ವಿರಾಟ್ ಕೊಹ್ಲಿಯ ನೆಚ್ಚಿನ ಐಪಿಎಲ್ ಎದುರಾಳಿ ಯಾವ ತಂಡ ಗೊತ್ತಾ..?

First Published | Aug 20, 2024, 6:12 PM IST

Virat Kohli Favourite IPL team : ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 16 ವರ್ಷಗಳು ಪೂರ್ಣಗೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಕಿಂಗ್ ಕೊಹ್ಲಿ.. ಐಪಿಎಲ್‌ನಲ್ಲಿ ಆರ್‌ಸಿಬಿ ಬಿಟ್ಟು ತನಗೆ ಇಷ್ಟವಾದ ಎದುರಾಳಿ ತಂಡ ಯಾವುದೆಂದು ಹೇಳಿದ್ದಾರೆ..!
 

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ ದಿಗ್ಗಜ ಆಟಗಾರ. ತಮ್ಮ ವೃತ್ತಿಜೀವನದ ಮೊದಲ ಪಂದ್ಯದಲ್ಲಿ ಕೇವಲ 12 ರನ್‌ಗಳಿಗೆ ಔಟಾದ ವಿರಾಟ್ ಕೊಹ್ಲಿ ಈಗ ವಿಶ್ವ ಕ್ರಿಕೆಟ್ ಅನ್ನು ಆಳುವ ಹಂತಕ್ಕೆ ಬೆಳೆದಿದ್ದಾರೆ. 
 

ಈ ಸ್ಟಾರ್ ಆಟಗಾರ ಐಪಿಎಲ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಿದ್ದಾರೆ. ಪ್ರತಿ ಸೀಸನ್‌ನಲ್ಲಿ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸುವ ಏಕೈಕ ಆಟಗಾರ ಎಂಬ ವಿಶಿಷ್ಟ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ.
 

Latest Videos


ವಿರಾಟ್ ಕೊಹ್ಲಿ 2008 ರಲ್ಲಿ ಆರ್‌ಸಿಬಿ ತಂಡವನ್ನು ಸೇರಿದರು. ಆರಂಭದಲ್ಲಿ ರನ್ ಗಳಿಸಲು  ಪರದಾಡಿದರೂ ಆರ್‌ಸಿಬಿ ಅವರನ್ನು ಬೆಂಬಲಿಸಿತು. ಕೊಹ್ಲಿ ಹಾಗೂ ಆರ್‌ಸಿಬಿ ನಡುವೆ ಅವಿನಾಭಾವ ಸಂಬಂಧವಿದೆ.
 

ವಿರಾಟ್ ಕೊಹ್ಲಿ 2013 ರಲ್ಲಿ ಆರ್‌ಸಿಬಿ ಪೂರ್ಣಾವಧಿಯ ನಾಯಕರಾದರು. ಐಪಿಎಲ್‌ನಲ್ಲೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ.

ಈ ಸಂದರ್ಭದಲ್ಲಿ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಹೊರತಾಗಿ ತಮಗೆ ಇಷ್ಟವಾದ ತಂಡಗಳ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ.

ವಿರಾಟ್ ತಮ್ಮ ನೆಚ್ಚಿನ ಐಪಿಎಲ್ ಎದುರಾಳಿಯಾಗಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು.  ಆದರೆ ಆ ನಿರೀಕ್ಷೆ ಹುಸಿಯಾಗಿದೆ.

ಇನ್ನು ಮುಂದುವರೆದ ಧೋನಿ ನೇತೃತ್ವದ ಸಿಎಸ್‌ಕೆಯೂ ತಮ್ಮ ನೆಚ್ಚಿನ ತಂಡ ಅಲ್ಲ ಎಂದು ಹೇಳಿದ್ದಾರೆ. ಆದರೆ ಹಾಲಿ ಚಾಂಪಿಯನ್‌ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಮ್ಮ ನೆಚ್ಚಿನ ಎದುರಾಳಿ ತಂಡ ಎಂದು ಕಿಂಗ್ ಕೊಹ್ಲಿ ಹೆಸರಿಸಿದ್ದಾರೆ. 

ಏಪ್ರಿಲ್ 18, 2008 ರಂದು ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ನಡೆದ ಮೊದಲ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು . ಸೌರವ್ ಗಂಗೂಲಿ ನೇತೃತ್ವದ ತಂಡ ಒಟ್ಟು 222 ರನ್ ಗಳಿಸಿತು. ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ 82 ರನ್‌ಗಳಿಗೆ ಆಲೌಟ್ ಆಗಿ  ಹೀನಾಯ ಸೋಲು ಅನುಭವಿಸಿತು. ವಿರಾಟ್ 5 ಎಸೆತಗಳಲ್ಲಿ 1 ರನ್ ಗಳಿಸಿ ಔಟಾಗಿದ್ದರು.

ಇನ್ನು ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 252 ಪಂದ್ಯಗಳಲ್ಲಿ 8004 ರನ್ ಗಳಿಸಿದ್ದಾರೆ. ವಿರಾಟ್ ಖಾತೆಯಲ್ಲಿ 8 ಶತಕ ಮತ್ತು 55 ಅರ್ಧಶತಕಗಳಿವೆ. 

ವಿರಾಟ್ ಆರ್‌ಸಿಬಿ ಜೊತೆ 3 ಐಪಿಎಲ್ ಫೈನಲ್‌ಗಳನ್ನು ಆಡಿದ್ದಾರೆ ಆದರೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಮುಂಬರುವ ಸೀಸನ್‌ನಲ್ಲೂ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

click me!