ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ ತನ್ನ ಅದ್ಭುತ ಆಟದ ಜತೆಗೆ ತಮ್ಮ ಬ್ಯೂಟಿ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಸನಾ? ಈಕೆಯ ಹಿನ್ನೆಲೆ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ, ನವೆಂಬರ್ 8, 2001 ರಂದು ಕರಾಚಿಯಲ್ಲಿ ಜನಿಸಿದರು. 24 ವರ್ಷದ ಫಾತಿಮಾ ಆಲ್ರೌಂಡ್ ಆಟಗಾರ್ತಿ.
26
ಪಾಕ್ ತಂಡದ ಅತ್ಯುತ್ತಮ ಆಲ್ರೌಂಡರ್ ಫಾತಿಮಾ ಸನಾ
ಫಾತಿಮಾ ಸನಾ ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಮಧ್ಯಮ ವೇಗದ ಬೌಲರ್ ಕೂಡ ಹೌದು. ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಪಾಕಿಸ್ತಾನ ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿದ್ದಾರೆ.
36
2019ರಲ್ಲಿ ಪಾಕ್‌ಗೆ ಪಾದಾರ್ಪಣೆ
ಫಾತಿಮಾ ಸನಾ ಮೇ 6, 2019 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಅವರು ಇದುವರೆಗೆ 50 ಪಂದ್ಯಗಳಲ್ಲಿ 1942 ರನ್ ನೀಡಿ 66 ವಿಕೆಟ್ ಪಡೆದಿದ್ದಾರೆ.
ಟಿ20 ಪಂದ್ಯಗಳ ಬಗ್ಗೆ ಹೇಳುವುದಾದರೆ, ಫಾತಿಮಾ ಸನಾ ಮೇ 15, 2019 ರಂದು ದಕ್ಷಿಣ ಆಫ್ರಿಕಾ ವಿರುದ್ಧವೇ ಪಾದಾರ್ಪಣೆ ಮಾಡಿದರು. ಟಿ20ಯಲ್ಲಿ ಅವರು ಇದುವರೆಗೆ 49 ಪಂದ್ಯಗಳಿಂದ 417 ರನ್ ಗಳಿಸಿದ್ದಾರೆ. ಜೊತೆಗೆ 41 ವಿಕೆಟ್ ಪಡೆದಿದ್ದಾರೆ.
56
ಬೇರೆ-ಬೇರೆ ಟಿ20 ಲೀಗ್‌ನಲ್ಲಿ ಆಡುವ ಸನಾ
ಫಾತಿಮಾ ಸನಾ ಅಂತರಾಷ್ಟ್ರೀಯ ಕ್ರಿಕೆಟ್ ಹೊರತುಪಡಿಸಿ ವಿಶ್ವದಾದ್ಯಂತ ಹಲವು ಲೀಗ್‌ಗಳಲ್ಲಿ ಆಡುತ್ತಾರೆ. ಅವರು ಬಾರ್ಬಡೋಸ್ ರಾಯಲ್ಸ್ ವುಮೆನ್ ಮತ್ತು ಬಾರ್ಮಿ ಆರ್ಮಿ ವುಮೆನ್ ತಂಡಗಳಿಗೆ ಆಡುತ್ತಾರೆ.
66
ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ
ಫಾತಿಮಾ ಸನಾ 51 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 17.14 ಸರಾಸರಿಯಲ್ಲಿ 617 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 72.85 ಆಗಿದೆ. ಆದರೆ ಆಕೆಯ ಬ್ಯೂಟಿಗೆ ಪಾಕಿಸ್ತಾನ ಫ್ಯಾನ್ಸ್ ಫಿದಾ ಆಗಿದ್ದಾರೆ.