ಎಂಎಸ್ ಧೋನಿ ಸಿಎಸ್‌ಕೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಧೋನಿ ನಿವೃತ್ತಿಗೆ ಆರ್‌ಸಿಬಿ ಭಾವುಕ ಪೋಸ್ಟ್ ಮಾಡಿದೆ. ಎರಡು ಪೋಸ್ಟ್ ಮೂಲಕ ಧೋನಿ ಜೊತೆಗಿನ ಹಲವು ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದೆ. ಇದೇ ವೇಳೆ ಕುತೂಹಲದ 007 ಪೋಸ್ಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಎಂಎಸ್ ಧೋನಿ ಸುದೀರ್ಘ ಐಪಿಎಲ್ ಪಯಣಕ್ಕೆ ವಿದಾಯ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೂಪರ್ ಸ್ಟಾರ್, ಯಶಸ್ವಿ ನಾಯಕ ಧೋನಿ ಐಪಿಎಲ್ 2027ರ ಹರಾಜಿಗೂ ಮುನ್ನ ನಿವೃತ್ತಿ ಹೇಳಿದ್ದಾರೆ. ಇದೀಗ ಸಿಎಸ್‌ಕೆ ಮೆಂಟರ್ ಆಗಿ ಧೋನಿ ಆಯ್ಕೆಯಾಗಿದ್ದಾರೆ. ಧೋನಿ ನಿವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡು ಪೋಸ್ಟ್ ಮೂಲಕ ಹಲವು ನೆನಪುಗಳನ್ನು ಹಂಚಿಕೊಂಡಿದೆ.
26
ಥಾಂಕ್ಯೂ ಮಾಹಿ ಭಾಯಿ
ಆರ್‌ಸಿಬಿ ತನ್ನ ಪೋಸ್ಟ್‌ನಲ್ಲಿ ಧೋನಿಗೆ ಶುಭಹಾರೈಸಿದೆ. ಕಳೆದ 2 ದಶಕಗಳ ಸುದೀರ್ಘ ಪಯಣ, ಜವಾಬ್ದಾರಿಗಳ ಹೊತ್ತು ದಿಗ್ಗಜನಾಗಿ ಸತತ ಟ್ರೋಫಿಗಳ ಸಾಧನೆ, ಮೈದಾನದಲ್ಲಿನ ಐತಿಹಾಸಿಕ ಕ್ಷಣಗಳು,ಕೊನೆಯ ಎಸೆತದಲ್ಲಿ ಮ್ಯಾಚ್ ಫಿನೀಶ್, ಜೊತೆಗೆ ಕೂಲ್ ಕೂಲ್. ಧೋನಿ ಪ್ರತಿ ಕ್ಷಣ ಅಭಿಮಾನಿಗಳ ರಂಜಿಸಿದ್ದಾರೆ. ರೋಚಕ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟು ಗೆಲ್ಲಿಸಿದ್ದಾರೆ. ಪ್ರತಿ ಜರ್ಸಿಯಲ್ಲಿ ಧೋನಿ ಆಡಿದ ಕ್ರಿಕೆಟ್, ನೀಡಿದ ಖುಷಿ ಅಪಾರ, ಥಾಂಕ್ಯೂ ಮಾಹಿ ಭಾಯಿ ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ.
36
ಮಾಹಿ 007
ಧೋನಿ ವಿದಾಯ ಹೇಳುತ್ತಿದ್ದಂತೆ ಆರ್‌ಸಿಬಿ ಧೋನಿಯ ಜರ್ಸಿ ಹಾಗೂ ಹೆಲಿಕಾಪ್ಟರ್ ಶಾಟ್ ಎರಡನ್ನು ಸಮೀಕರಿಸಿ ಜೇಮ್ಸ್ ಬಾಂಡ್ ಸಿನಿಮಾ ರೀತಿಯ ಪೋಸ್ಟ್ ಮಾಡಿದೆ. ಎಂಎಸ್‌ಡಿ 007 ಎಂಬ ಪೋಸ್ಟ್ ಜೊತೆಗೆ ಹೆಲಿಕಾಪ್ಟರ್ ಚಿತ್ರ ಎಂಎಸ್ ಧೋನಿಯ ಅತ್ಯುದ್ಭುತ ಜರ್ನಿಯನ್ನು ಹೇಳುತ್ತಿದೆ.
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಸೇರಿದಂತೆ ಆರ್‌ಸಿಬಿ ತಂಡದ ಪ್ರಮುಖರ ಜೊತೆ ಧೋನಿ ಸಮಯ ಕಳೆದ ಫೋಟೋಗಳನ್ನು ಆರ್‌ಸಿಬಿ ಹಂಚಿಕೊಂಡಿದೆ. ಡೆಡ್‌ಲೈನ್ ಮುಗಿಯುವ ಮೂರೇ ದಿನ ಇರುವಾಗ ಧೋನಿ ವಿದಾಯದ ಸೂಚನೆ ನೀಡಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿಗೆ ತಾವು ವಿದಾಯ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು. ಇದೀಗ ಘೋಷಣೆಯೂ ಹೊರಬಿದ್ದಿದೆ.
56
ಶಾಂತವಾಗಿ ಹೇಳಿದ ಧೋನಿ
ಕಳೆದ ಹಲವು ದಿನಗಳಿಂದ ಧೋನಿ ಹಾಗೂ ಫ್ರಾಂಚೈಸಿ ಆಟಗಾರರ ರಿಟೇನ್ ಹಾಗೂ ರಿಲೀಸ್ ಕುರಿತು ಚರ್ಚೆ ನಡೆಸಿತ್ತು. ಕೊನೆಗೆ ಅಂತಿಮ ಪಟ್ಟಿ ತಯಾರಿಸಿತ್ತು. ಈ ಪಟ್ಟಿಯನ್ನು ಸಿಇಒ ಕಾಶಿನಾಥನ್ ಓದಿದ್ದಾರೆ. ಓದಿ ಮುಗಿಯುತ್ತಿದ್ದಂತೆ ಧೋನಿ ಈ ಪಟ್ಟಿಯಲ್ಲಿ ನೀವು ನನ್ನ ಹೆಸರನ್ನು ಸೇರಿಸಬೇಕು ಎಂದು ಶಾಂತವಾಗಿ ಹೇಳಿದ್ದಾರೆ. ಈ ಮೂಲಕ ಧೋನಿ ತಾವು ನಿವೃತ್ತಿಯಾಗುತ್ತಿದ್ದಾರೆ ಅನ್ನೋದನ್ನು ಸೌಮ್ಯವಾಗಿ, ಸರಳವಾಗಿ ಹೇಳಿದ್ದರು. ಆದರೆ ಸಿಎಸ್‌ಕೆ ಅರಗಿಸಿಕೊಳ್ಳಲು ಕೆಲ ಹೊತ್ತು ತಗೆದುಕೊಂಡಿತ್ತು.
66
ಧೋನಿ ಫಿಟ್ನೆಸ್
ಮೆಂಟರ್ ಆಗಿ ಧೋನಿ 2027ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧೋನಿ ಪ್ರತಿ ಬಾರಿ ತಂಡಕ್ಕೆ ಶೇಕಡಾ 100ರಷ್ಟು ಶಕ್ತಿ ಸಾಮರ್ಥ್ಯ ನೀಡುತ್ತಾರೆ. ಸದ್ಯ ಫಿಟ್ನೆಸ್ ಕುರಿತು ಧೋನಿ ಹಲವು ಪರೀಕ್ಷೆಗಳ ಬಳಿಕ ನಿಲುವು ಪ್ರಕಟಿಸಿದ್ದಾರೆ. ಧೋನಿ ಮಾತು ಕೇಳಿ ಅಭಿಮಾನಿಗಳಿಗೂ ಶಾಕ್ ಆಗಿದೆ. ಸಿಎಸ್‌ಕೆ ಅಭಿಮಾನಿಗಳು ಧೋನಿಗೆ ಸೂಕ್ತ ವಿದಾಯ ಹೇಳಲು ಸಾಧ್ಯವಾಗಲಿಲ್ಲ ಎಂದು ಕೊರಗುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.