸ್ಟ್ರೇಲಿಯಾ ಪುರುಷರ ಹಾಗೂ ಮಹಿಳಾ ತಂಡವು ಒಟ್ಟು 13 ಏಕದಿನ ವಿಶ್ವಕಪ್ ಜಯಿಸಿವೆ. ಇನ್ನು 8 ಟಿ20 ವಿಶ್ವಕಪ್ ಜಯಿಸಿದೆ. ಇದಷ್ಟೇ ಅಲ್ಲದೇ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಹಾಗೂ ಒಮ್ಮೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿದೆ.
36
2. ಭಾರತ: 9 ಟ್ರೋಫಿ
ಭಾರತ ಕ್ರಿಕೆಟ್ ತಂಡವು ಇದುವರೆಗೂ ಒಟ್ಟು 9 ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಭಾರತ ಪುರುಷರ ತಂಡ ಹಾಗೂ ಮಹಿಳಾ ತಂಡ ಸೇರಿ ಒಟ್ಟು ಮೂರು ಬಾರಿ ಐಸಿಸಿ ಏಕದಿನ ವಿಶ್ವಕಪ್ ಜಯಿಸಿದೆ. ಇದರಷ್ಟೇ ಅಲ್ಲದೇ ಮೂರು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಮೂರು ಬಾರಿ ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿದೆ.
ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್ ಇದುವರೆಗೂ ಎಂಟು ಬಾರಿ ಐಸಿಸಿ ಟ್ರೋಫಿ ಜಯಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಪುರುಷರ ತಂಡ ಒಮ್ಮೆ ಐಸಿಸಿ ಏಕದಿನ ವಿಶ್ವಕಪ್, ಎರಡು ಬಾರಿ ಟಿ20 ಜಯಿಸಿದೆ. ಇನ್ನು ಮಹಿಳಾ ತಂಡ ನಾಲ್ಕು ಬಾರಿ ಏಕದಿನ ವಿಶ್ವಕಪ್ ಹಾಗೂ ಒಮ್ಮೆ ಟಿ20 ವಿಶ್ವಕಪ್ ಗೆದ್ದು ಬೀಗಿದೆ.
56
4. ವೆಸ್ಟ್ ಇಂಡೀಸ್: 6 ಟ್ರೋಫಿ
ವೆಸ್ಟ್ ಇಂಡೀಸ್ ತಂಡವು ಇದುವರೆಗೂ ಆರು ಬಾರಿ ಐಸಿಸಿ ಟ್ರೋಫಿ ಜಯಿಸಿದೆ. ವೆಸ್ಟ್ ಇಂಡೀಸ್ ಪುರುಷರ ತಂಡವು ಎರಡು ಬಾರಿ ಏಕದಿನ ವಿಶ್ವಕಪ್ ಮತ್ತೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಇನ್ನು ಒಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದೆ. ಇನ್ನೊಂದೆಡೆ ವೆಸ್ಟ್ ಇಂಡೀಸ್ ಮಹಿಳಾ ತಂಡವು 2016ರಲ್ಲಿ ಒಮ್ಮೆ ಐಸಿಸಿ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿದೆ.
66
5. ನ್ಯೂಜಿಲೆಂಡ್: 4 ಟ್ರೋಫಿ
ನ್ಯೂಜಿಲೆಂಡ್ ತಂಡವು ಒಟ್ಟು ನಾಲ್ಕು ಬಾರಿ ಐಸಿಸಿ ಟ್ರೋಫಿ ಗೆದ್ದು ಬೀಗಿದೆ. ಕಿವೀಸ್ ಮಹಿಳಾ ತಂಡವು ಒಮ್ಮೆ ಏಕದಿನ ವಿಶ್ವಕಪ್ ಹಾಗೂ ಒಮ್ಮೆ ಟಿ20 ವಿಶ್ವಕಪ್ ಜಯಿಸಿದೆ. ಇನ್ನು ನ್ಯೂಜಿಲೆಂಡ್ ಪುರುಷರ ತಂಡವು ಒಮ್ಮೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.