Happy Birthday Mithali Raj: ಇನ್ನೂ ಸಿಂಗಲ್‌ ಆಗಿರಲು ಇವರ ಫಸ್ಟ್ ಲವ್‌ ಫೇಲ್ಯೂರ್‌ ಕಾರಣನಾ?

First Published Dec 3, 2021, 3:16 PM IST

ಭಾರತೀಯ ಮಹಿಳಾ ಕ್ರಿಕೆಟ್   (Indian women Cricket) ಲೆಜೆಂಡ್‌ ಮಿಥಾಲಿ ರಾಜ್ (Mithali Raj)  ಅವರು ಡಿಸೆಂಬರ್ 3 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. 1982ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಜನಿಸಿದ ಮಿಥಾಲಿ ರಾಜ್ ಅವರು ಭಾರತದ ಮಹಿಳಾ ಕ್ರಿಕೆಟ್‌ನ ಮಿನುಗು ತಾರೆಯಾಗಿದ್ದು,  ತಮ್ಮ ಆಟದ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅವರು ಕೇವಲ 16 ನೇ ವಯಸ್ಸಿನಲ್ಲಿ ತಮ್ಮ ODI ಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಅವರು ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ.  ಕ್ರೀಡೆಯ ಜೊತೆಗೆ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಹೆಚ್ಚು ಚರ್ಚೆಯಲ್ಲಿದೆ.  ಮಿಥಾಲಿ ಜೀವನಕ್ಕೆ  ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

ಮಿಥಾಲಿ ರಾಜ್ 3 ಡಿಸೆಂಬರ್ 1982 ರಂದು ಜೋಧ್‌ಪುರದಲ್ಲಿ  ತಮಿಳು ಕುಟುಂಬದಲ್ಲಿ ಜನಿಸಿದ ಮಿಥಾಲಿ ತನ್ನ ತಂದೆ ತಾಯಿ ಮತ್ತು ಹಿರಿಯ ಸಹೋದರನ ಜೊತೆ ವಾಸಿಸುತ್ತಾರೆ. ಬಾಲ್ಯದಲ್ಲಿ  ತುಂಬಾ ನಾಚಿಕೆ ಸ್ವಭಾವದವಾರಾಗಿದ್ದ ಮಿಥಾಲಿ ರಾಜ್ ಅವರು  ಭಾರತೀಯ ಮಹಿಳೆ ಕ್ರಿಕೆಟ್‌ಗೆ ಕೀರ್ತಿ ತರುತ್ತಾರೆ ಮತ್ತು ಅವರು ಲೇಡಿ ಸಚಿನ್ ಎಂದು ಹೆಸರು ಪಡೆಯುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.

ಭಾರತದ ಆಲ್‌ರೌಂಡರ್ ಮಿಥಾಲಿ ರಾಜ್ 1999 ರಲ್ಲಿ ಕೇವಲ 16 ನೇ ವಯಸ್ಸಿನಲ್ಲಿ  ಟೀಮ್‌ ಇಂಡಿಯಾಕ್ಕೆ  ಪಾದಾರ್ಪಣೆ ಮಾಡಿದರು ಮತ್ತು 39 ನೇ ವಯಸ್ಸಿನಲ್ಲೂ ಅವರು ಅದ್ಭುತ ಕ್ರಿಕೆಟ್ ಆಡುತ್ತಾರೆ. ಅವರು ತಮ್ಮ ಮೊದಲ ಪಂದ್ಯದಲ್ಲಿಯೇ 114 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಜೊತೆಗೆ ಅವರು 2000, 2005, 2009, 2013 ಮತ್ತು 2017 ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದರು.

ಇಷ್ಟು ಸಾಧನೆ ಮಾಡಿದ ಮಿಥಾಲಿ ರಾಜ್ ತಮ್ಮ  39 ನೇ ವಯಸ್ಸಿನಲ್ಲಿಯೂ  ಒಂಟಿಯಾಗಿದ್ದಾರೆ ಮತ್ತು ಮಿಥಾಲಿ ರಾಜ್ ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ.  ಆದರೆ, ವರದಿಗಳ ಪ್ರಕಾರ, ಮಿಥಾಲಿ ರಾಜ್ ಈ ಹಿಂದೆ ಸಂಬಂಧ ಹೊಂದಿದ್ದರು, ಆದರೆ ಇಬ್ಬರೂ ಮುಂದುವರಿಯಲು ಸಾಧ್ಯವಾಗಲಿಲ್ಲ.

Mithali Raj

ಒಮ್ಮೆ ಮಾಧ್ಯಮದವರು ಆಕೆಯ ಮದುವೆ ಬಗ್ಗೆ ಪ್ರಶ್ನಿಸಿದಾಗ, 'ನಾನು ಚಿಕ್ಕವಳಿದ್ದಾಗ ನನಗೆ ಮದುವೆಯಾಗಬೇಕು ಎಂದು ತುಂಬಾ ಆಸೆ ಇತ್ತು. ಆದರೆ ಈಗ ಮದುವೆಯಾದವರನ್ನು ನೋಡಿದಾಗ ನನಗೆ ಮದುವೆಯಾಗ ಬೇಕೆಂದು ಅನಿಸುವುದಿಲ್ಲ. ಒಂಟಿಯಾಗಿರುವುದು ಉತ್ತಮ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. 

ಮಿಥಾಲಿ ತನ್ನ ಫಸ್ಟ್‌ ಲವ್‌ ಡ್ಯಾನ್ಸ್‌ ಎಂದು ನಂಬುತ್ತಾರೆ. ಮಿಥಾಲಿ ಬಾಲ್ಯದಲ್ಲಿ ಕ್ರಿಕೆಟಿಗರಾಗದೆ ಕ್ಲಾಸಿಕಲ್‌ ಡ್ಯಾನ್ಸರ್‌ ಆಗಬೇಕೆಂಬ ಕನಸು ಹೊಂದಿದ್ದರು ಮತ್ತು ಅವರು ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು. ಅವರು 10 ನೇ ವಯಸ್ಸಿನವರೆಗೆ ನೃತ್ಯವನ್ನು ಕಲಿತರು.

ಆದರೆ ಮಿಥಾಲಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಅವರ ತಂದೆ ಭಾವಿಸಿದ್ದರು. ಇದಾದ ನಂತರ ಮಿಥಾಲಿ ತನ್ನ ಸಹೋದರನೊಂದಿಗೆ ಕ್ರಿಕೆಟ್ ಆಡಲು ಹೋಗಲಾರಂಭಿಸಿದರು.

 ಮಿಥಾಲಿಯ ಕನಸುಗಳನ್ನು ನನಸು ಮಾಡುವಲ್ಲಿ ಆಕೆಯ ಪೋಷಕರ ಪಾತ್ರ ದೊಡ್ಡದು. ಮಗಳ ಅಭ್ಯಾಸಕ್ಕೆ ಯಾವುದೇ ಕೊರತೆಯಾಗಬಾರದು ಎಂದು ಅವಳ ತಾಯಿ ತನ್ನ ಕೆಲಸವನ್ನು ಸಹ ತೊರೆದರು. ಮಗಳು ಕೂಡ ತನ್ನ ತಂದೆ ತಾಯಿಯ ಶ್ರಮಕ್ಕೆ ಸರಿಯಾಗಿ  ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಹೆಸರನ್ನು ಬೆಳಗುವಂತೆ ಮಾಡಿದ್ದಾರೆ.

ಮಿಥಾಲಿ ರಾಜ್  ಈವರೆಗೆ  ಭಾರತ ತಂಡಕ್ಕಾಗಿ 321 ಪಂದ್ಯಗಳನ್ನು ಆಡಿದ್ದಾರೆ, ಇದು ಯಾವುದೇ ಫಾರ್ಮಟ್‌ನಲ್ಲೂ ಯಾವುದೇ ಪ್ಲೇಯರ್‌ ಆಡಿರುವ ಅತಿ ಹೆಚ್ಚು ಪಂದ್ಯವಾಗಿದೆ. ಆದಾಗ್ಯೂ, ಅವರು 2019 ರಲ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತರಾದರು. 12 ಟೆಸ್ಟ್ ಪಂದ್ಯಗಳಲ್ಲಿ 699 ರನ್, 220 ODIಗಳಲ್ಲಿ 7391 ರನ್ ಮತ್ತು 89 T20 ಪಂದ್ಯಗಳಲ್ಲಿ 2364 ರನ್ ಗಳಿಸಿದ್ದಾರೆ.

ಮಿಥಾಲಿ ರಾಜ್ ಅವರ ಅದ್ಭುತ ಆಟಕ್ಕೆ ಈ ವರ್ಷ ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ನೀಡಿ ಗೌರವಿಸಲಾಯಿತು. ಈ ಗೌರವಕ್ಕೆ ಪಾತ್ರರಾದ ದೇಶದ 5ನೇ ಕ್ರಿಕೆಟಿಗ ಮತ್ತು ಮೊದಲ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು  ಮಿಥಾಲಿ ರಾಜ್ ಅವರು 2003 ರಲ್ಲಿ ಅರ್ಜುನ ಪ್ರಶಸ್ತಿ, 2015 ರಲ್ಲಿ ಪದ್ಮಶ್ರೀ ಮತ್ತು 2017 ರಲ್ಲಿ ವೋಗ್ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದರು.

click me!