Vijay Hazare Trophy 2021-22: ಹ್ಯಾಟ್ರಿಕ್‌ ಸೆಂಚುರಿ ಬಾರಿಸಿದ ಋತುರಾಜ್ ಗಾಯಕ್ವಾಡ್‌..!

First Published Dec 11, 2021, 2:26 PM IST

ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್‌ (Ruturaj Gaikwad), ಇದೀಗ ವಿಜಯ್‌ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿಯಲ್ಲಿ ತಮ್ಮ ರೆಡ್ ಹಾಟ್ ಫಾರ್ಮ್‌ ಮುಂದುವರೆಸಿದ್ದಾರೆ. ಮಹಾರಾಷ್ಟ್ರ ಪರ 2021-22ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಗಾಯಕ್ವಾಡ್‌ ಸತತ ಮೂರನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಭಾರತದ ಪ್ರತಿಭಾನ್ವಿತ ಬ್ಯಾಟರ್‌ ಋತುರಾಜ್ ಗಾಯಕ್ವಾಡ್‌, ಹಾಲಿ ನಡೆಯುತ್ತಿರುವ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ತಾವಾಡಿದ ಮೊದಲ ಮೂರು ಪಂದ್ಯಗಳಲ್ಲಿ ಗಾಯಕ್ವಾಡ್ 3 ಶತಕ ಸಿಡಿಸಿ ಮಿಂಚಿದ್ದಾರೆ. ಇದೀಗ ಶನಿವಾರ(ಡಿ.11) ಕೇರಳ ವಿರುದ್ದ ರಾಜ್‌ಕೋಟ್‌ನಲ್ಲಿ ಮಾಧವ್ ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಋತುರಾಜ್ ಆಕರ್ಷಕ ಶತಕ ಬಾರಿಸಿದ್ದಾರೆ.

ಟೂರ್ನಿಯಲ್ಲಿ ಎಲೈಟ್ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಮಹಾರಾಷ್ಟ್ರ ಪಾಲಿಗೆ ಗಾಯಕ್ವಾಡ್ ಆಸರೆಯಾಗಿದ್ದಾರೆ. ಈ ಮೊದಲು ಛತ್ತೀಸ್‌ಘಡ ಹಾಗೂ ಮಧ್ಯ ಪ್ರದೇಶ ವಿರುದ್ದ ಕ್ರಮವಾಗಿ 154* ಹಾಗೂ 136 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ಇದೀಗ ಕೇರಳ ವಿರುದ್ದದ ಪಂದ್ಯದಲ್ಲಿ ಗಾಯಕ್ವಾಡ್ 129 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 124 ರನ್‌ ಚಚ್ಚಿದ್ದಾರೆ. ಋತುರಾಜ್ ಶತಕದ ನೆರವಿನಿಂದ ಮಹಾರಾಷ್ಟ್ರ ತಂಡವು 8 ವಿಕೆಟ್ ಕಳೆದುಕೊಂಡು 291 ರನ್ ಬಾರಿಸಿದೆ.

(photo source- iplt20.com)

आईपीएल 2021 में शतक

2021-22ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಗಾಯಕ್ವಾಡ್‌ ಮೂರು ಪಂದ್ಯಗಳಿಂದ ಒಟ್ಟು 414 ರನ್‌ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.  

ऋतुराज गायकवाड़

ಗಾಯಕ್ವಾಡ್ ಅಮೋಘ ಫಾರ್ಮ್‌ನಲ್ಲಿರುವುದರಿಂದ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕರಾಗಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 19ರಿಂದ ಆರಂಭವಾಗಲಿದೆ.

(photo source- iplt20.com)
 

ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಕೆ.ಎಲ್. ರಾಹುಲ್, ಶಿಖರ್ ಧವನ್ ಅವರಂತಹ ಆಟಗಾರರನ್ನು ಹಿಂದಿಕ್ಕಿ ಋತುರಾಜ್ ಗಾಯಕ್ವಾಡ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

click me!