ವಿರಾಟ್ ಕೊಹ್ಲಿಯ ಐಪಿಎಲ್ 973 ರನ್ ದಾಖಲೆ ಈ ಐವರಲ್ಲಿ ಯಾರು ಮುರಿಯಬಹುದು?

ವಿರಾಟ್ ಕೊಹ್ಲಿಯ 2016ರ ಐಪಿಎಲ್​ನ 973 ರನ್​ಗಳ ದಾಖಲೆ ಇನ್ನೂ ಹಾಗೇ ಇದೆ. ಆದ್ರೆ, ಮುಂದಿನ ಐಪಿಎಲ್ 2025 ಸೀಸನ್​ನಲ್ಲಿ ಈ ದಾಖಲೆ ಮುರಿಯೋಕೆ ಕೆಲ ಆಟಗಾರರು ರೆಡಿಯಾಗಿದ್ದಾರೆ.

IPL 2025 Top 5 Players Poised to Break Virat Kohli's Record kvn
ಚಿತ್ರ ಕೃಪೆ: ಎಎನ್ಐ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2016ರಲ್ಲಿ ಬೆಸ್ಟ್ ಐಪಿಎಲ್ ಸೀಸನ್ ಕಂಡಿದ್ರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಮತ್ತು ಬ್ಯಾಟಿಂಗ್ ಸರಾಸರಿ ಸೇರಿದಂತೆ ಹಲವು ದಾಖಲೆಗಳನ್ನು ಮುರಿದಿದ್ರು. 2016ರ ಐಪಿಎಲ್​ನಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿಯಲ್ಲಿ 4 ಶತಕ ಮತ್ತು ಏಳು ಅರ್ಧ ಶತಕ ಸೇರಿದಂತೆ 973 ರನ್ ಗಳಿಸಿದ್ರು. 

ವಿರಾಟ್ ಕೊಹ್ಲಿ ಈ ಐತಿಹಾಸಿಕ ಸಾಧನೆ ಮಾಡಿ ಒಂಬತ್ತು ವರ್ಷಗಳಾಗಿದೆ. ಆದ್ರೆ, ಯಾವ ಬ್ಯಾಟರ್ ಕೂಡ ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅವರ ದಾಖಲೆಯನ್ನು ಹತ್ತಿರಕ್ಕೂ ಸುಳಿಯೋಕೆ ಆಗಿಲ್ಲ. ಆದಾಗ್ಯೂ, ಐಪಿಎಲ್ 2025 ಹತ್ತಿರ ಬರ್ತಿದ್ದಂತೆ, ಹೊಸ ಪೀಳಿಗೆಯ ಆಟಗಾರರು ಆರ್‌ಸಿಬಿ ತಂಡದ ಮಾಜಿ ಕ್ಯಾಪ್ಟನ್ ಅವರ ಸಾರ್ವಕಾಲಿಕ ದಾಖಲೆಗೆ ಸವಾಲು ಹಾಕಬಹುದು. ಒಂದೇ ಐಪಿಎಲ್ ಸೀಸನ್‌ನಲ್ಲಿ ಕೊಹ್ಲಿಯ 973 ರನ್‌ಗಳ ದಾಖಲೆಯನ್ನು ಮುರಿಯಲು ಕೆಲ ಆಟಗಾರರು ಗಂಭೀರ ಪೈಪೋಟಿ ನೀಡಬಹುದು. 

ವಿರಾಟ್ ಕೊಹ್ಲಿಯ ದಾಖಲೆ ಮುರಿಯಲು ಸಾಧ್ಯವಿರುವ ಐವರು ಆಟಗಾರರು ಇಲ್ಲಿದ್ದಾರೆ

ಚಿತ್ರ ಕೃಪೆ: ಎಎನ್ಐ

1. ಶುಭಮನ್ ಗಿಲ್ 

ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಇವರನ್ನ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಅಂತಾನೂ ಪರಿಗಣಿಸಲಾಗಿದೆ. ಐಪಿಎಲ್ 2023 ರಲ್ಲಿ, ಶುಭಮನ್ ಗಿಲ್ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಸೀಸನ್ ದಾಖಲೆಯಾದ 973 ರನ್‌ಗಳ ಹತ್ತಿರ ಬಂದಿದ್ರು. 17 ಪಂದ್ಯಗಳಲ್ಲಿ 59.33 ಸರಾಸರಿಯಲ್ಲಿ 3 ಶತಕ ಮತ್ತು 4 ಅರ್ಧ ಶತಕ ಸೇರಿದಂತೆ 890 ರನ್ ಗಳಿಸಿದ್ರು. ಕಳೆದ ಸೀಸನ್‌ನಲ್ಲಿ, 25 ವರ್ಷದ ಈ ಆಟಗಾರ 12 ಪಂದ್ಯಗಳಲ್ಲಿ 38.73 ಸರಾಸರಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕ ಸೇರಿದಂತೆ 426 ರನ್ ಗಳಿಸಿದ್ರು. ಗಿಲ್ ಕಳೆದ ಐದು ಐಪಿಎಲ್ ಸೀಸನ್‌ಗಳಲ್ಲಿ ಸ್ಥಿರವಾಗಿ ಆಡಿದ್ದು, ಪ್ರತಿ ಸೀಸನ್‌ನಲ್ಲಿ 400 ರನ್‌ಗಳಿಗಿಂತ ಹೆಚ್ಚು ಗಳಿಸಿದ್ದಾರೆ. ಅವರ ಸ್ಥಿರತೆ ಮತ್ತು ದೊಡ್ಡ ರನ್ ಗಳಿಸುವ ಸಾಮರ್ಥ್ಯದಿಂದಾಗಿ, ಶುಭಮನ್ ಗಿಲ್ ಮುಂಬರುವ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯುವ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.


ಚಿತ್ರ ಕೃಪೆ: ಎಎನ್ಐ

2. ಅಭಿಷೇಕ್ ಶರ್ಮಾ 

ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯಾದ 973 ರನ್‌ಗಳನ್ನು ಒಂದೇ ಸೀಸನ್‌ನಲ್ಲಿ ಹಿಂದಿಕ್ಕುವ ಮತ್ತೊಬ್ಬ ಪ್ರಬಲ ಸ್ಪರ್ಧಿ ಅಂದ್ರೆ ಸನ್‌ರೈಸರ್ಸ್ ಹೈದರಾಬಾದ್‌ನ ಪವರ್-ಹಿಟ್ಟರ್ ಅಭಿಷೇಕ್ ಶರ್ಮಾ. ಕಳೆದ ಐಪಿಎಲ್ ಸೀಸನ್‌ನಲ್ಲಿ, ಅಭಿಷೇಕ್ ಬ್ಯಾಟ್‌ನಿಂದ ಅದ್ಭುತ ಪ್ರದರ್ಶನ ನೀಡಿದ್ದು, 32.26 ಸರಾಸರಿ ಮತ್ತು 204.21 ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧ ಶತಕ ಸೇರಿದಂತೆ 484 ರನ್ ಗಳಿಸಿದ್ರು. ಅವರು ಮತ್ತು ಟ್ರಾವಿಸ್ ಹೆಡ್ ಭಯಾನಕ ಪವರ್-ಹಿಟ್ಟಿಂಗ್‌ನಿಂದ ಎದುರಾಳಿಗಳಿಗೆ ತಲೆನೋವು ತಂದಿದ್ರು. ಕಳೆದ ಸೀಸನ್‌ನಲ್ಲಿ ಇವರೇ ಬೆಸ್ಟ್ ಓಪನಿಂಗ್ ಜೋಡಿಯಾಗಿದ್ರು. 24 ವರ್ಷದ ಈ ಆಟಗಾರ ದುಬೈನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 135 ರನ್ ಗಳಿಸಿ ಅಬ್ಬರಿಸಿದ್ರು. ಅಂದಿನಿಂದ ಟಿ20 ಕ್ರಿಕೆಟ್‌ನಲ್ಲಿ ಇವರನ್ನ ಲೆಕ್ಕ ಹಾಕೋಕೆ ಶುರುಮಾಡಿದ್ರು. ಅಭಿಷೇಕ್ ಶರ್ಮಾ ಮೊದಲ ಬಾಲ್‌ನಿಂದಲೇ ಬೌಲರ್‌ಗಳ ಮೇಲೆ ಮುಗಿಬೀಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಕೊಹ್ಲಿಯ ದಾಖಲೆಯನ್ನು ಮುರಿಯುವ ನಿರೀಕ್ಷೆಯಿದೆ. ಸೀಸನ್‌ನ ಉದ್ದಕ್ಕೂ ಇದೇ ಸ್ಥಿರತೆ ಕಾಪಾಡಿಕೊಂಡ್ರೆ ಇವ್ರಿಂದ ಸಾಧ್ಯ.

ಚಿತ್ರ ಕೃಪೆ: ಎಎನ್ಐ

3. ಋತುರಾಜ್ ಗಾಯಕ್ವಾಡ್ 

ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಕಳೆದ ಕೆಲವು ಸೀಸನ್‌ಗಳಿಂದ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 2021ರ ಐಪಿಎಲ್‌ನಲ್ಲಿ 635 ರನ್ ಗಳಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ರು. ನಂತರದ ಸೀಸನ್‌ಗಳಲ್ಲೂ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ರು. ಕಳೆದ ವರ್ಷ ಕ್ಯಾಪ್ಟನ್ ಆಗಿ ಆಡಿದ ಮೊದಲ ಐಪಿಎಲ್ ಸೀಸನ್‌ನಲ್ಲಿ, ಗಾಯಕ್ವಾಡ್ 14 ಪಂದ್ಯಗಳಲ್ಲಿ 53 ಸರಾಸರಿಯಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕ ಸೇರಿದಂತೆ 583 ರನ್ ಗಳಿಸಿದ್ರು. 28 ವರ್ಷದ ಇವರು ಕಳೆದ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. 5 ಪಂದ್ಯಗಳಲ್ಲಿ ಕೇವಲ 123 ರನ್ ಗಳಿಸಿದ್ರು. ಆದ್ರೆ, ಐಪಿಎಲ್‌ನಲ್ಲಿ ಅವರ ಹಿಂದಿನ ದಾಖಲೆ ನೋಡಿದ್ರೆ ಬೇಗನೆ ಕಮ್‌ಬ್ಯಾಕ್ ಮಾಡುವ ಸಾಮರ್ಥ್ಯ ಅವರಿಗಿದೆ. ಕಳೆದ ಕೆಲವು ವರ್ಷಗಳಿಂದ ಸೀಸನ್‌ನ ಉದ್ದಕ್ಕೂ ತಮ್ಮ ಫಾರ್ಮ್ ಅನ್ನು ಕಾಪಾಡಿಕೊಳ್ಳುವ ಸ್ಥಿರತೆಯಿಂದಾಗಿ, ಋತುರಾಜ್ ಗಾಯಕ್ವಾಡ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯುವ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಚಿತ್ರ ಕೃಪೆ: ಎಎನ್ಐ

4. ಯಶಸ್ವಿ ಜೈಸ್ವಾಲ್ 

ರಾಜಸ್ಥಾನ್ ರಾಯಲ್ಸ್ ಓಪನರ್ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಆಕ್ರಮಣಕಾರಿ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಪವರ್‌ಪ್ಲೇನಲ್ಲಿ ಬೌಲರ್‌ಗಳ ಮೇಲೆ ಮುಗಿಬಿದ್ದು ಭಯವಿಲ್ಲದೆ ಆಡ್ತಾರೆ. ಜೈಸ್ವಾಲ್ 2023 ರಲ್ಲಿ ತಮ್ಮ ಬೆಸ್ಟ್ ಐಪಿಎಲ್ ಸೀಸನ್ ಕಂಡಿದ್ರು. 14 ಪಂದ್ಯಗಳಲ್ಲಿ 48.08 ಸರಾಸರಿಯಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕ ಸೇರಿದಂತೆ 625 ರನ್ ಗಳಿಸಿದ್ರು. ಕಳೆದ ಸೀಸನ್‌ನಲ್ಲಿ ಜೈಸ್ವಾಲ್ 15 ಪಂದ್ಯಗಳಲ್ಲಿ 31.07 ಸರಾಸರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 435 ರನ್ ಗಳಿಸಿದ್ರು. ಕಳೆದ ಎರಡು ಸೀಸನ್‌ಗಳಿಂದ, 23 ವರ್ಷದ ಇವರು ಸ್ಥಿರತೆಯನ್ನು ತೋರಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರತಿಭಾವಂತ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಜೈಸ್ವಾಲ್ ತಮ್ಮ ಸ್ಥಿರತೆಯನ್ನು ಕಾಪಾಡಿಕೊಂಡು ಐಪಿಎಲ್ 2025 ರಲ್ಲಿ ಆಕ್ರಮಣಕಾರಿ ಆಟವನ್ನು ಆಡಿದ್ರೆ, ಅವರು ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದರೂ ಅಚ್ಚರಿಪಡಬೇಕಿಲ್ಲ.

ಚಿತ್ರ ಕೃಪೆ: ಎಎನ್ಐ

5. ಟ್ರಾವಿಸ್ ಹೆಡ್ 

ಟ್ರಾವಿಸ್ ಹೆಡ್ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಮತ್ತು ಇತ್ತೀಚಿನ ಪ್ರದರ್ಶನಗಳನ್ನು ನೋಡಿದ್ರೆ, ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಆಟಗಾರರ ಪಟ್ಟಿಯಲ್ಲಿ ಇವರ ಹೆಸರಿಲ್ಲ ಅಂದ್ರೆ ಹೇಗೆ? ಹೆಡ್ ಕಳೆದ ವರ್ಷ ತಮ್ಮ ಬೆಸ್ಟ್ ಐಪಿಎಲ್ ಸೀಸನ್ ಕಂಡಿದ್ರು. 40.50 ಸರಾಸರಿ ಮತ್ತು 191.55 ಸ್ಟ್ರೈಕ್ ರೇಟ್‌ನಲ್ಲಿ ಒಂದು ಶತಕ ಮತ್ತು 4 ಅರ್ಧ ಶತಕ ಸೇರಿದಂತೆ 567 ರನ್ ಗಳಿಸಿದ್ರು. ಟ್ರಾವಿಸ್ ಹೆಡ್ ಸೀಸನ್‌ನ ಉದ್ದಕ್ಕೂ ಅಭಿಷೇಕ್ ಶರ್ಮಾ ಅವರೊಂದಿಗೆ ಉತ್ತಮ ಜೊತೆಯಾಟ ಆಡಿದ್ರು. ಸ್ಪಿನ್ ಮತ್ತು ವೇಗದ ಬೌಲಿಂಗ್ ಎರಡನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಇವರಿಗಿದೆ. ಆಸ್ಟ್ರೇಲಿಯಾದ ಈ ಆಟಗಾರ ತಮ್ಮ ಭರ್ಜರಿ ಫಾರ್ಮ್ ಅನ್ನು ಮುಂದುವರೆಸಿದ್ರೆ ಮತ್ತು ಪೂರ್ಣ ಸೀಸನ್ ಆಡಿದ್ರೆ, ಟ್ರಾವಿಸ್ ಹೆಡ್ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯ 9 ವರ್ಷಗಳ ದಾಖಲೆಗೆ ಅಪಾಯ ತರಬಹುದು.

Latest Videos

click me!