IPL Retention: ಇಬ್ಬರು ಸ್ಪೋಟಕ ಬ್ಯಾಟರ್‌ಗಳನ್ನು ತಂಡದಿಂದ ಕೈಬಿಟ್ಟ ಸನ್‌ರೈಸರ್ಸ್‌ ಹೈದರಾಬಾದ್‌..!

Suvarna News   | Asianet News
Published : Nov 30, 2021, 07:34 PM IST

ಹೈದರಾಬಾದ್‌: ಬಹುನಿರೀಕ್ಷಿತ 15 ಆವೃತ್ತಿಯ ಐಪಿಎಲ್ (IPL 2022) ಟೂರ್ನಿಗೂ ಮುನ್ನ ಈಗಿರುವ 8 ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ವರು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಟಗಾರರ ರೀಟೈನ್ ಮಾಡಿಕೊಳ್ಳಲು ಇಂದು (ನವೆಂಬರ್ 30) ಕಡೆಯದಿನವಾಗಿದ್ದು, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಆಟಗಾರರನ್ನು ರಿಲೀಸ್ ಹಾಗೂ ರೀಟೈನ್ ಮಾಡಿಕೊಂಡಿವೆ. ರೀಟೈನ್ ಸಮಯ ಸಮೀಪಿಸುತ್ತಿದ್ದಂತೆಯೇ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಇಬ್ಬರು ಸ್ಪೋಟಕ ಬ್ಯಾಟರ್‌ಗಳು ತಂಡ ತೊರೆಯುವುದನ್ನು ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
18
IPL Retention: ಇಬ್ಬರು ಸ್ಪೋಟಕ ಬ್ಯಾಟರ್‌ಗಳನ್ನು ತಂಡದಿಂದ ಕೈಬಿಟ್ಟ ಸನ್‌ರೈಸರ್ಸ್‌ ಹೈದರಾಬಾದ್‌..!

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು 14 ಪಂದ್ಯಗಳನ್ನಾಡಿ ಕೇವಲ 3 ಗೆಲುವು ಹಾಗೂ 11 ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

28

2016ನೇ ಆವೃತ್ತಿಯ ಐಪಿಎಲ್ ಚಾಂಪಿಯನ್‌ ಸನ್‌ರೈಸರ್ಸ್‌ ತಂಡವು ಇದಾದ ಬಳಿಕ ಪ್ರತಿವರ್ಷ ಪ್ಲೇ ಆಫ್‌ಗೇರಲು ಯಶಸ್ವಿಯಾಗಿತ್ತು. ಆದರೆ 14ನೇ ಅವೃತ್ತಿಯ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಮೊದಲ ಬಾರಿಗೆ ಪ್ಲೇ ಆಫ್‌ಗೇರಲು ವಿಫಲವಾಗಿತ್ತು.

38

ಟೂರ್ನಿಯ ಮದ್ಯದಲ್ಲಿಯೇ ಡೇವಿಡ್ ವಾರ್ನರ್ ಅವರನ್ನು ಕೈಬಿಟ್ಟು ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಲಾಯಿತು. ಹೀಗಿದ್ದು ಆರೆಂಜ್ ಆರ್ಮಿಯ ಅದೃಷ್ಟ ಮಾತ್ರ ಬದಲಾಗಿರಲಿಲ್ಲ.

48

ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟೋಟಕ ಆರಂಭಿಕ ಬ್ಯಾಟರ್‌ಗಳಾದ ಡೇವಿಡ್‌ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋವ್‌ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ತೊರೆದಿರುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರ.

58

ರೀಟೈನೇಷನ್‌ಗೂ ಮುನ್ನ ಗ್ರೂಪ್ ಫೋಟೋ ಹಂಚಿಕೊಂಡಿರುವ ಸನ್‌ರೈಸರ್ಸ್‌ ಫ್ರಾಂಚೈಸಿ, ಎಲ್ಲರನ್ನೂ ಕೈಬಿಡುತ್ತಿಲ್ಲ. ಮುಂಬರುವ ದಿನಗಳಲ್ಲಿ ಅಂದರೆ ಹರಾಜಿನಲ್ಲಿ ಆರೆಂಜ್ ಅರ್ಮಿಯ ಕೆಲವು ಸದಸ್ಯರನ್ನು ಖರೀದಿಸುವುದಾಗಿ ತಿಳಿಸಿದೆ.

68

ಇದಕ್ಕೆ ಪ್ರತಿಕ್ರಿಯಿಸಿರುವ ಡೇವಿಡ್ ವಾರ್ನರ್‌, ಕಳೆದ ಹಲವು ವರ್ಷಗಳಿಂದ ನಮ್ಮನ್ನು ಬೆಂಬಲಿಸಿಕೊಂಡು ಬಂದ, ನನ್ನ ಏಳು-ಬೀಳುಗಳಲ್ಲಿ ಜತೆಗಿದ್ದ ಎಲ್ಲರಿಗೂ ಅನಂತ ಧನ್ಯವಾದಗಳು. ನೀವು ನಮ್ಮ ಮೇಲೆ ತೋರಿದ ಪ್ರೀತಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ನನ್ನನ್ನು ಪ್ರೀತಿಸಿದ ಸನ್‌ರೈಸರ್ಸ್‌ನ ಎಲ್ಲಾ ಅಭಿಮಾನಿಗಳು ನನ್ನ ಹಾಗೂ ಪತ್ನಿ ಕ್ಯಾಂಡೈಸ್ ವತಿಯಿಂದ ಅನಂತ ಧನ್ಯವಾದಗಳು ಎಂದು ಬರೆದಿದ್ದಾರೆ.

78
Jonny Bairstow

ಇನ್ನು ಇಂಗ್ಲೆಂಡ್ ತಂಡದ ವಿಸ್ಪೋಟಕ ಬ್ಯಾಟರ್‌ ಜಾನಿ ಬೇರ್‌ಸ್ಟೋವ್ ಕೂಡಾ ಅರೆಂಜ್ ಆರ್ಮಿ ತೊರೆದಿರುವ ಮಾಹಿತಿ ನೀಡಿದ್ದಾರೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಮತ್ತೆ ಸಿಗೋಣ ಎಂದು ಬೇರ್‌ಸ್ಟೋವ್ ಬರೆದುಕೊಂಡಿದ್ದಾರೆ.

88

ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ತನ್ನ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಶೀದ್ ಖಾನ್ ಅವರನ್ನು ರೀಟೈನ್ ಮಾಡಿಕೊಳ್ಳಲು ಒಲವು ತೋರಿದೆ ಎನ್ನಲಾಗಿದೆ. ಆದರೆ ರಶೀದ್‌ ಖಾನ್‌ಗೆ ಲಖನೌ ಫ್ರಾಂಚೈಸಿ ಗಾಳ ಹಾಕಿದೆ ಎನ್ನಲಾಗುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories