IPL 2025: ರಿಷಭ್ ಪಂತ್ ಪ್ರತಿ ನಿಮಿಷ, ಪ್ರತಿ ಗಂಟೆಗೆ ಪಡೆಯುವ ಸಂಭಾವನೆ ಇಷ್ಟೊಂದಾ?

Published : Apr 09, 2025, 04:35 PM ISTUpdated : Apr 09, 2025, 05:16 PM IST

Rishabh Pant IPL 2025 Salary : ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರನಾಗಿ ರಿಷಭ್ ಪಂತ್ ದಾಖಲೆ ಬರೆದಿದ್ದಾರೆ. ಆದರೆ ರಿಷಭ್ ಪಂತ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ. ಪಂತ್ ಅವರು ಒಂದು ನಿಮಿಷಕ್ಕೆ ಐಪಿಎಲ್‌ನಿಂದ ಎಷ್ಟು ಸಂಭಾವನೆ ಪಡೆಯುತ್ತಾರೆ ತಿಳಿಯೋಣ ಬನ್ನಿ

PREV
17
IPL 2025: ರಿಷಭ್ ಪಂತ್ ಪ್ರತಿ ನಿಮಿಷ, ಪ್ರತಿ ಗಂಟೆಗೆ ಪಡೆಯುವ ಸಂಭಾವನೆ ಇಷ್ಟೊಂದಾ?

Rishabh Pant IPL 2025 Salary : ಐಪಿಎಲ್ 2025 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆಯನ್ನು ರಿಷಭ್ ಪಂತ್ ಬರೆದಿದ್ದಾರೆ. ಲಖನೌ ಫ್ರಾಂಚೈಸಿ ಬರೋಬ್ಬರಿ 27 ಕೋಟಿ ರೂ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

27

ಇದಕ್ಕೂ ಮೊದಲು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 16 ಕೋಟಿ ರೂ.ಗೆ ಹರಾಜಾಗಿದ್ದ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 27 ಕೋಟಿ ರೂ.ಗೆ ಹರಾಜಾಗಿದ್ದಾರೆ.

37
LSG captain Rishabh Pant (Photo: IPL/BCCI)

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇದರಲ್ಲಿ ರಿಷಭ್ ಪಂತ್ ಆಡಿದ 4 ಪಂದ್ಯಗಳಲ್ಲಿ 0, 15, 2, 2 ರನ್ ಗಳಿಸಿ ಔಟಾಗಿ ಟೀಕೆಗೆ ಗುರಿಯಾಗಿದ್ದಾರೆ.

47

ಅಷ್ಟೇ ಅಲ್ಲ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಕೋಪಕ್ಕೆ ಪಂತ್ ಗುರಿಯಾಗಿದ್ದಾರೆ. ಪಂದ್ಯ ಸೋತ ಬಳಿಕ ಗೋಯೆಂಕಾ ಮತ್ತು ಪಂತ್ ಇಬ್ಬರೂ ಮಾತನಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

57

ಸದ್ಯ ಕೊಲ್ಕತ್ತಾದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ 21ನೇ ಲೀಗ್ ಪಂದ್ಯದಲ್ಲಿ ಪಂತ್ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಲೇ ಇಲ್ಲ. ಯಾವಾಗಲೂ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಪಂತ್ ಬ್ಯಾಟಿಂಗ್ ಮಾಡಲಿಳಿಯಲಿಲ್ಲ.

67

ಅವರ ಸ್ಥಾನದಲ್ಲಿ ಅಬ್ದುಲ್ ಸಮದ್ ಆಡಿದರು. ಇವರ ನಂತರ ಡೇವಿಡ್ ಮಿಲ್ಲರ್ ಆಡಿದರು. ಇದು ಕೂಡ ರಿಷಭ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಟೀಕೆಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ 27 ಕೋಟಿ ರೂ.ಗೆ ಹರಾಜಾದ ಪಂತ್ ಪ್ರತಿ ಸೆಕೆಂಡು, ಪ್ರತಿ ನಿಮಿಷ, ಪ್ರತಿ ಗಂಟೆ, ಪ್ರತಿ ದಿನ, ಪ್ರತಿ ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತಾರೆ ಎಂಬುದನ್ನು ನೋಡೋಣ.

77

ಅದರಂತೆ, ಪ್ರತಿ ಸೆಕೆಂಡಿಗೆ ರಿಷಭ್ ಪಂತ್ 49.6 ರೂ., ಪ್ರತಿ ನಿಮಿಷಕ್ಕೆ 2,976 ರೂ., ಪ್ರತಿ ಗಂಟೆಗೆ 1,78,571 ರೂ. ಸಂಬಳ ಪಡೆಯುತ್ತಾರೆ. ಅಲ್ಲದೆ, ದಿನಕ್ಕೆ 42,85,714 ರೂ., ವಾರಕ್ಕೆ 3,00,00,000 ರೂ. ಮತ್ತು ತಿಂಗಳಿಗೆ 13,50,00,000 ರೂ. ಸಂಬಳ ಪಡೆಯುತ್ತಾರೆ.

Read more Photos on
click me!

Recommended Stories