ಬೆಂಗಳೂರು: ಇದೇ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಈ 5 ಸ್ಟಾರ್ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಪೈಕಿ ಇಬ್ಬರು ಕ್ರಿಕೆಟಿಗರ ಏಕದಿನ ಕ್ರಿಕೆಟ್ ವೃತ್ತಿಬದುಕು ಮಗಿದೇಹೋಯ್ತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಭಾರತ ಹಾಗೂ ಅಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಅಕ್ಟೋಬರ್ 19ರಿಂದ ಆರಂಭವಾಗಲಿದೆ. ಈ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಶುಭ್‌ಮನ್ ಗಿಲ್‌ಗೆ ಬಿಸಿಸಿಐ ಆಯ್ಕೆ ಸಮಿತಿಯು ನಾಯಕ ಪಟ್ಟ ಕಟ್ಟಿದೆ.
27
ಐದು ಬಿಗ್ ನೇಮ್ಸ್ ಮಿಸ್ಸಿಂಗ್
ಇನ್ನು ಈ ಸರಣಿಗೆ ಆಯ್ಕೆಯಾಗಬೇಕಿದ್ದ ಐವರು ಆಟಗಾರರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇವರನ್ನು ಆಯ್ಕೆ ಸಮಿತಿಯು ಕಡೆಗಣಿಸಿದೆ. ಯಾರು ಆ ಐದು ಆಟಗಾರರು ಎನ್ನುವುದನ್ನು ನೋಡೋಣ ಬನ್ನಿ.
37
1. ಸಂಜು ಸ್ಯಾಮ್ಸನ್
ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಸಂಜು ಬದಲಿಗೆ ಆಯ್ಕೆ ಸಮಿತಿಯು ಧ್ರುವ್ ಜುರೆಲ್‌ಗೆ ವಿಕೆಟ್ ಕೀಪರ್ ಆಗಿ ಸ್ಥಾನ ನೀಡಿದೆ. ಹೀಗಾಗಿ ಸಂಜು ಮುಂಬರುವ ದಿನಗಳಲ್ಲಿ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯೋದು ಅನುಮಾನ ಎನಿಸಿದೆ.
ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಕೆಚ್ಚೆದೆಯ ಆಟದ ಮೂಲಕ ಮಿಂಚಿದ್ದ ತಿಲಕ್ ವರ್ಮಾ, ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಹೀಗಿದ್ದೂ ತಿಲಕ್ ವರ್ಮಾ ಅವರನ್ನು ಆಯ್ಕೆ ಸಮಿತಿ ಕಡೆಗಣಿಸಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
57
3. ರವೀಂದ್ರ ಜಡೇಜಾ
ಭಾರತ ಟೆಸ್ಟ್ ತಂಡದ ಉಪನಾಯಕ ರವೀಂದ್ರ ಜಡೇಜಾ ಅವರಿಗೂ ಈ ಬಾರಿ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಜಡ್ಡು ಬದಲಿಗೆ ಆಲ್ರೌಂಡರ್ ಆಗಿ ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ನೀಡಲಾಗಿದೆ. ಹೀಗಾಗಿ ಜಡ್ಡು ಅವರ ಏಕದಿನ ವೃತ್ತಿಬದುಕು ಮುಗಿಯಿತಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.
67
4. ವರುಣ್ ಚಕ್ರವರ್ತಿ
ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ಅವರಿಗೂ ಈ ಬಾರಿ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಸದ್ಯ ವರುಣ್ ಚಕ್ರವರ್ತಿ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯುತ್ತಿದ್ದು, ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಇನ್ನಷ್ಟು ಸಮಯ ಕಾಯಬೇಕಿದೆ.
77
5. ಮೊಹಮ್ಮದ್ ಶಮಿ
ಐಸಿಸಿ ಟೂರ್ನಿಗಳಲ್ಲಿ ಭಾರತದ ಬೌಲಿಂಗ್ ಅಸ್ತ್ರವಾಗಿ ಗುರುತಿಸಿಕೊಂಡಿರುವ ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಇದೀಗ ಆಯ್ಕೆ ಸಮಿತಿ ಕಡೆಗಣಿಸಿದೆ. ಹೀಗಾಗಿ ಶಮಿ ಅವರು ಅಂತಾರಾಷ್ಟ್ರೀಯ ವೃತ್ತಿಬದುಕಿಗೆ ಪೂರ್ಣವಿರಾಮ ಇಡುವ ಸಮಯ ಬಂದಿದೆಯೇ ಎನ್ನುವ ಅನುಮಾನ ಶುರುವಾಗಿದೆ.