ಹೊಸ ಆವೃತ್ತಿಯಲ್ಲಿ ಹೊಸ ಜವಾಬ್ದಾರಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಂಎಸ್ ಧೋನಿ!

Published : Mar 05, 2024, 04:05 PM ISTUpdated : Mar 05, 2024, 04:10 PM IST

ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಇದೀಗ ಮಹತ್ವದ ಸುಳಿವು ನೀಡಿದ್ದಾರೆ. ತಮ್ಮ ಫೇಸ್‌ಬುಕ್ ಮೂಲಕ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ಧೋನಿ ಮಾತುಗಳು ಕೆಲವರಲ್ಲಿ ಆತಂಕ ತಂದಿದೆ. ನಾಯಕನಾಗಿ, ಕ್ರಿಕೆಟಿಗನಾಗಿ ಮೈದಾನದಲ್ಲಿ ಧೋನಿ ನೋಡಲು ಬಯಸಿರುವ ಫ್ಯಾನ್ಸ್ ಇದೀಗ ಹೊಸ ಜವಾಬ್ದಾರಿ ಸುಳಿವು ಭಾರಿ ಚರ್ಚೆಗೆ ಗ್ರಾಸವಾಗಿದೆ.

PREV
18
ಹೊಸ ಆವೃತ್ತಿಯಲ್ಲಿ ಹೊಸ ಜವಾಬ್ದಾರಿ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಂಎಸ್ ಧೋನಿ!

ಐಪಿಎಲ್ 2024 ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಭರ್ಜರಿ ತಯಾರಿ ನಡೆಯುತ್ತಿದೆ. ಎಂಎಸ್ ಧೋನಿ ಅಭಿಮಾನಿಗಳು ಎಲ್ಲರಿಗಿಂತ ಹೆಚ್ಚು ಕಾತರಗೊಂಡಿದ್ದಾರೆ. ಮೈದಾನದಲ್ಲಿ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ.
 

28

ಐಪಿಎಲ್ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಧೋನಿ ಫೇಸ್‌ಬುಕ್ ಮೂಲಕ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಹೊಸ ಆವೃತ್ತಿಯಲ್ಲಿ ಹೊಸ ಜವಾಬ್ದಾರಿ ಅನ್ನೋ ಧೋನಿ ಸಂದೇಶ ಇದೀಗ ಅಭಿಮಾನಿಗಳ ಆತಂಕಕ್ಕೂ ಕಾರಣಾಗಿದೆ.

38

ಹೊಸ ಆವೃತ್ತಿಯಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಇನ್ನು ಹೆಚ್ಚು ದಿನ ಕಾಯಲು ಸಾಧ್ಯವಿಲ್ಲ. ನೀವು ಕಾಯುತ್ತಿರಿ ಎಂದು ಧೋನಿ ಫೇಸ್‌ಬುಕ್ ಮೂಲಕ ಸಂದೇಶ ನೀಡಿದ್ದಾರೆ.
 

48

ಐಪಿಎಲ್ 2024ರಲ್ಲಿ ಧೋನಿ ತಮ್ಮ ಫಿಟ್ನೆಸ್ ಹಾಗೂ ಮೊಣಕಾಲಿನ ಗಾಯವನ್ನು ಗಮದಲ್ಲಿಟ್ಟುಕೊಂಡು ನಾಯಕತ್ವ  ಹಾಗೂ ಕ್ರಿಕೆಟ್ ಆಟದಿಂದ ಹಿಂದೆ ಸರಿಯುತ್ತಾರಾ ಅನ್ನೋ ಪ್ರಶ್ನೆಗಳು ಎದುರಾಗಿದೆ.

58

ಧೋನಿ ನಾಯಕತ್ವ ತ್ಯಜಿಸಿ, ತಂಡದ ಮೆಂಟರ್, ತಂಡದ ಸಲಹೆಗಾರನಾಗಿ ಅಥವಾ ಇತರ ರೂಪದಲ್ಲಿ ಜವಾಬ್ದಾರಿ ವಹಿಸಿಕೊಳ್ಳುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

68

ಕಳೆದ ಐಪಿಎಲ್ ಫೈನಲ್ ಬಳಿಕ ನಿವೃತ್ತಿ ಮಾತು ತಳ್ಳಿ ಹಾಕಿದ ಧೋನಿ, 2024ರ ಐಪಿಎಲ್ ಟೂರ್ನಿಯಲ್ಲಿ ಆಡಲು ಪ್ರಯತ್ನಿಸುವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ನಾಯಕತ್ವ ವಹಿಸಿಕೊಳ್ಳುವ ಕುರಿತು ಯಾವುದೇ ಖಚಿತತೆ ನೀಡಿಲ್ಲ.

78

ಸದ್ಯ ಫೇಸ್‌ಬುಕ್‌ನಲ್ಲಿ ಧೋನಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಧೋನಿ ಐಪಿಎಲ್ ಟೂರ್ನಿ ಅಥವಾ ಇನ್ಯಾವುದಾದರೂ ಹೊಸ ಜವಾಬ್ದಾರಿ ಕುರಿತು ಮಾತನಾಡಿದ್ದಾರಾ ಅನ್ನೋ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.

88

ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಫಿಟ್ ಅಂಡ್ ಫೈನ್ ಆಗಿರುವ ಧೋನಿ ಈ ಆವೃತ್ತಿಯಲ್ಲಿ ಕಾಣಿಸಿಕೊಳ್ಳು ಸಾಧ್ಯತೆ ಹೆಚ್ಚು. ಜೊತೆಗೆ 2024ರ ಐಪಿಎಲ್ ಟೂರ್ನಿ ಮೂಲಕ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಸಾಧ್ಯತೆ ಇದೆ.

Read more Photos on
click me!

Recommended Stories