ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪಾಕ್ ಕ್ರಿಕೆಟಿಗ, ಟ್ರೋಲ್ ಮಾಡಿದವರಿಗೆ ಕೊಟ್ಟ ಉತ್ತರ ವೈರಲ್!

First Published | Sep 18, 2023, 4:53 PM IST

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ದೇಶ ವಿದೇಶಗಳ ಗಣ್ಯರು, ಸೆಲೆಬ್ರೆಟಿಗಳು, ಜನಸಾಮಾನ್ಯರು ಶುಭಕೋರಿದ್ದಾರೆ. ಪಾಕಿಸ್ತಾನದಿಂದ ಹಲವು ಶುಭಾಶಯ ತಿಳಿಸಿದ್ದಾರೆ. ಈ ಪೈಕಿ ಪಾಕಿಸ್ತಾನ ಮಾಜಿ ಸ್ಟಾರ್ ಕ್ರಿಕೆಟಿಗ ಕೂಡ ಶುಭಕೋರಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಕ್ರಿಕೆಟಿಗನ ಟ್ರೋಲ್ ಮಾಡಿದ್ದಾರೆ. ಆದರೆ ಈ ಟ್ರೋಲ್‌ಗೆ ಪಾಕ್ ಕ್ರಿಕೆಟಿಗ ನೀಡಿದ ಉತ್ತರ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೆಪ್ಟೆಂಬರ್ 17 ರಂದು ಮೋದಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಮೋದಿಗೆ ಅಮೆರಿಕ, ಯುಕೆ, ಅರಬ್ ಸೇರಿದಂತೆ ದೇಶ ವಿದೇಶಗಳ ಗಣ್ಯರು ಶುಭಕೋರಿದ್ದಾರೆ. ಭಾರತದ ಬಹುತೇಕ ಕಡೆ ಮೋದಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

ಪ್ರಧಾನಿ ಮೋದಿಗೆ ಪಾಕಿಸ್ತಾನದಿಂದಲೂ ಹಲವರು ಶುಭಕೋರಿದ್ದಾರೆ. ಈ ಪೈಕಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಧಾನೀಶ್ ಕನೇರಿಯಾ ಕೂಡ ಶುಭಕೋರಿದ್ದಾರೆ. ಕನೇರಿಯಾ ಟ್ವೀಟ್ ಶುಭಾಶಯಕ್ಕೆ ಭಾರತದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Tap to resize

ಭಾರತದ ಗಾರ್ಡಿಯನ್ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಶುಭಾಶಯ. ಭಾರತ ಜಗತನ್ನು ಮುನ್ನಡೆಸಬಲ್ಲದು ಎಂದು ಮೋದಿ ಸಾಬೀತುಪಡಿಸಿದ್ದಾರೆ. ಇಂದು ಇಡೀ ವಿಶ್ವ ವಸುಧೈವ ಕುಟುಂಬಕಂ ಕುರಿತು ಮಾತನಾಡುತ್ತಿದೆ. ಮೋದಿ ಉತ್ತಮ ಆರೋಗ್ಯ ಹಾಗೂ ಯಶಸ್ಸಿಗೆ ಭಗವಾನ್ ರಾಮನ ಬಳಿ ಪ್ರಾರ್ಥಿಸುತ್ತೇನೆ ಎಂದು ಕನೇರಿಯಾ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೆಲ ಟ್ವಿಟರ್ ಖಾತೆಗಳಿಂದ ಪಾಕಿಸ್ತಾನ ಕ್ರಿಕೆಟಿಗನ ಟ್ರೋಲ್ ಮಾಡಲು ಶುರ ಮಾಡಿದ್ದಾರೆ. ಈ ಪಕಿ ಡಾ.ನಿಮೋ ಯಾದವ್ ಅನ್ನೋ ಖಾತೆ, ಪಾಕಿಸ್ತಾನ ಯಾರೊಬ್ಬರು ನಮ್ಮ ಪ್ರಧಾನಿ ಕುರಿತು ಒಂದು ಪದ ಹೇಳುವುದು ಇಷ್ಟವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೋಲ್ ಮಾಡಲು ಯತ್ನಿಸಿದವರಿಗೆ ಧಾನೀಶ್ ಕನೇರಿಯಾ ನೀಡಿದ ಉತ್ತರ ಭಾರಿ ವೈರಲ್ ಆಗಿದೆ. ಕಾಬೂಲ್‌ನಿಂದ ಕಮ್ರುಪ್, ಗಿಲ್ಗಿಟ್‌ನಿಂದ ರಾಮೇಶ್ವರಂ. ನಾವೆಲ್ಲ ಒಂದು, ಇದು ಅರ್ಥವಾಗದಿದ್ದವರಿಗೆ ನಾನು ಏನು ಮಾಡಲು ಸಾಧ್ಯ. ನಿಮ್ಮ ಸಲಹೆಯನ್ನು ಪಪ್ಪು ಮನೆಯಲ್ಲಿ ಹೇಳಿ ಎಂದು ಕನೇರಿಯಾ ಹೇಳಿದ್ದಾರೆ.

ಕೊನೆಯಲ್ಲಿನ ಒಂದು ಸಾಲು ಇದೀಗ ಭಾರಿ ಚರ್ಚೆಯಾಗುತ್ತಿದೆ. ಧಾನೀಶ್ ಕನೇರಿಯಾಗೆ ವಾರ್ನಿಂಗ್ ನೀಡಿದವರಿಗೆ ತಿರುಗೇಟು ಜೊತೆಗೆ ಹುಳ ಬಿಟ್ಟಿದ್ದಾರೆ. ನಿಮ್ಮ ಸಲಹೆಯನ್ನು ಪಪ್ಪು ಮನೆಯಲ್ಲಿಟ್ಟುಬಿಡಿ ಎಂದು ಯಾರಿಗೆ ಹೇಳಿದ್ದಾರೆ ಅನ್ನೋ ಇದೀಗ ಚರ್ಚೆ.

ಧಾನೀಶ್ ಕನೇರಿಯಾ ನೀಡಿದ ಉತ್ತರಕ್ಕೆ ಹಲವು ಕಮೆಂಟ್ ಮಾಡಿದ್ದಾರೆ. ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್, ಒಂದು ಎಸೆತಕ್ಕೆ 10 ವಿಕೆಟ್ ಉರುಳಿ ಬಿತ್ತು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೆ ಕೆಲವರು ಧಾನೀಶ್ ಕನೇರಿಯಾ ನೀವು ಪಾಕಿಸ್ತಾನದಿಂದ ಭಾರತಕ್ಕೆ ಬಂದು ಬಿಡಿ, ಇಲ್ಲಿನ ಪೌರತ್ವ ಪಡೆದುಕೊಳ್ಳಿ. ಪಾಕಿಸ್ತಾನ ನಿಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಸಲಹೆ ನೀಡಿದ್ದಾರೆ.

Latest Videos

click me!