ಧೋನಿಯಿಂದ ಪಾಂಡ್ಯವರೆಗೆ: IPL ಕ್ಯಾಪ್ಟನ್‌ಗಳ ಸಂಬಳ ಎಷ್ಟು? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್

First Published | Feb 8, 2024, 3:24 PM IST

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ನಾವಿಂದು ಯಾವ ಐಪಿಎಲ್ ತಂಡದ ನಾಯಕ ಎಷ್ಟು ಸಂಬಳವನ್ನು ಪಡೆಯುತ್ತಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.

10. ಏಯ್ಡನ್ ಮಾರ್ಕ್‌ರಮ್: 2.6 ಕೋಟಿ ರುಪಾಯಿ

ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿಯು 2023ರ ಐಪಿಎಲ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್‌ ಅವರ ಬದಲಿಗೆ ದಕ್ಷಿಣ ಆಫ್ರಿಕಾದ ಏಯ್ಡನ್ ಮಾರ್ಕ್‌ರಮ್‌ಗೆ ನಾಯಕ ಪಟ್ಟ ಕಟ್ಟಿದೆ. ಆರೆಂಜ್ ಆರ್ಮಿ ಕ್ಯಾಪ್ಟನ್ ಮಾರ್ಕ್‌ರಮ್‌ 2.6 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದಾರೆ.
 

09. ಫಾಫ್ ಡು ಪ್ಲೆಸಿಸ್: 7 ಕೋಟಿ ರುಪಾಯಿ

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ 2022ರಿಂದ ಫಾಫ್ ಡು ಪ್ಲೆಸಿಸ್ ನಾಯಕನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಫಾಫ್‌ 7 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
 

Latest Videos


08. ಶುಭ್‌ಮನ್ ಗಿಲ್: 8 ಕೋಟಿ

ಗುಜರಾತ್ ಟೈಟಾನ್ಸ್ ತಂಡದ ನೂತನ ನಾಯಕ ಶುಭ್‌ಮನ್ ಗಿಲ್ 8 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಕೂಡಿಕೊಂಡ ಬೆನ್ನಲ್ಲೇ ಗಿಲ್‌ಗೆ ಗುಜರಾತ್ ನಾಯಕ ಪಟ್ಟ ಒಲಿದಿದೆ.

07. ಶಿಖರ್ ಧವನ್: 8.25 ಕೋಟಿ ರುಪಾಯಿ

ಮಯಾಂಕ್ ಅಗರ್‌ವಾಲ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ 2023ರಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧವನ್ ಐಪಿಎಲ್‌ನಿಂದ ಒಂದು ಸೀಸನ್‌ಗೆ 8.25 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
 

06. ಮಹೇಂದ್ರ ಸಿಂಗ್ ಧೋನಿ: 12 ಕೋಟಿ ರುಪಾಯಿ

ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಧೋನಿ ಒಂದು ಸೀಸನ್‌ ಐಪಿಎಲ್‌ಗೆ ಸಿಎಸ್‌ಕೆ ನಾಯಕನಾಗಿ 12 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. 
 

05. ಶ್ರೇಯಸ್ ಅಯ್ಯರ್: 12.25 ಕೋಟಿ ರುಪಾಯಿ

ಇಯಾನ್ ಮಾರ್ಗನ್‌ ನಾಯಕತ್ವದಿಂದ ಕೆಳಗಿಳಿದ ಬಳಿಕ ಶ್ರೇಯಸ್ ಅಯ್ಯರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಶ್ರೇಯಸ್ ಅಯ್ಯರ್ 12.25 ಕೋಟಿ ರುಪಾಯಿ ಸಂಬಳವನ್ನು ಐಪಿಎಲ್‌ನಿಂದಾಗಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.
 

04. ಸಂಜು ಸ್ಯಾಮ್ಸನ್: 14 ಕೋಟಿ ರುಪಾಯಿ

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, 2021ರಿಂದಲೂ ರಾಯಲ್ಸ್ ಪಡೆಯನ್ನು ಮುನ್ನಡೆಸುತ್ತಿದ್ದಾರೆ. ಪ್ರಸಕ್ತ ಸಂಜು ಸ್ಯಾಮ್ಸನ್ 14 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದಾರೆ.

03. ಹಾರ್ದಿಕ್ ಪಾಂಡ್ಯ: 15 ಕೋಟಿ ರುಪಾಯಿ

ರೋಹಿತ್ ಶರ್ಮಾ ಸ್ಥಾನಕ್ಕೆ ಹೊಸದಾಗಿ ನೇಮಕವಾಗಿರುವ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ 15 ಕೋಟಿ ರುಪಾಯಿ ಸಂಬಳವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ.
 

02. ರಿಷಭ್ ಪಂತ್: 16 ಕೋಟಿ ರುಪಾಯಿಗಳು

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 16 ಕೋಟಿ ರುಪಾಯಿ ಸಂಬಳವನ್ನು ಪಡೆಯುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಬಳಿಕ 2021ರಿಂದಲೂ ವಿಕೆಟ್ ಕೀಪರ್ ಬ್ಯಾಟರ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಅಪಘಾತಕ್ಕೊಳಗಾಗಿದ್ದರಿಂದ ಐಪಿಎಲ್‌ಗೆ ಅಲಭ್ಯರಾಗಿದ್ದರು.
 

01. ಕೆ ಎಲ್ ರಾಹುಲ್: 17 ಕೋಟಿ ರುಪಾಯಿ

ಪಂಜಾಬ್ ಕಿಂಗ್ಸ್ ತಂಡವನ್ನು ಬಿಟ್ಟು 2022ರಿಂದ ಕೆ ಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕನ್ನಡಿಗ ಕೆ ಎಲ್ ರಾಹುಲ್ ಸದ್ಯ ಐಪಿಎಲ್‌ನಲ್ಲಿ ಅತಿಹೆಚ್ಚು ಸಂಬಳ ಪಡೆಯುತ್ತಿರುವ ನಾಯಕ ಎನಿಸಿದ್ದಾರೆ.
 

click me!