ಯಾರು ಈ ಸಫಾ ಬೇಗ್? ಇಲ್ಲಿದೆ ಇರ್ಫಾನ್ ಪಠಾಣ್ ಮುದ್ದಾದ ಮಡದಿಯ ಇಂಟ್ರೆಸ್ಟಿಂಗ್ ಮಾಹಿತಿ

Published : Feb 07, 2024, 03:07 PM IST

ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಇತ್ತೀಚೆಗಷ್ಟೇ ತಮ್ಮ ಮಡದಿ ಸಫಾ ಬೇಗ್ ಅವರೊಂದಿಗೆ 8ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಪತ್ನಿಯ ಕುರಿತಾದ ಇಂಟ್ರೆಸ್ಟಿಂಗ್ ಬೆಳಕಿಗೆ ಬಂದಿವೆ.   

PREV
18
ಯಾರು ಈ ಸಫಾ ಬೇಗ್? ಇಲ್ಲಿದೆ ಇರ್ಫಾನ್ ಪಠಾಣ್ ಮುದ್ದಾದ ಮಡದಿಯ ಇಂಟ್ರೆಸ್ಟಿಂಗ್ ಮಾಹಿತಿ

ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಇತ್ತೀಚೆಗಷ್ಟೇ ತಮ್ಮ ಮಡದಿ ಸಫಾ ಬೇಗ್ ಅವರೊಂದಿಗೆ 8ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಪತ್ನಿಯ ಕುರಿತಾದ ಇಂಟ್ರೆಸ್ಟಿಂಗ್ ಬೆಳಕಿಗೆ ಬಂದಿವೆ. 

28

ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೆಲ ದಿನಗಳ ಹಿಂದಷ್ಟೇ ತಮ್ಮ ಮುದ್ದಾದ ಮಡದಿ ಸಫಾ ಬೇಗ್ ಜತೆ 8ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

38

"ಎಲ್ಲಾ ಪಾತ್ರಗಳನ್ನು ಕರಗತಮಾಡಿಕೊಂಡಿರುವ ಒಂದು ಆತ್ಮ. ನನ್ನ ಮೂಡ್ ಬೂಸ್ಟರ್, ಕಾಮಿಡಿಯನ್, ಕೀಟಲೆ ಮಾಡುವ, ನಿರಂತರ ಒಡನಾಡಿ ಹಾಗೂ ನನ್ನ ಮುದ್ದು ಮಕ್ಕಳ ತಾಯಿ. ಈ ಅದ್ಭುತ ಪಯಣದಲ್ಲಿ ಹಲವು ಅವಿಸ್ಮರಣೀಯ ನೆನಪುಗಳನ್ನು ಕಟ್ಟಿಕೊಟ್ಟ ನನ್ನ ಪ್ರೀತಿಯ ಮಡದಿಗೆ 8ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಇರ್ಫಾನ್ ಪಠಾಣ್ ತಮ್ಮ ಮಡದಿಗೆ ವಿಶ್‌ ಮಾಡಿದ್ದರು.

48

ಇರ್ಫಾನ್ ಪಠಾನ್‌ 2016ರಲ್ಲಿ ಸಫಾ ಬೇಗ್ ಅವರನ್ನು ಮದುವೆಯಾಗಿದ್ದರು. ಸಫಾ ಬೇಗ್ ಮೂಲತಃ ಸೌದಿ ಅರೆಬಿಯಾದವರಾಗಿದ್ದು, ವೃತ್ತಿಪರ ಮಾಡೆಲ್ ಆಗಿಯೂ ಸಫಾ ಬೇಗ್ ಗಮನ ಸೆಳೆದಿದ್ದರು.

58

ಇರ್ಫಾನ್ ಪಠಾಣ್ ಮಡದಿ ಸಫಾ ಬೇಗ್ ತಮ್ಮ ಮದುವೆಗೂ ಮೊದಲು ನೇಲ್ ಆರ್ಟಿಸ್ಟ್‌ ಆಗಿಯೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಇರ್ಫಾನ್ ಪಠಾಣ್ ಅವರನ್ನು ಮದುವೆಯಾಗುವಾಗ ಸಫಾ ವಯಸ್ಸು ಕೇವಲ 21.

68

ಇರ್ಫಾನ್ ಪಠಾಣ್ ಹಾಗೂ ಸಫಾ ಬೇಗ್ ಮದುವೆಯಾಗುವ ಮುನ್ನ ಈ ಮುದ್ದಾದ ಜೋಡಿ ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು ಎಂದು ವರದಿಯಾಗಿದೆ. 

78

ಇರ್ಫಾನ್ ಪಠಾಣ್ ಹಾಗೂ ಸಫಾ ಬೇಗ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಇಬ್ಬರು ಮಕ್ಕಳಿಗೆ ಇಮ್ರಾನ್ ಹಾಗೂ ಸುಲೈಮಾನ್ ಎಂದು ಸಫಾ-ಇರ್ಫಾನ್ ಕುಟುಂಬಸ್ಥರು ಹೆಸರಿಟ್ಟಿದ್ದಾರೆ.

88

ಇರ್ಫಾನ್ ಪಠಾಣ್ ತಮ್ಮ 8ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೊದಲ ಬಾರಿಗೆ ತಮ್ಮ ಪತ್ನಿ ಸಫಾ ಬೇಗ್ ಅವರ ಮುಖವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು ಎಂದು ವರದಿಯಾಗಿತ್ತು. 

Read more Photos on
click me!

Recommended Stories