ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?

Published : May 23, 2026, 03:43 PM IST

ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ನೀಡಿದ 256 ರನ್ ಟಾರ್ಗೆಟ್ ಚೇಸ್ ಮಾಡುವ ಅವಕಾಶ ಹಾಗೂ ಸಾಮರ್ಥ್ಯವಿದ್ದರೂ ಕೇವಲ 166 ರನ್ ದಾಟಿಸಿ ಸೋತರೂ ಪರ್ವಾಗಿಲ್ಲ ಅನ್ನೋ ಲೆಕ್ಕಾಚಾರದಲ್ಲೇ ಬ್ಯಾಟಿಂಗ್ ಮಾಡಿತಾ?

PREV
15
ಆರ್‌ಸಿಬಿ ಇನ್‌ಸೈಡ್ ಸ್ಟೋರಿ

ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಗ್ಗರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 166 ರನ್ ಗಡಿ ದಾಟಿದರೆ ಆರ್‌ಸಿಬಿ ಮೊದಲ ಸ್ಥಾನದಲ್ಲೇ ಇರಲಿದೆ ಅನ್ನೋ ಲೆಕ್ಕಾಚಾರದಲ್ಲೇ ಬ್ಯಾಟಿಂಗ್ ಮಾಡಿ ಗೆಲುವನ್ನೇ ಮರೆತಿತಾ ಅನ್ನೋ ಚರ್ಚೆ ಶುರುವಾಗಿದೆ. ಏನಿದು ಆರ್‌ಸಿಬಿ ಇನ್‌ಸೈಡ್ ಸ್ಟೋರಿ.

25
ಆರ್‌ಸಿಬಿ ಬ್ಯಾಟರ್ ಲೆಕ್ಕಾಚಾರ, ಟಾರ್ಗೆಟ್ ಬಗ್ಗೆ ಚರ್ಚೆ

ಹೈದರಾಬಾದ್ ವಿರುದ್ದ 256 ರನ್ ಬೃಹತ್ ಟಾರ್ಗೆಟ್ ಚೇಸಿಂಗ್ ಆರ್‌ಸಿಬಿ ತಂಡಕ್ಕೆ ಕಷ್ಟವಾಗಿರಲಿಲ್ಲ. 200 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಆರ್‌ಸಿಬಿ ತಂಡದ ಗುರಿ ಇದ್ದಿದ್ದು ಗೆಲುವಲ್ಲ, ಕೇವಲ 166 ರನ್ ಗಡಿ ದಾಟಿಸಿ ನೆಟ್ ರನ್‌ರೇಟ್ ಹೈದರಾಬಾದ್ ತಂಡಕ್ಕಿಂತ ಕಡಿಮೆಯಾಗುವುದು ತಪ್ಪಿಸುವುದು. ಇದರಂತೆ ತಂಡ ಬ್ಯಾಟಿಂಗ್ ಮಾಡಿದೆ. ಗೆಲುವಿನ ಕಿಚ್ಚು ಇರಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.

35
ಗೆಲುವು ಸಾಧ್ಯವಿತ್ತು

ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಆರ್‌ಸಿಬಿ ತಂಡ ಗೆಲುವಿನ ಜೊತೆಗೆ ದಾಖಲೆಯೂ ಸಾಧ್ಯವಿತ್ತು. ಆದರೆ ಆರ್‌ಸಿಬಿ 166 ರನ್ ಗಡಿ ದಾಟಿಸುವ ಪ್ರಯತ್ನದಲ್ಲೇ ಇತ್ತು ಅನ್ನೋ ಮಾತುಗಳು ಕೇಳಿಬಂದಿದೆ. ಗೆಲುವಿನ ಅವಕಾಶ, ಸಾಮರ್ಥ್ಯ ಎರಡೂ ಆರ್‌ಸಿಬಿಗಿತ್ತು. ಆದರೆ ಆರ್‌ಸಿಬಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲೇ ಇಲ್ಲ ಎಂಬ ಮಾತುಗಳು ಚರ್ಚೆಯಾಗುತ್ತಿದೆ.

45
ಮೇ.26ಕ್ಕೆ ಆರ್‌ಸಿಬಿ ಕ್ವಾಲಿಫೈಯರ್ ಹೋರಾಟ

200 ರನ್ ಸಿಡಿಸಿ ಕೇವಲ 55 ರನ್‌ಗಳಿಂದ ಆರ್‌ಸಿಬಿ ಸೋಲೊಪ್ಪಿಕೊಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ. ಇದೀಗ ಮೇ.26ರಂದು ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮೊದಲ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಇಲ್ಲಿ ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತರೆ ಮೇ.29ರಂದು ಎರಡೇ ಕ್ವಾಲಿಫೈಯರ್ ಆಡಬೇಕಿದೆ.

55
ಮೇ.31ಕ್ಕೆ ಫೈನಲ್

ಈ ಬಾರಿಯ ಐಪಿಎಲ್ ಟೂರ್ನಿ ಫೈನಲ್ ಪಂದ್ಯ ಮೇ.31ಕ್ಕೆ ನಡೆಯಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸವು ಎಲ್ಲಾ ಸಾಧ್ಯತೆಗಳಿವೆ. ಗುಜರಾತ್ ಟೈಟಾನ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರೆ ನೇರವಾಗಿ ಫೈನಲ್ ಪ್ರವೇಶಿಲಿದೆ. ಬಳಿಕ ಆರ್‌ಸಿಬಿ ಟ್ರೋಫಿ ಹಾದಿ ಸುಗಮಗಳೊಳ್ಳಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories