ವಿರಾಟ್ ಕೊಹ್ಲಿಯ ಅಂದ್ರೆ ಪಂಚಪ್ರಾಣ, ಅವರ ಬಗ್ಗೆ ವಿಚಿತ್ರ ಆಸೆ ಹಂಚಿಕೊಂಡ ಕ್ರಿಕೆಟ್ ಜಗತ್ತಿನ ಬ್ಯೂಟಿ ಕ್ವೀನ್..!

First Published | Aug 21, 2024, 9:09 PM IST

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅದಷ್ಟೇ ಅಲ್ಲದೇ ಹಲವು ಕ್ರಿಕೆಟಿಗರು ಕೂಡಾ ಕೊಹ್ಲಿಯನ್ನು ಆರಾಧಿಸುತ್ತಾರೆ. ಇದೀಗ ಕ್ರಿಕೆಟ್ ಜಗತ್ತಿನ ಅಪ್ಪಟ ಚೆಲುವೆಯೊಬ್ಬಳು ತಾವು ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿ ಎಂದು ಹೇಳಿಕೊಂಡಿದ್ದಾಳೆ. ಯಾರಾಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

ಟೀಂ ಇಂಡಿಯಾ ರನ್ ಮಷೀನ್, ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಆಟ ಹಾಗೂ ಆಕ್ರಮಣಕಾರಿ ಮನೋಭಾವದಿಂದಲೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
 

ಅದೆಷ್ಟೋ ಯುವ ಕ್ರಿಕೆಟಿಗರ ಪಾಲಿಗೆ ವಿರಾಟ್ ಕೊಹ್ಲಿ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಇನ್ನು ಅಭಿಮಾನಿಗಳು ಮಾತ್ರವಲ್ಲ ಯುವ ಕ್ರಿಕೆಟಿಗರು, ವಿದೇಶಿ ಕ್ರಿಕೆಟಿಗರು ಕೂಡಾ ಅವಕಾಶ ಸಿಕ್ಕಾಗಲೆಲ್ಲಾ ವಿರಾಟ್ ಕೊಹ್ಲಿ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು, ಆಟೋಗ್ರಾಫ್ ಪಡೆದುಕೊಳ್ಳಲು ಹಾತೊರೆಯುತ್ತಿರುತ್ತಾರೆ.

Tap to resize

ಇದೀಗ ಮಹಿಳಾ ಕ್ರಿಕೆಟ್ ಜಗತ್ತಿನ ಅಪ್ಪಟ ಸುಂದರಿ ಎಂದೇ ಕರೆಸಿಕೊಳ್ಳುವ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಕ್ಸಾರಾ ಜೇಟ್ಲೆ, ತಾವು ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಇದಷ್ಟೇ ಹೇಳಿದ್ದರೇ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ, ಇದರ ಜತೆಗೆ ಒಂದು ಆಸೆಯನ್ನು ಹಂಚಿಕೊಂಡಿದ್ದಾರೆ.

ಹೌದು, ಕಿವೀಸ್ ಮಹಿಳಾ ತಂಡದ ಆಟಗಾರ್ತಿ ಕ್ಸಾರಾ ಜೇಟ್ಲೆಗೆ ವಿರಾಟ್ ಕೊಹ್ಲಿ ಜತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕಂತೆ. ಆ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು ಎಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ.

22 ವರ್ಷದ ಯುವ ಆಟಗಾರ್ತಿ ಕ್ಸಾರಾ ಜೇಟ್ಲೆ ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಜನಪ್ರಿಯವಾಗಿರುವ 'ಫೈನ್ ಲೆಗ್ಸ್‌'ನಲ್ಲಿ ಈ ರೀತಿಯ ವಿಚಿತ್ರ ಬಯಕೆಯನ್ನು ಹಂಚಿಕೊಂಡಿದ್ದಾರೆ. ಕ್ಸಾರಾ ಜೇಟ್ಲೆ  ನ್ಯೂಜಿಲೆಂಡ್ ದೇಶಿ ಕ್ರಿಕೆಟ್‌ನಲ್ಲಿ ವೆಲ್ಲಿಂಗ್ಟನ್ ಬ್ಲೇಜ್‌ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.


ಇನ್ನು ಇದೇ ಪಾಡ್‌ಕಾಸ್ಟ್‌ನಲ್ಲಿ ನಿಮಗೆ ಒಬ್ಬ ಪುರುಷ ಕ್ರಿಕೆಟಿಗನಿಗೆ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿದರೇ, ಯಾರಿಗೆ ಬೌಲಿಂಗ್ ಮಾಡುತ್ತೀರಾ ಎನ್ನುವ ಪ್ರಶ್ನೆಗೂ ಕ್ಸಾರಾ ಜೇಟ್ಲೆ ಮರು ಯೋಚನೆ ಇಲ್ಲದೇ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ.

ಕಿಲ್ಲರ್ ಲುಕ್ ಹಾಗೂ ಕ್ರಿಕೆಟ್‌ ಸ್ಕಿಲ್‌ಗಳಿಂದಾಗಿ ಕ್ಸಾರಾ ಜೇಟ್ಲೆಗೆ ಕೂಡಾ ಜಗತ್ತಿನಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಆಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 113k ಫಾಲೋವರ್ಸ್‌ ಇದ್ದಾರೆ.

Latest Videos

click me!