ಐಪಿಎಲ್‌ಗಾಗಿ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಶ್ರೀಲಂಕಾದ ದಸುನ್ ಶಾನಕಗೆ ಪಿಸಿಬಿ 1 ವರ್ಷ ನಿಷೇಧ ಹೇರಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್ ಜದ್ರಾನ್ ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಒಪ್ಪಂದ ಮಾಡಿಕೊಂಡ ಹೊರತಾಗಿಯೂ ಅದನ್ನು ತೊರೆದು ಐಪಿಎಲ್ ಆಡಲು ಬಂದ ಶ್ರೀಲಂಕಾ ಆಲ್ರೌಂಡರ್ ದಸುನ್ ಶಾನಕಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) 1 ವರ್ಷ ನಿಷೇಧ ವಿಧಿಸಿದೆ.
24
ಲಾಹೋರ್ ಖಲಂದರ್ಸ್
ಲಾಹೋರ್ ಖಲಂದರ್ಸ್ ತಂಡದ ಪರ ಆಡಬೇಕಾಗಿದ್ದ ಶಾನಕ ಅದರ ಬದಲು ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಅವರನ್ನು ಪಿಎಸ್‌ಎಲ್‌ನಿಂದ 1 ವರ್ಷ ನಿಷೇಧಿಸಿ ಪಿಸಿಬಿ ಆದೇಶಿಸಿದೆ. ಇತ್ತೀಚೆಗಷ್ಟೇ ಜಿಂಬಾಬ್ವೆಯ ಮುಜರಬಾನಿಯನ್ನು ಇದೇ ಕಾರಣಕ್ಕೆ ಪಿಎಸ್‌ಎಲ್‌ನಿಂದ 2 ವರ್ಷ ನಿಷೇಧಿಸಲಾಗಿತ್ತು.
34
ಆಫ್ಘನ್ ಮಾಜಿ ಕ್ರಿಕೆಟರ್ ಶಪೂರ್‌ಗೆ ಅಪಾಯಕಾರಿ ರೋಗ, ಡೆಲ್ಲಿಯಲ್ಲಿ ಚಿಕಿತ್ಸೆ
ನವದೆಹಲಿ: ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್ ಶಪೂರ್ ಜದ್ರಾನ್ ಅವರು ಜೀವಕ್ಕೆ ಅಪಾಯವಿರುವ ಭೀಕರ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 38 ವರ್ಷದ ಶಪೂರ್ ಹಿಮೋಫಾಗೋಸಿಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್(ಎಚ್‌ಎಲ್‌ಎಚ್) ಎಂಬ ಅಪರೂಪದ ಹಾಗೂ ಅಪಾಯಕಾರಿ ರೋಗಕ್ಕೆ ತುತ್ತಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲೇ ಅವರಲ್ಲಿ ಈ ರೋಗ ಪತ್ತೆಯಾಗಿದ್ದು, ಜನವರಿಯಿಂದ ದೆಹಲಿಯ ಆಸ್ಪತ್ರೆಯಲ್ಲಿದ್ದಾರೆ. ಎಚ್‌ಎಲ್‌ಎಚ್ ಎಂಬುದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದ್ದು, ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ. ಇದು ದೇಹದ ಬಹುತೇಕ ಅಂಗಗಳನ್ನು ಹಾನಿಯುಂಟು ಮಾಡುತ್ತದೆ. ಈಗ ಶಫೂರ್ ದೇಹಕ್ಕೆ ಸಂಪೂರ್ಣವಾಗಿ ಸೋಂಕು ಹರಡಿದೆ. ಶಫೂರ್ 2009-2020ರ ನಡುವೆ ಅಫ್ಘಾನಿಸ್ತಾನ ಪರ 44 ಏಕದಿನ, 36 ಟಿ20 ಪಂದ್ಯಗಳನ್ನಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.