ಆರ್‌ಸಿಬಿ ಸ್ಫೋಟಕ ಬ್ಯಾಟರ್ ವೆಂಕಟೇಶ್ ಐಯ್ಯರ್ ದಿಢೀರ್ ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ ಭೇಟಿ ಮಾಡಿದ್ದಾರೆ. ಈ ವೇಳೆ ಅಲ್ಲು ಕುಟುಂಬಕ್ಕೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ. ಐಯ್ಯರ್ ಕೊಟ್ಟ ಗಿಫ್ಟ್ ಏನು?
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಮುಗ್ಗರಿಸಿದರೂ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಪ್ರದರ್ಶನಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿಗೆ ಅತ್ಯುತ್ತಮ ಆರಂಭ ನೀಡಿದ ವೆಂಕಟೇಶ್ ಐಯ್ಯರ್ ಇದೀಗ ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ ಭೇಟಿ ಮಾಡಿದ್ದಾರೆ.
25
ಅಲ್ಲು ಅರ್ಜುನ್‌ಗೆ ಭರ್ಜರಿ ಗಿಫ್ಟ್
ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯದ ಬಳಿಕ ವೆಂಕಟೇಶ್ ಅಯ್ಯರ್ ಅಲ್ಲು ಅರ್ಜುನ್ ಭೇಟಿ ಮಾಡಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಪುತ್ರನಿಗೆ ಸಹಿ ಮಾಡಿದ ಆರ್‌ಸಿಬಿ ಜರ್ಸಿಯನ್ನು ಉಡುಗೊರೆಯಾಗಿ ವೆಂಕಟೇಶ್ ಐಯ್ಯರ್ ನೀಡಿದ್ದಾರೆ.
35
ಸಂತಸ ಹಂಚಿಕೊಂಡ ಅಲ್ಲು ಅರ್ಜುನ್
ವೆಂಕಟೇಶ್ ಐಯ್ಯರ್ ಭೇಟಿ ಭೇಟಿ ಕುರಿತು ನಟ ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಪುತ್ರ ಅಲ್ಲು ಆಯಾನ್‌ಗೆ ಸಹಿ ಮಾಡಿ ನೀಡಿದ ಜರ್ಸಿ ಉಡುಗೊರೆಗೆ ಧನ್ಯವಾದ ಅರ್ಪಿಸಿದ್ದಾರೆ. ಇಷ್ಟೇ ಅಲ್ಲ ವೆಂಕಟೇಶ್ ಅಯ್ಯರ್‌ಗೆ ಶುಭಕೋರಿದ್ದಾರೆ.
ಸನ್‌ರೈಸರ್ಸ್ ವಿರುದ್ದ ಆರ್‌ಸಿಬಿ ಕೊನೆಯ ಲೀಗ್ ಪಂದ್ಯ ಆಡಿತ್ತು. ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಕೇವಲ 19 ಎಸೆತದಲ್ಲಿ 44 ರನ್ ಸಿಡಿಸಿ ಅಬ್ಬರಿಸಿದ್ದರು. ವೆಂಕಟೇಶ್ ಅಯ್ಯರ್ ಅಬ್ಬರದಿಂದ ಆರ್‌ಸಿಬಿ 200 ರನ್ ಗಡಿ ದಾಟಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣಾಗಿತ್ತು.
55
ಸೋತರೂ ಮೊದಲ ಸ್ಥಾನದಲ್ಲೇ ಉಳಿದ ಆರ್‌ಸಿಬಿ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋಲು ಕಂಡರೂ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಉಳಿದುಕೊಂಡಿತ್ತು. ಹೀಗಾಗಿ ಮೇ.26ರಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಹೋರಾಟ ನಡೆಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.