ಈ ವರ್ಷ ಭಾರತದ ಕ್ರಿಕೆಟಿಗರಿಗೆ ಮಾತ್ರವಲ್ಲ, ಪಾಕಿಸ್ತಾನದ ಕ್ರಿಕೆಟಿಗರಿಗೂ ಮದುವೆಯ ವರ್ಷ. ವಿಶ್ವಕಪ್ ಮುಕ್ತಾಯದ ಬೆನ್ನಲ್ಲಿಯೇ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮದುವೆಗಳ ಸೀಸನ್ ಶುರುವಾಗಿದೆ.
ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಅವರ ವಿವಾಹ ಇತ್ತೀಚೆಗೆ ನೆರವೇರಿದೆ. ನಾರ್ವೆ ಹಾಗೂ ಲಾಹೋರ್‌ನಲ್ಲಿ ಮದುವೆ ಸಂಪ್ರದಾಯ ನಡೆದಿದೆ.
ಆತ್ಮೀಯ ಗೆಳತಿ ಡಾ. ಅನ್ಮೋಲ್ ಮೊಹಮದ್ ಅವರನ್ನು ಇಮಾಮ್ ಉಲ್ ಹಕ್ ಮದುವೆಯಾಗಿದ್ದಾರೆ. ಕೆಲ ಸಮಾರಂಭ ನಾರ್ವೆಯಲ್ಲಿ ನಡೆದಿದ್ದರೆ, ಅದ್ದೂರಿ ಮದುವೆ ಲಾಹೋರ್‌ನಲ್ಲಿ ನಡೆದಿದೆ.
ಈ ನಡುವೆ ಇಮಾಮ್ ಉಲ್ ಹಕ್ ಹಾಗೂ ಅನ್ಮೋಲ್ ಮೊಹಮದ್ ತಮ್ಮ ಮದುವೆಯ ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ನೋಡಿದ ಹೆಚ್ಚಿನವರು ಇದು ಬಾಲಿವುಡ್ ಸ್ಟಾರ್‌ಗಳಾದ ವಿಕ್ಕಿ ಕೌಶಾಲ್ ಹಾಗೂ ಕತ್ರೀನಾ ಕೈಫ್ ಅವರ ಮದುವೆಯ ಕಾಪಿಕ್ಯಾಟ್ ಎಂದು ಹೇಳುತ್ತಿದ್ದಾರೆ.
ವಿಕ್ಕಿ ಹಾಗೂ ಕತ್ರೀನಾ ಕೈಫ್ ಅವರ ಮದುವೆಯ ಚಿತ್ರಗಳನ್ನು ಹೋಲುವಂತೆಯೇ ಇಮಾಮ್ ಉಲ್ ಹಕ್ ಹಾಗೂ ಡಾ. ಅನ್ಮೋಲ್ ಮೊಹಮದ್ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.
ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಇಮಾಮ್ ಉಲ್ ಹಕ್, ಪಾಕ್ ಮಾಜಿ ಕ್ರಿಕೆಟಿಗ ಇಂಜುಮಾಮ್ ಉಲ್ ಹಕ್ ಅವರ ಸಂಬಂಧಿಯೂ ಆಗಿದ್ದಾರೆ.
ಡಾ.ಅನ್ಮೋಲ್ ಮೊಹಮದ್ ಹಾಗೂ ಇಮಾಮ್ ಉಲ್ ಹಕ್ ಬಾಲ್ಯದಿಂದಲೇ ಪರಿಚಿತರು ಎಂದು ಹೇಳಲಾಗುತ್ತಿದೆ. ಅನ್ಮೋಲ್, ನಾರ್ವೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.
ನವೆಂಬರ್ 25ರಂದು ಇವರಿಬ್ಬರ ಮದುವೆ ಸಮಾರಂಭ ನಡೆದಿದೆ. ಲಾಹೋರ್‌ನ ಹಳೆಯ ಅರಮನೆಯೊಂದರಲ್ಲಿ ವಿವಾಹ ಸಮಾರಂಭ ನಡೆದಿದೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಇಮಾಮ್ ಹಾಗೂ ಅನ್ಮೋಲ್ ಮೊಹಮದ್ ಇಬ್ಬರೂ ಕೂಡ ಮದುವೆಯ ಆಕರ್ಷಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಅನ್ಮೋಲ್ ಮೊಹಮದ್ ಮದುವೆ, ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮಕ್ಕೆ ತಾವು ಧರಿಸಿದ ವಸ್ತ್ರಗಳ ವಿನ್ಯಾಸಗಳನ್ನೂ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಲಾಹೋರ್‌ನಲ್ಲಿ ಮದುವೆಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣ ಖವ್ವಾಲಿ ಕಾರ್ಯಕ್ರಮ ಕೂಡ ನಡೆದಿತ್ತು. ಈ ವೇಳೆ ಪಾಕಿಸ್ತಾನ ತಂಡದ ಆಟಗಾರರು ಕೂಡ ಆಗಮಿಸಿದ್ದರು.
ಈ ಹಿಂದೆ ಸಂದರ್ಶನವೊಂದರಲ್ಲಿ ಇಮಾಮ್ ಉಲ್ ಹಕ್, ಪಾಕ್ ತಂಡದ ಆಟಗಾರ ಬಾಬರ್ ಅಜಮ್ ಅವರ ಮದುವೆಯ ನಂತರವೇ ತಾವು ಮದುವೆಯಾಗುವುದಾಗಿ ಹೇಳಿದ್ದರು. ಈ ವಿಡಿಯೋ ಕೂಡ ಇವರರ ಮದುವೆಯ ಜೊತೆ ವೈರಲ್ ಆಗುತ್ತಿದೆ.
ಇವರ ಮದುವೆಯ ಚಿತ್ರಗಳು ವಿಕ್ಕಿ ಹಾಗೂ ಕತ್ರೀನಾ ಅವರ ರಾಜಸ್ಥಾನಿ ಸ್ಟೈಲ್‌ನ ಮದುವೆಗೆ ಎಷ್ಟು ಹೋಲಿಕೆ ಆಗುತ್ತಿತ್ತೆಂದರೆ, ಕತ್ರೀನಾ ರೀತಿ ಅನ್ಮೋಲ್ ಕೂಡ, ಪಾಸ್ಟಲ್ ಪಿಂಕ್ ಸ್ಯಾರಿ ಹಾಗೂ ಅದಕ್ಕೆ ಹೊಂದಿಕೆ ಆಗುವ ಮುಸುಕು ಧರಿಸಿದ್ದರು.
ಇನ್ನು ಇಮಾಮ್ ಉಲ್ ಹಕ್ ಕೂಡ ವಿಕ್ಕಿ ಕೌಶಾಲ್ ಧರಿಸಿದ್ದ ರೀತಿಯ ಶೇರ್ವಾನಿಯನ್ನು ಧರಿಸಿದ್ದರು. ಆದರೆ, ಅವರು ಧರಿಸಿದ್ದ ಶೇರ್ವಾನಿಯ ಬಣ್ಣ ಮಾತ್ರವೇ ಡಿಫರೆಂಟ್ ಆಗಿತ್ತು.
ವಿಕ್ಕಿ ಕೌಶಾಲ್ ತಮ್ಮ ಮದುವೆಯಲ್ಲಿ ಚಿನ್ನದ ಬಣ್ಣದ ಶೇರ್ವಾಣಿಯನ್ನು ಧರಿಸಿದ್ದರ,ೆ ಇಮಾಮ್, ಐವರಿ ಬಣ್ಣದ ಶೇರ್ವಾನಿಯೊಂದಿಗೆ ಅದಕ್ಕೆ ಹೊಂದಿಕೆಯಾಗುವ ಪಗಡಿ ಧರಿಸಿದ್ದರು.
ಇನ್ನು ಇಮಾಮ್ ಉಲ್ ಹಕ್ ಹಾಗೂ ಅನ್ಮೋಲ್ ಮೊಹಮದ್ ಅವರ ಮದುವೆ ಲಾಹೋರ್‌ನ ಅರಮನೆಯಲ್ಲಿ ನಡೆದಿದ್ದರೂ, ಅದು ಯಾವ ಅರಮನೆ ಎನ್ನುವ ವಿವರ ನೀಡಲಾಗಿಲ್ಲ.
ನವೆಂಬರ್ 26 ರಂದು ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ಕೂಡ ಭಾಗವಹಿಸಿದ್ದರು.