ಚಾಂಪಿಯನ್ಸ್ ಟ್ರೋಫಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಕ್ ಕ್ರಿಕೆಟ್ ಬೋರ್ಡ್; ಆಟಗಾರರಿಗೆ ಶಾಕ್!

Published : Mar 18, 2025, 09:29 AM ISTUpdated : Mar 18, 2025, 09:41 AM IST

2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಿಂದ ಪಾಕಿಸ್ತಾನಕ್ಕೆ ಭಾರೀ ನಷ್ಟವಾಗಿದೆ. ಕ್ರೀಡಾಂಗಣ ನವೀಕರಣ ವೆಚ್ಚ ಹೆಚ್ಚಳ ಮತ್ತು ಕಡಿಮೆ ಆದಾಯದಿಂದಾಗಿ ಪಿಸಿಬಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

PREV
14
ಚಾಂಪಿಯನ್ಸ್ ಟ್ರೋಫಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಕ್ ಕ್ರಿಕೆಟ್ ಬೋರ್ಡ್; ಆಟಗಾರರಿಗೆ ಶಾಕ್!

2025ರ ಚಾಂಪಿಯನ್ಸ್‌ ಟ್ರೋಫಿ ಆಯೋಜನೆ ಮಾಡಿದ್ದ ಪಾಕಿಸ್ತಾನ ಟೂರ್ನಿಯಿಂದಾಗಿ ಭಾರೀ ಆರ್ಥಿಕ ನಷ್ಟಕ್ಕೆ ತುತ್ತಾಗಿದೆ. ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಪಂದ್ಯಾವಳಿಯಿಂದ 700 ಕೋಟಿ ರು. ನಷ್ಟ ಅನುಭವಿಸಿದೆ. ಈ ಬೆನ್ನಲ್ಲೇ ಆಟಗಾರರ ಶುಲ್ಕ ಮತ್ತು ಸೌಲಭ್ಯ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ.

24

ವರದಿಗಳ ಪ್ರಕಾರ, ಟೂರ್ನಿಗೂ ಮುನ್ನ ಪಿಸಿಬಿ ₹500 ಕೋಟಿ ವೆಚ್ಚ ಮಾಡಿ 3 ಕ್ರೀಡಾಂಗಣಗಳನ್ನು ನವೀಕರಿಸಿತ್ತು. ನವೀಕರಣದ ವೆಚ್ಚವು ನಿರೀಕ್ಷಿತ ಬಜೆಟ್‌ಗಿಂತ ಶೇ.50ರಷ್ಟು ಹೆಚ್ಚಾಗಿತ್ತು. ಅಲ್ಲದೆ, ಟೂರ್ನಿಯ ಸಿದ್ಧತೆಗಾಗಿ ₹340 ಕೋಟಿ ಬಳಕೆ ಮಾಡಿತ್ತು. ಒಟ್ಟಾರೆ ₹869 ಕೋಟಿಯಷ್ಟು ಖರ್ಚು ಮಾಡಲಾಗಿತ್ತು.

34

ಟಿಕೆಟ್‌ ಶುಲ್ಕ ಹಾಗೂ ಇನ್ನಿತರ ಮೂಲಗಳಿಂದ ಪಾಕಿಸ್ತಾನ ಸ್ವೀಕರಿಸಿದ್ದು 52 ಕೋಟಿ ರು.ಮಾತ್ರ. ಇದರೊಂದಿಗೆ ಟೂರ್ನಿಯ ಒಟ್ಟಾರೆ ಹೂಡಿಕೆಯಲ್ಲಿ ಪಾಕಿಸ್ತಾನ ಶೇ.85ರಷ್ಟು ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ.

44

ಹೀಗಾಗಿಯೇ ಪಾಕ್ ರಾಷ್ಟ್ರೀಯ ಟ20 ಚಾಂಪಿಯನ್‌ಶಿಪ್‌ನಲ್ಲಿ ಪಂದ್ಯ ಶುಲ್ಕವನ್ನು ಶೇ.90ರಷ್ಟು, ಮೀಸಲು ಆಟಗಾರರ ಪಾವತಿ ಶುಲ್ಕವನ್ನು ಶೇ.87.5ಕ್ಕೆ ಇಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೇ ಆಟಗಾರರಿಗಿದ್ದ ಫೈವ್ ಸ್ಟಾರ್‌ ವಸತಿ ಸೌಕರ್ಯ ಕಡಿತಗೊಳಿಸಿ ಎಕಾನಮಿ ಹೋಟೆಲ್‌ಗಳಿಗೆ ಬದಲಿಸಿದೆ ಎನ್ನಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories