IPL 2026: ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!

Published : May 24, 2026, 09:01 AM IST

ಲಖನೌ: ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ಎದುರು ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಪ್ಲೇ ಆಫ್ ಕನಸು ಜೀವಂತವಾಗಿಟ್ಟುಕೊಂಡರೇ, ಮತ್ತೊಂದು ತಂಡ ಪ್ಲೇ ಆಫ್‌ ರೇಸ್‌ನಿಂದ ಔಟ್ ಆಗಿದೆ. 

PREV
16
ಪ್ಲೇ ಆಫ್ ಕನಸು ಜೀವಂತವಾಗಿಟ್ಟುಕೊಂಡ ಪಂಜಾಬ್ ಕಿಂಗ್ಸ್

ಸತತ 6 ಪಂದ್ಯಗಳಲ್ಲಿ ಸೋತಿದ್ದ ಪಂಜಾಬ್‌ ಕಿಂಗ್ಸ್‌ ಶನಿವಾರ ಲಖನೌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ ಗೆಲುವು ಸಾಧಿಸಿದ್ದು, ಈ ಬಾರಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡಿದೆ. ತಂಡ 14 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 15 ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

26
ರಾಜಸ್ಥಾನ ರಾಯಲ್ಸ್ ಭವಿಷ್ಯ ಇಂದು ನಿರ್ಧಾರ

ಆದರೆ ತಂಡದ ಪ್ಲೇ-ಆಫ್‌ ಭವಿಷ್ಯ ಭಾನುವಾರ ರಾಜಸ್ಥಾನ ರಾಯಲ್ಸ್‌ ಪಂದ್ಯದ ಮೂಲಕ ನಿರ್ಧಾರವಾಗಲಿದೆ. ಒಂದು ವೇಳೆ ರಾಜಸ್ಥಾನ ರಾಯಲ್ಸ್ ತಂಡವು ಇಂದು ಮುಂಬೈ ಇಂಡಿಯನ್ಸ್ ಎದುರು ಸೋತರೇ, ಶ್ರೇಯಸ್ ಅಯ್ಯರ್ ಪಡೆಯ ಪ್ಲೇ ಆಫ್ ಹಾದಿ ಸುಗಮವಾಗಲಿದೆ.

36
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತ ಔಟ್

ಇನ್ನು ಲಖನೌ ಸೂಪರ್ ಜೈಂಟ್ಸ್‌ ಎದುರು ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ, ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿತು.

46
ಇಂದು ಡೆಲ್ಲಿ ಗೆದ್ದರೂ ಯಾವುದೇ ಪರಿಣಾಮವಾಗುವುದಿಲ್ಲ

ಡೆಲ್ಲಿ ಕ್ಯಾಪಿಟಲ್ಸ್ ತಂಡವು 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲು ಸಹಿತ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದು ನಡೆಯಲಿರುವ ಕೆಕೆಆರ್ ಎದುರಿನ ಮ್ಯಾಚ್ ಗೆದ್ದರೂ ಡೆಲ್ಲಿ ಬಳಿ 14 ಅಂಕಗಳಾಗಲಿದೆ.

56
ಇನ್ನು ಲಖನೌ-ಪಂಜಾಬ್ ಮ್ಯಾಚ್ ಬಗ್ಗೆ ಹೇಳುವುದಾದದರೇ..

ಮೊದಲು ಬ್ಯಾಟ್‌ ಮಾಡಿದ ಲಖನೌ 6 ವಿಕೆಟ್‌ಗೆ 196 ರನ್‌ ಗಳಿಸಿತು. ಜೋಶ್‌ ಇಂಗ್ಲಿಸ್‌ 72, ಆಯುಶ್‌ ಬದೋನಿ 18 ಎಸೆತಕ್ಕೆ 43 ರನ್‌ ಸಿಡಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

66
ನಾಯಕನ ಆಟವಾಡಿ ತಂಡವನ್ನು ಗೆಲ್ಲಿಸಿದ ಪಂಜಾಬ್ ಕಿಂಗ್ಸ್‌

ದೊಡ್ಡ ಗುರಿಯನ್ನು ಪಂಜಾಬ್‌ ತಂಡ 18 ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿತು. ಪ್ರಭ್‌ಸಿಮ್ರನ್‌ 69 ರನ್‌ಗೆ ಔಟಾದರೂ, ಭರ್ಜರಿ ಶತಕ ಸಿಡಿಸಿದ ನಾಯಕ ಶ್ರೇಯಸ್‌ ಅಯ್ಯರ್‌(51 ಎಸೆತಕ್ಕೆ ಔಟಾಗದೆ 101) ತಂಡವನ್ನು ಗೆಲ್ಲಿಸಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories