ಮುಂಬೈ: ಇದೇ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದೆ. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯು ಐದು ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು, ಮುಂಬರುವ ಆಸ್ಟ್ರೇಲಿಯಾ ಎದುರಿನ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ.
27
ಬಿಸಿಸಿಐ ಕೊಟ್ಟ 5 ಸ್ಪಷ್ಟ ಸಂದೇಶ
ಏಕದಿನ ಸರಣಿಗೆ ರೋಹಿತ್ ಶರ್ಮಾ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ನಾಯಕ ಪಟ್ಟ ಕಟ್ಟಿದೆ. ಇದರ ಜತೆಗೆ ಬಿಸಿಸಿಐ ಆಯ್ಕೆ ಸಮಿತಿಯು 5 ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಏನದು ನೋಡೋಣ ಬನ್ನಿ.
37
1. ಶುಭ್‌ಮನ್ ಗಿಲ್ ದೀರ್ಘಕಾಲಿಕ ಕ್ಯಾಪ್ಟನ್
ಶುಭ್‌ಮನ್ ಗಿಲ್ ಅವರನ್ನು ದೀರ್ಘಕಾಲಿಕ ಕ್ಯಾಪ್ಟನ್ ಮಾಡುವ ಸಂದೇಶವನ್ನು ಬಿಸಿಸಿಐ ರವಾನಿಸಿದೆ. ಈಗಾಗಲೇ ಟೆಸ್ಟ್ ತಂಡದ ನಾಯಕರಾಗಿರುವ ಯುವ ಬ್ಯಾಟರ್ ಶುಭ್‌ಮನ್ ಗಿಲ್‌ಗೆ ಏಕದಿನ ನಾಯಕತ್ವದ ಜವಬ್ದಾರಿಯು ಹೆಗಲೇರಿದೆ. ಈ ಮೂಲಕ ಭವಿಷ್ಯದ ತಂಡ ಕಟ್ಟಲು ಗಿಲ್‌ಗೆ ಸಾಕಷ್ಟು ಸಮಯಾವಕಾಶವನ್ನು ಬಿಸಿಸಿಐ ನೀಡಿದೆ.
2. ರೋಹಿತ್-ಕೊಹ್ಲಿ ಕ್ರಿಕೆಟ್ ಭವಿಷ್ಯದ ಬಗ್ಗೆ ಗ್ಯಾರಂಟಿಯಿಲ್ಲ
ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಯಾವುದೇ ವಿಶೇಷ ಸೌಕರ್ಯಗಳಿರುವುದಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ. ಜತೆಗೆ ಅಗರ್ಕರ್, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕಿದ್ರೆ ದೇಶಿ ಕ್ರಿಕೆಟ್ ಆಡುವುದು ಕಡ್ಡಾಯ ಎಂದು ಪುನರುಚ್ಚರಿಸಿದ್ದಾರೆ.
57
3. ಅಭಿಷೇಕ್ ಹಿಂದಿಕ್ಕಿ ಜೈಸ್ವಾಲ್‌ಗೆ ಏಕದಿನ ತಂಡದಲ್ಲಿ ಮಣೆ
ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಹೀಗಿದ್ದೂ ಏಕದಿನ ತಂಡಕ್ಕೆ ಜೈಸ್ವಾಲ್‌ಗೆ ಮಣೆ ಹಾಕಲಾಗಿದೆ. ರೋಹಿತ್ ನಿವೃತ್ತಿ ಬಳಿಕ ಗಿಲ್ ಜತೆ ಏಕದಿನ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನುವ ಸಂದೇಶ ರವಾನೆಯಾಗಿದೆ.
67
4. ಒತ್ತಡದಲ್ಲಿ ಜಡೇಜಾ-ಶಮಿ!
ಅನುಭವಿ ಆಲ್ರೌಂಡರ್ ಜಡೇಜಾ ಹಾಗೂ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಯುವ ಆಲ್ರೌಂಡರ್ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್‌ಗೆ ಆಲ್ರೌಂಡರ್ ರೂಪದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಶಮಿ ಬದಲಿಗೆ ಹರ್ಷಿತ್ ರಾಣಾ, ಪ್ರಸಿದ್ದ್ ಕೃಷ್ಣ, ಅರ್ಶದೀಪ್‌ಗೆ ಸ್ಥಾನ ನೀಡಿರುವುದು ಜಡ್ಡು-ಶಮಿ ಏಕದಿನ ಕ್ರಿಕೆಟ್ ಬದುಕು ಯುಗಾಂತ್ಯವಾಯಿತಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
77
5 ನಿತೀಶ್ ಕುಮಾರ್ ರೆಡ್ಡಿಗೆ ಸುವರ್ಣಾವಕಾಶ
ಹಾರ್ದಿಕ್ ಪಾಂಡ್ಯ ಗಾಯಗೊಂಡಿರುವುದರಿಂದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ತಮ್ಮನ್ನು ತಾವು ಏಕದಿನ ತಂಡದಲ್ಲಿ ಭದ್ರವಾಗಿ ನೆಲೆಕಂಡುಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ನಿತೀಶ್ ಕುಮಾರ್ ಈ ಅವಕಾಶ ಹೇಗೆ ಬಳಸಿಕೊಳ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.