ಯಾರ ಕೈಗೆಗೂ ಸಿಗದೆ ಐಪಿಎಲ್‌ನಿಂದ ಧೋನಿ ನಿವೃತ್ತಿ, ಮೆಂಟರ್ ಆದ್ರೂ ಬೇಸರ ಹೊರಹಾಕಿದ ಫ್ಯಾನ್ಸ್

Published : Nov 17, 2026, 03:47 PM IST

ಐಪಿಎಲ್ ಟೂರ್ನಿಯಿಂದ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈ ಬಾರಿಯೂ ಧೋನಿ ಯಾರ ಕೈಗೆ ಸಿಗದೇ ನಿವೃತ್ತಿ ಹೇಳಿದ್ದಾರೆ. ಅಭಿಮಾನಿಗಳು ಭಾವುಕರಾಗಿದ್ದಾರೆ. ಅಷ್ಟಕ್ಕೂ ಧೋನಿ ನಿವೃತ್ತಿಗಿಂತ, ಘೋಷಣೆಯಲ್ಲಿ ಅಭಿಮಾನಿಗಳಿಗೆ ಆಗಿರುವ ನೋವೇನು?

PREV
16
ಧೋನಿ ನಿವತ್ತಿ ರೀತಿಗೆ ಬೇಸರ

ಟೀಂ ಇಂಡಿಯಾದಿಂದ ನಿವೃತ್ತಿಯಾದ ಬಳಿಕ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯವಾಗಿದ್ದ ಎಂಎಸ್ ಧೋನಿ ಇದೀಗ ಐಪಿಎಲ್ ಟೂರ್ನಿಯಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಧೋನಿ ನಿವೃತ್ತಿ ಘೋಷಣೆ ಬೆನ್ನಲ್ಲೇ ಸಿಎಸ್‌ಕೆ ಫ್ರಾಂಚೈಸಿ ತನ್ನ ಮೆಂಟರ್ ಆಗಿ ನೇಮಕ ಮಾಡಿದೆ. ಧೋನಿ ನಿವೃತ್ತಿ ಹೇಳುತ್ತಿದ್ದಂತೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದೇ ವೇಳೆ ಧೋನಿ ನಿವೃತ್ತಿಗಿಂತ ಘೋಷಿಸಿದ ರೀತಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

26
ಅಭಿಮಾನಿಗಳಿಗೇ ನೋವೇನು?

ಎಂಎಸ್ ಧೋನಿ ಕ್ರಿಕೆಟ್ ಚಾಂಪಿಯನ್. ವಿಶ್ವಕಪ್ ಟ್ರೋಫಿ, ಐಪಿಎಲ್ ಟ್ರೋಫಿ ಸೇರಿ ಧೋನಿ ರೀತಿ ಸಾಧನೆ ಮಾಡಿದ ಕ್ರಿಕೆಟಿಗ ಮತ್ತೊಬ್ಬನಿಲ್ಲ. ಆದರೆ ಧೋನಿ ತಮ್ಮ ವಿದಾಯ, ನಿವೃತ್ತಿ ವಿಚಾರದಲ್ಲಿ ತಮ್ಮ ಎಂದಿನ ಶೈಲಿ ಅನುಸರಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಮುಂದಿನ ಪಂದ್ಯ, ಮುಂದಿನ ಸರಣಿ, ಮುಂದಿನ ಆವೃತ್ತಿ ತನ್ನ ಕೊನೆಯ ಸರಣಿ ಎಂದು ಘೋಷಿಸಿ ಧೋನಿ ಯಾವತ್ತೂ ನಿವೃತ್ತಿ ಹೇಳಿಲ್ಲ. ಎಲ್ಲವೂ ದಿಢೀರ್ ಹಾಗೂ ಸದ್ದಿಲ್ಲದೆ ಮಾಡುವ ಘೋಷಣೆ.

36
ಕೊನೆಯದಾಗಿ ವಿದಾಯ ಪಂದ್ಯಕ್ಕೂ ಅವಕಾಶವಿಲ್ಲ.

ಧೋನಿ ವಿದಾಯ ಪಂದ್ಯ ಆಡಿದ್ದರೂ ಕೊನೆಯದಾಗಿ ಧೋನಿಯ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಅವಕಾಶವಿತ್ತು. ಆದರೆ ಧೋನಿ ಟೆಸ್ಟ್, ಏಕದಿನ, ಟಿ20 ಹಾಗೂ ಇದೀಗ ಐಪಿಎಲ್ ನಿವತ್ತಿ ಎಲ್ಲವೂ ಒಂದೇ ರೀತಿ. ಸೈಲೆಂಟ್ ಆಗಿ ಘೋಷಿಸಿದ್ದಾರೆ. ಧೋನಿ ಕೊನೆಯದಾಗಿ ಮೈದಾನಕ್ಕಿಳಿದು ಎಲ್ಲರಿಂದ ಗೌರವ ಸ್ವೀಕರಿಸಿದ ಉದಾಹರಣೆ ಇಲ್ಲ. ಐಪಿಎಲ್ ಟೂರ್ನಿಯಲ್ಲಿ ಇದನ್ನು ಅಭಿಮಾನಿಗಳು ನಿರೀಕ್ಷಿಸಿದ್ದರು. ಇದು ಫ್ಯಾನ್ಸ್‌ಗೆ ಬೇಸರ ತರಿಸಿದೆ.

46
ಮೆಂಟರ್ ಆಗಿ ಧೋನಿ

ಸಿಎಸ್‌ಕೆ ತಂಡದ ಆಟಗಾರನಾಗಿ ಧೋನಿ ನಿವೃತ್ತಿಯಾಗಿದ್ದಾರೆ. ಆದರೆ ಧೋನಿ ಸಿಎಸ್‌ಕೆ ಜೊತೆಗಿನ ಜವಾಬ್ದಾರಿ ಮುಂದುವರಿಯಲಿದೆ ಎಂದು ಫ್ರಾಂಚೈಸಿ ಹೇಳಿದೆ. ಧೋನಿ ಮೆಂಟರ್ ಆಗಿ ಸಿಎಸ್‌ಕೆಯಲ್ಲಿ ಮುಂದುವರಿಯಲಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಮಾತ್ರ ಧೋನಿ ಮೆಂಟರ್ ಆಗಿರುವ ಸಾಧ್ಯತೆ ಇದೆ. 2028ರಿಂದ ಧೋನಿ ಐಪಿಎಲ್‌ನಿಂದ ಸಂಪೂರ್ಣ ದೂರ ಉಳಿಯುವ ಸಾಧ್ಯತೆ ಹೆಚ್ಚು.

56
ಗೊತ್ತೇ ಇರಲಿಲ್ಲವೇ

ಎಂಎಂಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಅತ್ಯಂತ ಯಶಸ್ವಿಯಾಗಿ ತಂಡವಾಗಿದೆ. ಬರೋಬ್ಬರಿ ಐದು ಐಪಿಎಲ್ ಟ್ರೋಫಿ ಗೆಲ್ಲಿಸಿದ ನಾಯಕ ಧೋನಿ. ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕ ಧೋನಿ. 2008ರಿಂದ ಸಿಎಸ್‌ಕೆ ತಂಡದ ಭಾಗವಾಗಿದ್ದ ಧೋನಿಗೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಸಿಎಸ್‌ಕೆ ನಿಷೇಧ ದೊಡ್ಡ ಹೊಡೆತ ನೀಡಿತ್ತು. ಸಿಎಸ್‌ಕೆ ತಂಡದ ನಾಯಕನಾಗಿ ಈ ವಿಚಾರಗಳು ಗೊತ್ತೇ ಇರಲಿಲ್ಲವೇ ಎಂಬ ಪ್ರಶ್ನೆಯೂ ಎದುರಾಗಿತ್ತು.

66
ಸೈಲೆಂಟ್ ಧೋನಿ

ಎಂಎಸ್ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿಗೊಂಡಿದ್ದಾರೆ. ನಿರ್ಧಾರಗಳಲ್ಲೂ ಧೋನಿ ಸೈಲೆಂಟ್. ಪಂದ್ಯದ ಗತಿ ಬದಲಾಗುತ್ತಿದ್ದಂತೆ ಧೋನಿ ಕೂಡ ಸೈಲೆಂಟ್ ಆಗಿ ತಮ್ಮ ನಿರ್ಧಾರ ಬದಲಿಸುತ್ತಿದ್ದರು. ಇದೀಗ ನಿವೃತ್ತಿಯತ್ತ ಅತೀ ದೊಡ್ಡ ನಿರ್ಧಾರವನ್ನು ಧೋನಿ ಯಾರೊಂದಿಗೂ ಹೆಚ್ಚು ಚರ್ಚಿಸದೇ, ಸೈಲೆಂಟ್ ಆಗಿ ಘೋಷಿಸಿದ್ದಾರೆ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories