ಏಷ್ಯಾಕಪ್ ಟ್ರೋಫಿ ಕದ್ದೊಯ್ದ ನಖ್ವಿಗೆ ಗೋಲ್ಡ್ ಮೆಡಲ್ ಸನ್ಮಾನಕ್ಕೆ ಮುಂದಾದ ಪಾಕಿಸ್ತಾನ

Published : Oct 03, 2025, 10:43 PM IST

ಏಷ್ಯಾಕಪ್ ಟ್ರೋಫಿ ಕದ್ದೊಯ್ದ ನಖ್ವಿಗೆ ಗೋಲ್ಡ್ ಮೆಡಲ್ ಸನ್ಮಾನಕ್ಕೆ ಮುಂದಾದ ಪಾಕಿಸ್ತಾನ,  ಚಾಂಪಿಯನ್ ಟೀಂ ಇಂಡಿಯಾಗೆ ನೀಡಬೇಕಿದ್ದ ಟ್ರೋಫಿಯಲ್ಲಿ ಹೈಡ್ರಾಮ ಮಾಡಿದ ಎಸಿಸಿ ಅಧ್ಯಕ್ಷ ನಖ್ವಿಗೆ ಭಾರಿ ಸನ್ಮಾನ ಕಾರ್ಯಕ್ರಮ ಆಯೋಜನೆಗೊಂಡಿದೆ. ಗೋಲ್ಡ್ ಮೆಡಲ್ ನೀಡಿ ಸನ್ಮಾನಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದೆ

PREV
16
ನಖ್ವಿ ನಡೆಯಿಂದ ಪಾಕಿಸ್ತಾನ ಫುಲ್ ಖುಷ್

ನಖ್ವಿ ನಡೆಯಿಂದ ಪಾಕಿಸ್ತಾನ ಫುಲ್ ಖುಷ್

ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪ್ರತಿ ಪಂದ್ಯ ಭಾರಿ ಹೈಡ್ರಾಮಕ್ಕೆ ಕಾರಣವಾಗಿತ್ತು. ಭಾರತ ಹ್ಯಾಂಡ್‌ಶೇಕ್ ಮಾಡದೇ ಪಂದ್ಯ ಆಡಿತ್ತು. ಇದು ಪಾಕಿಸ್ತಾನವನ್ನು ತೀವ್ರ ಮುಖಭಂಗಕ್ಕೀಡುಮಾಡಿತ್ತು. ಸಹಿಸಿಕೊಳ್ಳಲು ಆಗದೆ,ಪ್ರತಿಭಟಿಸಲು ಆಗದೆ ಚಡಪಡಿಸಿತ್ತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿದ ಭಾರತಕ್ಕೆ ಏಷ್ಯಾಕಪ್ ಟ್ರೋಫಿ ಸಿಗಲಿಲ್ಲ. ಎಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕಿಸ್ತಾನ ಮೊಹ್ಸಿನ್ ನಖ್ವಿ ತಿರುಗೇಟು ನೀಡಲು ಹೈಡ್ರಾಮ ನಡೆದಿತ್ತು. ಏಷ್ಯಾಕಪ್ ಟ್ರೋಫಿ ನೀಡದ ಮೊಹ್ಸಿನ್ ಖಾನ್ ನಡೆ ಪಾಕಿಸ್ತಾನಕ್ಕೆ ಭಾರಿ ಮೆಚ್ಚುಗೆಯಾಗಿದೆ. ಇದೀಗ ಪಾಕ್ ಸರ್ಕಾರ ನಖ್ವಿಗೆ ಸನ್ಮಾನ ಮಾಡಲು ಮುಂದಾಗಿದೆ.

26
ಟ್ರೋಫಿ ಕದ್ದೊಯ್ದ ನಖ್ವಿಗೆ ಗೋಲ್ಡ್ ಮೆಡಲ್

ಟ್ರೋಫಿ ಕದ್ದೊಯ್ದ ನಖ್ವಿಗೆ ಗೋಲ್ಡ್ ಮೆಡಲ್

ಟೀಂ ಇಂಡಿಯಾ ಚಾಂಪಿಯನ್ ಆಗಿ ಮೆರೆದಿತ್ತು. ಪಾಕಿಸ್ತಾನದ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದು ಟೀಂ ಇಂಡಿಯಾ ಸ್ಪಷ್ಟವಾಗಿ ಹೇಳಿತ್ತು. ಟ್ರೋಫಿ ಕೊಟ್ಟರೆ ತಾನೇ ಕೊಡಬೇಕು ಎಂದು ಪಟ್ಟು ಹಿಡಿದ ನಖ್ವಿ ಕೈಯಿಂದ ಭಾರತ ಟ್ರೋಫಿ ಸ್ವೀಕರಿಸಲಿಲ್ಲ. ಇತ್ತ ಟ್ರೋಫಿಯನ್ನು ತನ್ನಲ್ಲೇ ಇಟ್ಟುಕೊಂಡ ನಖ್ವಿಯ ಧೈರ್ಯವನ್ನು ಪಾಕಿಸ್ತಾನ ಸರ್ಕಾರ ಪ್ರಮುಖವಾಗಿ ಸೇನೆ ಭಾರಿ ಮೆಚ್ಚಿಕೊಂಡಿದೆ. ಹೀಗಾಗಿ ಚಿನ್ನದ ಪದಕ ನೀಡಲು ಮುಂದಾಗಿದೆ ಎಂದು ವರದಿಗಳು ಹೇಳುತ್ತಿದೆ.

36
ಶಹೀದ್ ಝುಲ್ಫಿಕರ್ ಅಲಿ ಬುಟ್ಟೋ ಪದಕ

ಶಹೀದ್ ಝುಲ್ಫಿಕರ್ ಅಲಿ ಬುಟ್ಟೋ ಪದಕ

ಕರಾಚಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ನಖ್ವಿಗೆ ಶಹೀದ್ ಝುಲ್ಫಿಕರ್ ಅಲಿ ಭುಟ್ಟೋ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ. ಭಾರತ ಫೈನಲ್ ಗೆದ್ದರೂ ಟ್ರೋಫಿ ನೀಡದೆ ತನ್ನಲ್ಲೇ ಉಳಿಸಿಕೊಂಡ ಮಹತ್ ಕಾರ್ಯಕ್ಕೆ ಈ ಪದಕ ನೀಡಲು ಪಾಕಿಸ್ತಾನ ಮುಂದಾಗಿದೆ.

46
ಅಮಾನಕ್ಕೆ ತಿರುಗೇಟು ಎಂದು ಭಾವಿಸಿರುವ ಪಾಕಿಸ್ತಾನ

ಅಮಾನಕ್ಕೆ ತಿರುಗೇಟು ಎಂದು ಭಾವಿಸಿರುವ ಪಾಕಿಸ್ತಾನ

ಭಾರತದ ಹಲವು ದಿಟ್ಟ ನಡೆಯಿಂದ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗ ಅನುಭವಿಸಿತ್ತು. ಇದಕ್ಕೆ ಟ್ರೋಫಿ ನೀಡದ ಕ್ರಮ ತಿರುಗೇಟು ಎಂದು ಪಾಕಿಸ್ತಾನ ಭಾವಿಸಿದೆ. ಹೀಗಾಗಿ ಪಾಕಿಸ್ತಾನ ಬಾಸ್ಕೆಟ್ ಬಾಲ್ ಅಧ್ಯಕ್ಷ, ಅಡ್ವೋಕೇಟ್ ಗುಲಾಮ್ ಅಬ್ಬಾಸ್ ಜಮಾಲ್ ಈ ಪದಕ ಸನ್ಮಾನ ಘೋಷಿಸಿದ್ದಾರೆ.

56
ಬಿಲ್ವಾಲ್ ಬುಟ್ಟ ಮುಖ್ಯ ಅತಿಥಿ

ಬಿಲ್ವಾಲ್ ಬುಟ್ಟ ಮುಖ್ಯ ಅತಿಥಿ

ಮೊಹ್ಸಿನ್ ನಖ್ವಿಗೆ ಚಿನ್ನದ ಪದಕದ ಸನ್ಮಾನ ಕಾರ್ಯಕ್ರಮಕ್ಕೆ ಪಾಕಿಸ್ತಾನ ಪೀಪಲ್ ಪಾರ್ಟಿ ಮುಖ್ಯಸ್ಥ ಬಿಲ್ವಾಲ್ ಭುಟ್ಟೋ ಜರ್ದಾರಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಟ್ರೋಫಿ ಬೇರೆಯವರಿಂದ ನೀಡಲು ಒಪ್ಪದೇ, ತಾನೇ ಕೊಡಬೇಕು ಎಂದು ಪಟ್ಟು ಹಿಡಿದು ಕೊನೆಗ ಟ್ರೋಫಿ ತನ್ನಲ್ಲೇ ಉಳಿಸಿಕೊಂಡ ಸಾಹಸಕ್ಕೆ ಈ ಸನ್ಮಾನ ನಡೆಯುತ್ತಿದೆ.

66
ಭಾರತಕ್ಕೆ ಆಹ್ವಾನ ನೀಡಿದ ನಖ್ವಿ

ಭಾರತಕ್ಕೆ ಆಹ್ವಾನ ನೀಡಿದ ನಖ್ವಿ

ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆಗಿದೆ. ಟ್ರೋಫಿ ವಿವಾದ ಜೋರಾಗುತ್ತಿದ್ದಂತೆ ನಖ್ವಿ ಭಾರತ ತಂಡಕ್ಕೆ ಆಫರ್ ನೀಡಿದ್ದಾರೆ. ದುಬೈನಲ್ಲಿರುವ ಕಚೇರಿಗೆ ಬಂದು ತಮ್ಮ ಕೈಯಿಂದ ಟ್ರೋಫಿ ಪಡೆದುಕೊಳ್ಳಲಿ ಎಂದಿದ್ದಾರೆ.

Read more Photos on
click me!

Recommended Stories