9ನೇ ಹುಟ್ಟುಹಬ್ಬ ಆಚರಿಸಿಕೊಂಡ ಝಿವಾ..! ಇಲ್ಲಿವೆ ನೋಡಿ ಧೋನಿ ಮಗಳ ಲೇಟೆಸ್ಟ್ ಫೋಟೋ

Published : Feb 06, 2024, 06:03 PM IST

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್ ಮುದ್ದಿನ ಮಗಳು ಝಿವಾ ಧೋನಿ ತಮ್ಮ 9ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
17
9ನೇ ಹುಟ್ಟುಹಬ್ಬ ಆಚರಿಸಿಕೊಂಡ ಝಿವಾ..! ಇಲ್ಲಿವೆ ನೋಡಿ ಧೋನಿ ಮಗಳ ಲೇಟೆಸ್ಟ್ ಫೋಟೋ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್ ಮುದ್ದಿನ ಮಗಳು ಝಿವಾ ಫೆಬ್ರವರಿ 06ರಂದು ತಮ್ಮ 9ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

27

ಝಿವಾ ಧೋನಿ ಫೆಬ್ರವರಿ 06, 2015ರಲ್ಲಿ ಜನಿಸಿದ್ದರು. ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಆಯೋಜನೆಗೊಂಡಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವಾಗ ಝಿವಾ ಈ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಳು.

37

ಇದೊಂದು ರೀತಿಯ ಭಾವನಾತ್ಮಕ ಕ್ಷಣವಾಗಿತ್ತು. ಒಂದು ಕಡೆ ತಂದೆ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ದೇಶವನ್ನು ಮುನ್ನಡೆಸಲು ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೆ, ಇತ್ತ ಝಿವಾ ಭಾರತದಲ್ಲಿ ಕಣ್ಣುಬಿಟ್ಟಿದ್ದಳು.

47

ಝಿವಾ ಆಗಮನ ಧೋನಿ ಕುಟುಂಬಸ್ಥರಲ್ಲಿ ಸಂತಸದ ಮಳೆಯನ್ನೇ ಸುರಿಸಿತ್ತು. ಧೋನಿ ಮಗಳು ಅವರ ಕುಟುಂಬವನ್ನಷ್ಟೇ ಅಲ್ಲದೇ ತಮ್ಮ ಮುದ್ದಾದ ನಡೆ-ನುಡಿಯ ಮೂಲಕ ದೇಶದ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

57

ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್ ಅವರ ಲವ್‌ ಸ್ಟೋರಿ ಯಾವ ಸಿನಿಮಾಗೂ ಕಮ್ಮಿಯಿಲ್ಲ. ಈ ಸುಂದರ ಕುಟುಂಬಕ್ಕೆ ಝಿವಾ ಎಂಟ್ರಿ ಮತ್ತಷ್ಟು ಮೆರಗು ತಂದುಕೊಟ್ಟಿರುವುದಂತೂ ಸುಳ್ಳಲ್ಲ.

67

ಸಾಕ್ಷಿ ಹಾಗೂ ಧೋನಿ ಇಬ್ಬರೂ ಜಾರ್ಖಂಡ್‌ನ ರಾಂಚಿ ಮೂಲದವರಾಗಿದ್ದಾರೆ. 2007ರಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು

77

ಇದಾದ ಬಳಿಕ ಹಲವು ಡೇಟಿಂಗ್ ನಂತರ ಜುಲೈ 04, 2010ರಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಮಲಿಕ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಷ್ಟೇ ಪಾಲ್ಗೊಂಡಿದ್ದರು.

Read more Photos on
click me!

Recommended Stories