'10 ವರ್ಷಗಳ ಬಳಿಕ ಪಶ್ಚತ್ತಾಪ ಪಡ್ತಾರೆ..' ವಿರಾಟ್ ಕೊಹ್ಲಿ ಬಗ್ಗೆ ಕಪಿಲ್ ದೇವ್ ಸ್ಫೋಟಕ ಹೇಳಿಕೆ, ಬೆಚ್ಚಿಬಿದ್ದ ಫ್ಯಾನ್ಸ್!

Published : Nov 17, 2026, 11:58 AM IST

ವಿರಾಟ್ ಕೊಹ್ಲಿ ಮೇ.12, 2025 ರಂದು ತಮ್ಮ ಟೆಸ್ಟ್ ಕ್ರಿಕೆಟ್‌ನ ವೃತ್ತಿಜೀವನಕ್ಕೆ ನಿವೃತ್ತಿ. ಆ ವಿಚಾರವಾಗಿ ಇದೀಗ ಮಾಜಿ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ನೀಡಿರುವ ಹೇಳಿಕೆ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಅವರು ಏನು ಹೇಳಿದರು. ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿ ತಪ್ಪು ಮಾಡಿದರೆ?

PREV
16
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ; ಕಪಿಲ್ ದೇವ್ ಹೇಳಿಕೆ ಸಂಚಲನ

ವಿರಾಟ್ ಕೊಹ್ಲಿ ಮೇ.12, 2025 ರಂದು ತಮ್ಮ ಟೆಸ್ಟ್ ಕ್ರಿಕೆಟ್‌ನ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದರು. ಆ ವಿಚಾರವಾಗಿ ಇದೀಗ ಮಾಜಿ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ನೀಡಿರುವ ಹೇಳಿಕೆ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಅವರು ಏನು ಹೇಳಿದರು. ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿ ತಪ್ಪು ಮಾಡಿದರೆ? ಪಶ್ಚತ್ತಾಪ ಪಡುವ ಕಾಲ ಬರುತ್ತದೆಯೇ? ಅವರ ಹೇಳಿಕೆಯ ಸಂಪೂರ್ಣ ವಿವರ ಇಲ್ಲಿದೆ.

26
ವಿರಾಟ್ ಕೊಹ್ಲಿ 10 ವರ್ಷಗಳ ನಂತರ ಪಶ್ಚತ್ತಾಪ ಪಡ್ತಾರೆ!

ಇಂಗ್ಲೆಂಡ್ ವಿರುದ್ಧದ ಸರಣಿ ಸಮೀಪಿಸುತ್ತಿದ್ದಾಗಲೇ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅವರ ಈ ಹಠಾತ್ ನಿರ್ಧಾರವು ಜಗತ್ತಿಗೆ ಅಚ್ಚರಿ ಮೂಡಿಸಿತು. ಆದರೆ ಆ ವಿಚಾರವಾಗಿ ಇದೀಗ ಕಪಿಲ್ ದೇವ್ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಿವೃತ್ತಿ ಹೊಂದಿದ ಕೊಹ್ಲಿ ನಿರ್ಧಾರವನ್ನ ಟೀಕಿಸಿದ್ದಾರೆ.

ಮಿಡ್‌-ಡೇ ವರದಿ ಪ್ರಕಾರ; ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಸಮೀಪಿಸಿದ ಹೊತ್ತಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮೂಲಕ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ಅಷ್ಟೇ ಅಲ್ಲ; ಈ ತಪ್ಪಿಗೆ ಅವರು (ವಿರಾಟ್ ಕೊಹ್ಲಿ) 10 ವರ್ಷಗಳ ಬಳಿಕ ಈ ನಿರ್ಧಾರಕ್ಕೆ ವಿಷಾದಿಸಲಿದ್ದಾರೆ ಎಂದರು. 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ವಿರಾಟ್ ನಿವೃತ್ತಿಯ ಬಗ್ಗೆ ಈ ಹೇಳಿಕೆಯಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ವಿರಾಟ್ ಕೊಹ್ಲಿ 25 ವರ್ಷದ ಆಟಗಾರನಿಗೆ ಸವಾಲು ಹಾಕಿ ನಿಲ್ಲಬಹುದಿತ್ತು. ಆದರೆ ಕೋಪದಲ್ಲಿ ನಿವೃತ್ತಿ ಘೋಷಣೆ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

36
ವಿರಾಟ್ ಕೊಹ್ಲಿ ಫಿಟ್‌ನೆಸ್ ಅದ್ಭುತವಾಗಿದೆ: ಕಪಿಲ್ ದೇವ್

ನಿಜವಾಗಿಯೂ ಹೇಳ್ತೇನೆ, ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ವಿರಾಟ್ ಕೊಹ್ಲಿ ದೊಡ್ಡ ತಪ್ಪು ಮಾಡಿದ್ದಾರೆ. ಈ ತಪ್ಪಿಗೆ ಈಗ ಮುಂದಿನ ಹತ್ತು ವರ್ಷಗಳ ನಂತರ ಪಶ್ಚತ್ಟಾಪ ಪಡುತ್ತಾರೆ. ತಮ್ಮ ನಿರ್ಧಾರಕ್ಕೆ ವಿಷಾದಿಸದೆ ಇರಲಾರರು. ವಿರಾಟ್ ಕೊಹ್ಲಿ ನಿವೃತ್ತಿ ಹೊಂದಬಾರದಿತ್ತು. ಕೊಹ್ಲಿ ಅದ್ಭುತ ಫಿಟ್‌ನೆಸ್ ಹೊಂದಿದ್ದಾರೆ, ಇತರೆ ಆಟಗಾರರಿಗೆ ಹೋಲಿಸಿದರೆ ಕೊಹ್ಲಿ ಫಿಟ್‌ನೆಸ್ ಅದ್ಭುತವಾಗಿದೆ. ಹೀಗಿದ್ದರೂ ಕೋಪದಲ್ಲಿ ಇಂಥ ನಿರ್ಧಾರಕ್ಕೆ ಬರಬಾರದಿತ್ತು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

46
ವಿರಾಟ್ ಕೊಹ್ಲಿ ಮೊಹಿಂದರ್ ಅಮರನಾಥ್ ಅವರ ಇರಬೇಕಿತ್ತು

ವಿರಾಟ್ ಕೊಹ್ಲಿ ಅವರ ಅನುಭವ, ಪ್ರಭಾವ ನೋಡಿದರೆ ಆ 25 ವರ್ಷದ ಆಟಗಾರನಿಗೆ ಸವಾಲು ಹಾಕಿ ನಿಲ್ಲಬಹುದಿತ್ತು ಎಂದಿರುವ ಕಪಿಲ್ ದೇವ್, ಆದರೆ ವಿರಾಟ್ ಕೊಹ್ಲಿ ಕೋಪದ ಭರದಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಆ ರೀತಿ ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅವರು ಮೊಹಿಂದರ್ ಅಮರನಾಥ್ ಅವರಂತೆ ಇರಬೇಕಿತ್ತು. ಮೊಹಿಂದರ್ ಅಮರನಾಥ್ ಅವರನ್ನೂ ತಂಡದಿಂದ ಹಲವು ಬಾರಿ ಕೈಬಿಡಲಾಗಿತ್ತು. ಆದರೆ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಆಗುವ ಎಲ್ಲರ ತಪ್ಪುಗಳನ್ನ ಸಾಬೀತುಪಡಿಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್‌ ಗಳಿಸಿರುವ ಆಟಗಾರರಾಗಿ ಕೊಹ್ಲಿ ನಿವೃತ್ತರಾಗಿದ್ದಾರೆ. 123 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ ಅವರು 9,230 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 30 ಶತಕ ಸಿಡಿಸಿದ್ದಾರೆ. ಇದು ಸಾಮಾನ್ಯ ಸಾಧನೆಯೇನಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.

56
ರೋಹಿತ್ ಶರ್ಮಾ ಬಗ್ಗೆ ಕಪಿಲ್ ದೇವ್ ಹೇಳಿದ್ದೇನು?

ಇದೇ ವೇಳೆ ಕಪಿಲ್ ದೇವ್ ಅವರು ರೋಹಿತ್ ಶರ್ಮಾ ಅವರ ಬಗ್ಗೆಯೂ ಮಾತನಾಡಿದ್ದಾರೆ. 'ವಿರಾಟ್ ಕೊಹ್ಲಿಯಂತೆ ರೋಹಿತ್ ಶರ್ಮಾ ಈಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಎಂದಿನಂತೆ ಅವರು ಆಡಲು ಸಾಧ್ಯವಾದ್ರೆ ಮುಂದುವರಿಯುತ್ತಾರೆ. ಇಲ್ಲವಾದರೆ ಆಯ್ಕೆದಾರರು ನಿರ್ಧಾರ ತೆಗೆದುಕೊಂಡರೆ ಅವರ ವೃತ್ತಿ ಜೀವನವೂ ಅಲ್ಲಿಗೆ ಮುಗಿಯುತ್ತದೆ. ಅವರನ್ನು ಏಕದಿನ ಪಂದ್ಯದಲ್ಲಿ ಮುಂದುವರಿಸಬೇಕೋ, ಬೇಡವೋ ಅದನ್ನ ಆಯ್ಕೆದಾರರು ಮಾಡುತ್ತಾರೆ. ಏಕೆಂದರೆ ಅವರು ಭಾರತೀಯ ಕ್ರಿಕೆಟ್ ದೃಷ್ಟಿಯಿಂದ ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ

66
ರೋಹಿತ್ ಶರ್ಮಾ ನಿವೃತ್ತಿ ಯಾವಾಗ? ಕಪಿಲ್ ದೇವ್ ಹೇಳಿದ್ದೇನು?

ರೋಹಿತ್ ಉತ್ತಮ ಬ್ಯಾಟರ್, ಬಹಳ ವರ್ಷಗಳಿಂದ ಟೀಂ ಇಂಡಿಯಾ ಪರ ಅದ್ಭುತ ಆಡುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಎಂಎಸ್ ಧೋನಿ, ರವಿಚಂದ್ರನ್ ಅಶ್ವಿನ್ ಅವರು ಕೂಡ ಅದ್ಭುತ ಆಟಗಾರರು ಆದರೆ ಇಂದು ಅವರಾರು ಇಲ್ಲ. ಅದರಂತೆಯೇ ರೋಹಿತ್ ಶರ್ಮಾ ಅವರ ವೃತ್ತಿ ಜೀವನವು ಮುಂದಿನ ದಿನಗಳಲ್ಲಿ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ. ಅಂದರೆ ಈಗ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೊದಲಿನಂತೆ ಯಂಗ್ ಎನರ್ಜಿಟಿಕ್ ಆಗಿ ಆಟ ಆಡುವವರಿಗೆ ಮಾತ್ರ ಟೀಂ ನಲ್ಲಿ ಮುಂದುವರಿಯಬಹುದು. ಅನಂತರ ಟೀಂ ಆಯ್ಕೆ ಸಮಿತಿ ಬೇರೆಯೇ ನಿರ್ಧಾರ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories