RCB Biggest Mistakes: ಈ ಮೂವರು ಆಟಗಾರರನ್ನು ಕೈಬಿಟ್ಟು ಯಡವಟ್ಟು ಮಾಡಿಕೊಂಡ ಆರ್‌ಸಿಬಿ..!

Suvarna News   | Asianet News
Published : Dec 10, 2021, 01:57 PM IST

ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಗೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಬೆಂಗಳೂರು ತಂಡವು ಮೂವರು ಆಟಗಾರರನ್ನು ರೀಟೈನ್‌ ಮಾಡಿಕೊಂಡು ಇನ್ನುಳಿದ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದೆ. ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿ (Virat Kohli), ಗ್ಲೆನ್‌ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ಮೊಹಮ್ಮದ್‌ ಸಿರಾಜ್ (Mohammed Siraj) ಅವರನ್ನು ರೀಟೈನ್‌ ಮಾಡಿಕೊಂಡಿದೆ. ಆದರೆ ಬೆಂಗಳೂರು ಫ್ರಾಂಚೈಸಿ ಈ ಮೂರು ಆಟಗಾರರನ್ನು ಕೈಬಿಟ್ಟು ಅತಿದೊಡ್ಡ ಯಡವಟ್ಟು ಮಾಡಿಕೊಂಡಿದೆ. ಯಾವುದು ಆ ಮಿಸ್ಟೇಕ್ಸ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
18
RCB Biggest Mistakes: ಈ ಮೂವರು ಆಟಗಾರರನ್ನು ಕೈಬಿಟ್ಟು ಯಡವಟ್ಟು ಮಾಡಿಕೊಂಡ ಆರ್‌ಸಿಬಿ..!

ಕಳೆದೆರಡು ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನದ ಮೂಲಕ ಪ್ಲೇ ಆಫ್‌ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಫೈನಲ್‌ಗೇರಲು ವಿಫಲವಾಗಿತ್ತು. ಇದರ ಜತೆಗೆ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಮರಿಚಿಕೆಯಾಗಿ ಉಳಿದಿದೆ.

28

ಹೀಗಿದ್ದೂ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಬಿಸಿಸಿಐ ನಾಲ್ವರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಹೀಗಿದ್ದೂ, ಆರ್‌ಸಿಬಿ ಕೇವಲ ಮೂವರು ಆಟಗಾರರನ್ನು ರೀಟೈನ್‌ ಮಾಡಿಕೊಂಡಿದೆ. ಆರ್‌ಸಿಬಿ ಮಾಡಿದ ಮೂರು ಎಡವಟ್ಟುಗಳ ವಿವರ ಇಲ್ಲಿದೆ ನೋಡಿ.
 

38
1. ಯುಜುವೇಂದ್ರ ಚಹಲ್‌:

ಕಳೆದ ಕೆಲವು ವರ್ಷಗಳಿಂದ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಯುಜುವೇಂದ್ರ ಚಹಲ್‌ 113 ಪಂದ್ಯಗಳಿಂದ 139 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆರ್‌ಸಿಬಿ ಪರ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
 

48

ಆರ್‌ಸಿಬಿ ತಂಡದ ಪರ ಮಿಂಚಿನ ಪ್ರದರ್ಶನ ತೋರಿರುವ ಯುಜುವೇಂದ್ರ ಚಹಲ್‌ ಅವರನ್ನು ಖರೀದಿಸಲು ಹೊಸದಾಗಿ ಸೇರ್ಪಡೆಯಾಗಿರುವ ಲಖನೌ ಹಾಗೂ ಅಹಮದಾಬಾದ್‌ ಫ್ರಾಂಚೈಸಿ ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದ್ದು, ಚಹಲ್‌ ಆರ್‌ಸಿಬಿ ತಂಡದಿಂದ ಕೈಜಾರುವ ಸಾಧ್ಯತೆಯಿದೆ.

58
2. ದೇವದತ್ ಪಡಿಕ್ಕಲ್‌

2020ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪರ ಪಾದಾರ್ಪಣೆ ಮಾಡಿದ್ದ ದೇವದತ್‌ ಪಡಿಕ್ಕಲ್, ಚೊಚ್ಚಲ ಆವೃತ್ತಿಯಲ್ಲೇ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.
 

68

ಲೋಕಲ್ ಹೀರೋ ದೇವದತ್ ಪಡಿಕ್ಕಲ್‌ ಆರ್‌ಸಿಬಿ ಪರ ಕಳೆದೆರಡು ಆವೃತ್ತಿಗಳಲ್ಲಿ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಟಾಪ್ 4 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಭವಿಷ್ಯದ ದೃಷ್ಟಿಯಿಂದ ತಂಡಕ್ಕೆ ಆಸರೆಯಾಗಬಲ್ಲ ಪಡಿಕ್ಕಲ್ ಅವರನ್ನು ಕೈಬಿಟ್ಟು ಆರ್‌ಸಿಬಿ ದೊಡ್ಡ ತಪ್ಪು ಮಾಡಿಕೊಂಡಿದೆ 
 

78
3. ಹರ್ಷಲ್‌ ಪಟೇಲ್‌:

ಹರ್ಷಲ್‌ ಪಟೇಲ್ 2021ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಮೋಸ್ಟ್ ವ್ಯಾಲ್ಯೂಯೇಬಲ್ ಆಟಗಾರನಾಗಿ ಹೊರಹೊಮ್ಮಿದ್ದ ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಟ್ಟು ದೊಡ್ಡ ಅಚ್ಚರಿ ಮೂಡಿಸಿದೆ.

88

ಟೂರ್ನಿಯಲ್ಲಿ 32 ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ವಿಜೇತರಾಗಿದ್ದ ಹರ್ಷಲ್ ಪಟೇಲ್, ಮುಂಬರುವ ಐಪಿಎಲ್‌ನಲ್ಲಿ ಅಹಮದಾಬಾದ್‌ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಡೆತ್ ಓವರ್‌ ಸ್ಪೆಷಲಿಸ್ಟ್‌ ಆಗಿರುವ ಹರ್ಷಲ್‌ ಪಟೇಲ್‌ ಅವರನ್ನು ತಂಡದಿಂದ ಕೈಬಿಟ್ಟು ದೊಡ್ಡ ಯಡವಟ್ಟು ಮಾಡಿಕೊಂಡಿದೆ.

Read more Photos on
click me!

Recommended Stories