ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಟಾಪ್ 8 ದೇಶಗಳಿವು..! ಆಸೀಸ್‌ಗೆ ಎರಡನೇ ಸ್ಥಾನ..!

First Published | Aug 19, 2024, 6:33 PM IST

ಬೆಂಗಳೂರು: ಏಕದಿನ ಕ್ರಿಕೆಟ್ ಮಾದರಿ ಜಾರಿಗೆ ಬಂದು ಸುಮಾರು 53 ವರ್ಷಗಳು ಕಳೆದಿವೆ. ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸುವುದೇ ಕಷ್ಟ ಎನ್ನುವಂತಿತ್ತು. ಆದರೆ ಈಗ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕಗಳು ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗಿವೆ. ನಾವಿಂದು ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದೇಶಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ 
 

ಟೆಸ್ಟ್‌ ಕ್ರಿಕೆಟ್‌ ಬಳಿಕ ಏಕದಿನ ಕ್ರಿಕೆಟ್‌ ಪರಿಚಯವಾಯಿತು. ಕ್ರಿಕೆಟ್‌ ಮತ್ತಷ್ಟು ರೋಚಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ಪ್ರಯೋಗಗಳು ನಡೆದಿವೆ.

ಸೀಮಿತ ಓವರ್‌ಗಳ ಕ್ರಿಕೆಟ್ ಅದರಲ್ಲೂ ಏಕದಿನ ಕ್ರಿಕೆಟ್ ಹೆಚ್ಚು ಬ್ಯಾಟಿಂಗ್ ಸ್ನೇಹಿಯಾಗುತ್ತಾ ಬಂದಿದೆ. ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸುವುದು ಬ್ಯಾಟರ್‌ಗಳಿಗೆ ನೀರು ಕುಡಿದಷ್ಟು ಸುಲಭ ಎನ್ನುವಷ್ಟು ಈಸಿಯಾಗಿದೆ.

Tap to resize

ಇನ್ನು ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮಾತ್ರ 1000 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿವೆ. ಬನ್ನಿ ನಾವಿಂದು ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದೇಶಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ 

ಭಾರತ ಕ್ರಿಕೆಟ್ ತಂಡದ ಬ್ಯಾಟರ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಬ್ಯಾಟರ್‌ಗಳು ಸೇರಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡ 319 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದೆ.

ಇನ್ನು ಆರು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಅಸ್ಟ್ರೇಲಿಯಾ ತಂಡದ ಪರ 250  ಶತಕಗಳು ದಾಖಲಾಗಿವೆ. ಈ ಮೂಲಕ ಆಸೀಸ್ ಎರಡನೇ ಸ್ಥಾನದಲ್ಲಿದೆ. ಕಾಂಗರೂ ಪಡೆಯ ಪರ ರಿಕಿ ಪಾಂಟಿಂಗ್, ಡೇವಿಡ್ ವಾರ್ನರ್, ಆಡಂ ಗಿಲ್‌ಕ್ರಿಸ್ಟ್‌ ಶತಕ ಸಿಡಿಸಿದ್ದಾರೆ

ಇನ್ನುಳಿದಂತೆ ಪಾಕಿಸ್ತಾನ 223 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೇ, ದಕ್ಷಿಣ ಆಫ್ರಿಕಾ(209), ವೆಸ್ಟ್ ಇಂಡೀಸ್(201), ಇಂಗ್ಲೆಂಡ್(198), ನ್ಯೂಜಿಲೆಂಡ್(158) ತಂಡಗಳು ಕ್ರಮವಾಗಿ ಟಾಪ್ 8 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ 50 ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 49 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Latest Videos

click me!