ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಚಿತ್ತ ಭಾರತದ ಸ್ಟೈಲೀಷ್ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧನಾ ಮೇಲಿದೆ. ಮಂಧನಾ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಮಂಧನಾ ಮನಗೆದ್ದ ಹುಡುಗ ಯಾರು? ಆತನ ಹಿನ್ನೆಲೆ ಏನು? ನೋಡೋಣ ಬನ್ನಿ.
ಸ್ಮೃತಿ ಮಂಧನಾ ಭಾರತದ ಅತ್ಯಂತ ಸುಂದರ ಮಹಿಳಾ ಕ್ರಿಕೆಟರ್‌ಗಳಲ್ಲಿ ಒಬ್ಬರು. ಇವರನ್ನು 'ನ್ಯಾಷನಲ್ ಕ್ರಶ್' ಎಂದೂ ಕರೆಯುತ್ತಾರೆ.
29
ಮುಂಬೈನ ಮಾರ್ವಾಡಿ ಕುಟುಂಬದಲ್ಲಿ ಜನನ
ಸ್ಮೃತಿ ಮಂಧನಾ ಜುಲೈ 18, 1996 ರಂದು ಮುಂಬೈನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕೆಮಿಕಲ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು.
39
15ನೇ ವಯಸ್ಸಿಗೆ ಮಹರಾಷ್ಟ್ರ ಪರ ಕಣಕ್ಕೆ
ಸ್ಮೃತಿಗೆ ಎರಡು ವರ್ಷವಿದ್ದಾಗ, ಅವರ ಕುಟುಂಬ ಸಾಂಗ್ಲಿಗೆ ಸ್ಥಳಾಂತರಗೊಂಡಿತು. ಅಲ್ಲಿನ ಚಿಂತಾಮನ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಪದವಿ ಪಡೆದರು. 15ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಅಂಡರ್-15 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.
15ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಅಂಡರ್-15 ತಂಡಕ್ಕೆ ಆಯ್ಕೆಯಾದ ನಂತರ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಸ್ಮೃತಿ ಎಡಗೈ ಆರಂಭಿಕ ಬ್ಯಾಟರ್. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ.
59
ನಾಲ್ಕು ಐಸಿಸಿ ಟ್ರೋಫಿ ಗೆದ್ದಿರುವ ಮಂಧನಾ
ಸ್ಮೃತಿ ಮಂಧನಾಗೆ ಐಸಿಸಿ ವರ್ಷದ ಕ್ರಿಕೆಟರ್ ಮತ್ತು ಐಸಿಸಿ ವರ್ಷದ ಏಕದಿನ ಕ್ರಿಕೆಟರ್ ಸೇರಿದಂತೆ ನಾಲ್ಕು ಐಸಿಸಿ ಪ್ರಶಸ್ತಿಗಳು ಸಿಕ್ಕಿವೆ. ಡಿಸೆಂಬರ್ 2018 ರಲ್ಲಿ, ಐಸಿಸಿ ಇವರಿಗೆ 'ಕ್ರಿಕೆಟರ್ ಆಫ್ ದಿ ಇಯರ್' ಪ್ರಶಸ್ತಿ ನೀಡಿ ಗೌರವಿಸಿತು.
69
ಪಲಾಶ್ ಮುಚ್ಚಲ್ ಜೊತೆ ಡೇಟಿಂಗ್
ಸ್ಮೃತಿ ಮಂಧನಾ 2019 ರಿಂದ ಸಂಗೀತ ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಖ್ಯಾತ ಹಿನ್ನೆಲೆ ಗಾಯಕಿ ಪಲಶ್ ಮುಚ್ಚಲ್ ಅವರ ಸಹೋದರ.
79
2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ
ಮಂಧನಾ ಆಗಸ್ಟ್ 2014 ರಲ್ಲಿ ಇಂಗ್ಲೆಂಡ್ ವಿರುದ್ಧ ವರ್ಮ್ಸ್ಲಿ ಪಾರ್ಕ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 22 ಮತ್ತು 51 ರನ್ ಗಳಿಸಿದ್ದರು.
89
2013ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ
ಸ್ಮೃತಿ ತಮ್ಮ ಏಕದಿನ ವೃತ್ತಿಜೀವನವನ್ನು ಏಪ್ರಿಲ್ 10, 2013 ರಂದು ಬಾಂಗ್ಲಾದೇಶದ ವಿರುದ್ಧ ಪ್ರಾರಂಭಿಸಿದರು. ಈ ಪಂದ್ಯದಲ್ಲಿ ಅವರು 25 ರನ್ ಗಳಿಸಿದ್ದರು.
99
2013ರಲ್ಲಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ
ಸ್ಮೃತಿ ಮಂಧನಾ ತಮ್ಮ ಟಿ-20 ವೃತ್ತಿಜೀವನವನ್ನು ಏಪ್ರಿಲ್ 5, 2013 ರಂದು ವಡೋದರಾದಲ್ಲಿ ಬಾಂಗ್ಲಾದೇಶದ ವಿರುದ್ಧ ಪ್ರಾರಂಭಿಸಿದರು. ಈ ಪಂದ್ಯದಲ್ಲಿ ಅವರು 39 ರನ್ ಗಳಿಸಿದ್ದರು.