ಒಂದೇ ಒಂದು ಸಿಕ್ಸರ್ ಹೊಡೆಯದೆ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚ ರನ್ ಗಳಿಸಿದ ಭಾರತದ ಈ ಕ್ರಿಕೆಟಿಗ ಯಾರು?

Published : Oct 30, 2026, 12:31 PM IST

ODI Most runs without hitting six manoj prabhakar: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸ್ ಹೊಡೆಯದೆ ಸಾವಿರಾರು ರನ್ ಗಳಿಸಿದ ಈ ಮೂವರು ಆಟಗಾರರಲ್ಲಿ ಭಾರತದ ಮಾಜಿ ಕ್ರಿಕೆಟಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅವರ ಪಟ್ಟಿ, ಆಡಿದ ಪಂದ್ಯ, ಗಳಿಸಿದ ರನ್‌ಗಳ ವಿವರ ಇಲ್ಲಿದೆ.

PREV
13
ಮನೋಜ್ ಪ್ರಭಾಕರ್ ಭಾರತ ತಂಡದ ಮಾಜಿ ಕ್ರಿಕೆಟಿಗನ ವಿಶಿಷ್ಟ ಸಾಧನೆ

IPL ಪಂದ್ಯಗಳಿಂದಾಗಿ ಇಂದು ಅಭಿಮಾನಿಗಳು ಕ್ರಿಕೆಟ್ ನೋಡುವ ರೀತಿಯೇ ಬದಲಾಗಿಹೋಗಿದೆ. ಈಗ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸುವ ಕ್ರಿಕೆಟಿಗರ ಬಗ್ಗೆ ಚರ್ಚಿಸಿದಾಗ ಪ್ರತಿ ಬಾಲಿಗೂ ಸಿಕ್ಸ್, ಫೋರ್ ಚಚ್ಚುವ ಬ್ಯಾಟ್ಸಮನ್ ಹೆಸರುಗಳೇ ಹೆಚ್ಚು ಹೇಳಲಾಗುತ್ತದೆ. ಯಾವುದೇ ಪಂದ್ಯಗಳಿರಲಿ ಮೈದಾನದ ಮೂಲೆಮೂಲೆಗೂ ಸಿಕ್ಸರ್ ಬಾರಿಸುವ ಆಟಗಾರನೇ ಉತ್ತಮ ಆಟಗಾರನೆಂದು ತೀರ್ಮಾನಕ್ಕೆ ಬರಲಾಗುತ್ತದೆ. ಇಂದು ಉತ್ತಮ ಆಟಗಾರರು ಯಾರೆಂಬ ವಿಚಾರಕ್ಕೆ ಬದರೆ ಮೊದಲಿಗೆ ನೆನಪಿಗೆ ಬರುವುದೇ ಸೂರ್ಯವಂಶಿ, ಅಭಿಷೇಕ್ ಶರ್ಮಾ.. ಹೆಸರು. ಆದರೆ ಏಕದಿನ ಕ್ರಿಕೆಟ್ ಇತಿಹಾಸಲ್ಲಿ ಒಂದೇ ಸಿಕ್ಸ್ ಹೊಡೆಯದೆ ಸಾವಿರಾರು ರನ್ ಗಳಿಸಿದ ಕೆಲವು ಆಟಗಾರರು ಇದ್ದಾರೆ ನಿಮಗಿದು ಗೊತ್ತೇ?

ಹೌದು. ಭಾರತದ ಮಾಜಿ ಆಲ್‌ರೌಂಡರ್ ಮನೋಜ್ ಪ್ರಭಾಕರ್(Manoj Prabhakar) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜಿಂಬಾಬ್ವೆ ಮತ್ತು ಇಂಗ್ಲೆಂಡ್‌ನ ಇಬ್ಬರು ಬ್ಯಾಟ್ಸ್‌ಮನ್‌ಗಳು ಸಹ ಈ ವಿಶಿಷ್ಟ ದಾಖಲೆ ಮಾಡಿದ್ದಾರೆ. ಆಡಿದ ಅಷ್ಟು ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಸಿಕ್ಸ್ ಬಾರಿಸಿಲ್ಲ!

ಭಾರತದ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 130 ಏಕದಿನ ಪಂದ್ಯಗಳನ್ನು ಆಡಿದ್ದರೂ ಒಂದೇ ಒಂದು ಸಿಕ್ಸ್ ಬಾರಿಸಿಲ್ಲ. 98 ಇನ್ನಿಂಗ್ಸ್‌ಗಳಲ್ಲಿ ಒಟ್ಟು 1,858 ರನ್ ಗಳಿಸಿದ್ದಾರೆ. ಆಚ್ಚರಿ ಎಂದರೆ ಅವರು ತಮ್ಮ ಏಕದಿನ ವೃತ್ತಿಜೀವನದಲ್ಲೇ ಒಂದೇ ಒಂದು ಸಿಕ್ಸ್ ಬಾರಿಸಲಿಲ್ಲ. ಪ್ರಭಾಕರ್ ಅದ್ಭುತ ಆಟಗಾರ. ಬ್ಯಾಟಿಂಗ್, ಬೌಲಿಂಗ್‌ ಎರಡರಲ್ಲೂ ಹೆಸರುವಾಸಿ ಆಟಗಾರರಾಗಿದ್ದರು. ಏಕದಿನ ಪಂದ್ಯಗಳಲ್ಲಿ ಅವರು ಎರಡು ಸೆಂಚುರಿ, 11 ಅರ್ಧಶತಕ ಸಿಡಿಸಿದ್ದಾರೆ. ಆದರೆ ಒಂದೇ ಒಂದು ಸಿಕ್ಸ್ ಬಾರಿಸಿಲ್ಲ. ಅಂದಿನ ಟೀಂ ಇಂಡಿಯಾಗೆ ಆಲ್‌ರೌಂಡರ್ ಆಗಿ ಹಲವು ಪಂದ್ಯಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

23
ಡಿಯೋನ್ ಇಬ್ರಾಹಿಂ 82 ಏಕದಿನ ಪಂದ್ಯ 1,443 ರನ್, ಸಿಕ್ಸರ್ ಇಲ್ಲ!

ಜಿಂಬಾಬ್ವೆಯ ಮಾಜಿ ಬ್ಯಾಟ್ಸ್‌ಮನ್ ಡಿಯೋನ್ ಇಬ್ರಾಹಿಂ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 82 ಏಕದಿನ ಪಂದ್ಯಗಳಲ್ಲಿ 1,443 ರನ್ ಗಳಿಸಿದ್ದಾರೆ, ಆದರೆ ಅವರ ಇಡೀ ಏಕದಿನ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸ್ ಬಾರಿಸಿಲ್ಲ. ಇಬ್ರಾಹಿಂ ಅವರ ಅತ್ಯಧಿಕ ಏಕದಿನ ಸ್ಕೋರ್ 121. ಅವರ ಬ್ಯಾಟಿಂಗ್ ಸ್ಫೋಟಕ ಬ್ಯಾಟಿಂಗ್ ಬದಲು ಇನ್ನಿಂಗ್ಸ್ ಗೆಲುವಿಗೆ ಒತ್ತು ಕೊಡುತ್ತಿದ್ದರು. ಹೀಗಾಗಿ ಅವರು ರನ್ ಗಳಿಸಲು ಬೌಂಡರಿ ಅಥವಾ ಒಂದು ಎರಡು ರನ್ ಮಾತ್ರ ಅವಲಂಬಿಸಿದ್ದರು.

33
ಜೆಫ್ರಿ ಬಾಯ್ಕಾಟ್ 1,082 ರನ್ ಗಳಿಸಿದ್ರೂ ಒಂದೇ ಒಂದು ಸಿಕ್ಸರ್ ಇಲ್ಲದದ!

ಜೆಫ್ರಿ ಬಾಯ್ಕಾಟ್ 1,082 ರನ್ ಗಳಿಸಿದರು.

ಇಂಗ್ಲೆಂಡ್‌ನ ಲೇಜೆಂಡ್ ಬ್ಯಾಟ್ಸ್‌ಮನ್ ಜೆಫ್ರಿ ಬಾಯ್ಕಾಟ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 36 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1,082 ರನ್ ಗಳಿಸಿದ್ದಾರೆ. ಆದರೆ ಅವರು ಆಡಿದ ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ. ಬಾಯ್ಕಾಟ್ ಬ್ಯಾಟಿಂಗ್‌ನಲ್ಲಿನ ತಂತ್ರಗಾರಿಕೆ, ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವುದರಲ್ಲಿ ಹೆಸರುವಾಸಿ. ಯಾವುದೇ ಬೌಲಿಂಗ್ ಹಾಕಿದರೂ ರನ್‌ ಗಳಿಸುತ್ತಿದ್ದರು. ಹೀಗೆ ಇಡೀ ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಸಿಕ್ಸರ್ ಹೊಡೆಯದೆ ಸಾವಿರಾರು ರನ್ ಗಳಿಸಿದ್ದರು.

ಈ ಮೂವರು ಬ್ಯಾಟ್ಸಮನ್‌ಗಳ ಏಕದಿನ ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದಾಗ, ಅತಿಹೆಚ್ಚು ರನ್‌ ಗಳಿಸಲು ಸಿಕ್ಸರ್ ಬಾರಿಸುವುದರ ಮೇಲೆ ಡಿಪೆಂಡ್ ಆಗಿಲ್ಲ ಎಂದು ತೋರಿಸುತ್ತದೆ. ಈ ಮೂವರು ಬ್ಯಾಟ್ಸಮನ್‌ಗಳಲ್ಲಿ ಭಾರತೀಯ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅಗ್ರಸ್ಥಾನದಲ್ಲಿರುವುದು ಭಾರತೀಯ ಕ್ರಿಕೆಟ್‌ಗೆ ಮಹತ್ವದ್ದಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories