
ಪಂಜಾಬ್ ಕಿಂಗ್ಸ್ (PBKS) ಸ್ಪಿನ್ನರ್ ಯುಜುವೇಂದ್ರ ಚಹಲ್, ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕೀಪರ್-ಬ್ಯಾಟರ್ ಎಂ ಎಸ್ ಧೋನಿ ಅವರ ವಿರುದ್ಧ ಆಡೋ ಬಗ್ಗೆ ಹೇಳಿದ್ದಾರೆ. ಏಪ್ರಿಲ್ 8 ರಂದು ನ್ಯೂ ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
ಐಪಿಎಲ್‌ನಲ್ಲಿ ಚಹಲ್ ಮತ್ತು ಧೋನಿ 14 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಚಹಲ್ ಮೂರು ಬಾರಿ ಧೋನಿಯವರ ವಿಕೆಟ್ ಪಡೆದಿದ್ದಾರೆ. ಚಹಲ್ 100 ರನ್ ನೀಡಿ, 7.14 ಎಕಾನಮಿ ರೇಟ್ ಹೊಂದಿದ್ದಾರೆ.
ಧೋನಿ ನಾಯಕತ್ವದಲ್ಲಿ ಆಡಿದ ಅನುಭವದಿಂದ, ಚಹಲ್ ಅವರಿಗೆ ಧೋನಿಯವರ ಕ್ರಿಕೆಟ್ ಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರನ್ನ ಮಣಿಸೋದು ಎಷ್ಟು ಕಷ್ಟ ಅಂತಾನೂ ಗೊತ್ತು.
ಜಿಯೋ ಹಾಟ್‌ಸ್ಟಾರ್ ಪ್ರೆಸ್ ರೂಂನಲ್ಲಿ ಮಾತನಾಡಿದ ಯುಜುವೇಂದ್ರ ಚಹಲ್, ಎಂ.ಎಸ್.ಧೋನಿಗೆ ನಾನು ಹೇಗೆ ಬೌಲ್ ಮಾಡ್ತೀನಿ ಅಂತ ಚೆನ್ನಾಗಿ ಗೊತ್ತು. ಯಾಕಂದ್ರೆ ಅವರು ವಿಕೆಟ್ ಹಿಂದೆ ನಿಂತು ನನ್ನ ಆಟ ನೋಡಿದ್ದಾರೆ. ಧೋನಿ ಕ್ರೀಸ್‌ನಲ್ಲಿದ್ದಾಗ ಅಟ್ಯಾಕ್ ಮಾಡೋದು ಮುಖ್ಯ ಅಂತಾನೂ ಹೇಳಿದ್ದಾರೆ.
“ಮಹಿ ಭಾಯ್ ವರ್ಷಗಳಿಂದ ವಿಕೆಟ್ ಹಿಂದೆ ನಿಂತು ನಾನು ಬೌಲ್ ಮಾಡೋದನ್ನ ನೋಡಿದ್ದಾರೆ. ನಾನು ಹೇಗೆ ಬೌಲ್ ಮಾಡ್ತೀನಿ, ಏನ್ ಯೋಚ್ನೆ ಮಾಡ್ತೀನಿ, ಏನ್ ಮಾಡ್ತೀನಿ ಅಂತ ಅವರಿಗೆ ಗೊತ್ತು. ನಾನು ಮಹಿ ಭಾಯ್ ಏನ್ ಯೋಚ್ನೆ ಮಾಡ್ತಾರೆ ಅಂತ 2-3 ಪರ್ಸೆಂಟ್ ಅಷ್ಟೇ ಊಹಿಸಬಲ್ಲೆ” ಅಂತ ಚಹಲ್ ಹೇಳಿದ್ದಾರೆ.
“ಅವರು 1-10 ಓವರ್‌ಗಳ ನಡುವೆ ಬಂದ್ರೆ, ನಾವು ಅಟ್ಯಾಕ್ ಮಾಡ್ಬೇಕು ಅಂತ ಗೊತ್ತು. ಆದ್ರೆ ಅವರು ಮ್ಯಾಚ್‌ನ ಕೊನೆಯ ಹಂತದಲ್ಲಿ ಬಂದ್ರೆ, ಅವರು ಏನ್ ಮಾಡ್ತಾರೆ ಅಂತ ನಮಗೆ ಅರ್ಥ ಆಗುತ್ತೆ. ಅದಕ್ಕೆ ತಕ್ಕ ಹಾಗೆ ಪ್ಲಾನ್ ಮಾಡ್ತೀವಿ. ಅವರಿಗೆ ಸುಲಭವಾಗಿ ಬಾಲ್ ಹಾಕೋಕೆ ಆಗಲ್ಲ. ಹಾಕಿದ್ರೆ, ಅವರು ಅದನ್ನ ಸ್ಟೇಡಿಯಂನಿಂದ ಆಚೆ ಕಳಿಸ್ತಾರೆ” ಅಂತ ಅವರು ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಆಡೋ ಬಗ್ಗೆ ಯುಜುವೇಂದ್ರ ಚಹಲ್ ಮಾತನಾಡಿದ್ದಾರೆ. ಅವರು ಟೀಮ್‌ನಲ್ಲಿರೋ ಪ್ರತಿಯೊಬ್ಬ ಆಟಗಾರನಿಗೂ ಫ್ರೀಡಂ ಕೊಡ್ತಾರೆ. ಕಷ್ಟದ ಪರಿಸ್ಥಿತಿಯಲ್ಲೂ ಅವರು ಕೂಲ್ ಆಗಿರ್ತಾರೆ ಅಂತ ಹೇಳಿದ್ದಾರೆ.
“ನನಗೆ ಶ್ರೇಯಸ್ ಚೆನ್ನಾಗಿ ಗೊತ್ತು. ಅವನು ನನ್ನ ಒಳ್ಳೆಯ ಫ್ರೆಂಡ್. ಅವನು ತುಂಬಾ ಫ್ರೀಡಂ ಕೊಡ್ತಾನೆ. ನೀವು ಯಾವಾಗ ಬೇಕಾದ್ರೂ ಅವನ ಹತ್ರ ಹೋಗಬಹುದು. ಅವನು ತುಂಬಾ ಕೂಲ್. ಎದುರಾಳಿ ಟೀಮ್ ರನ್ ಗಳಿಸ್ತಿದ್ರೂ, ಅವನು ಟೆನ್ಷನ್ ತಗೊಳಲ್ಲ. ಅವನು ಎಲ್ಲರ ಮಾತನ್ನು ಕೇಳ್ತಾನೆ. ಅವನು ಓಪನ್ ಮೈಂಡ್ ಇರೋನು. ಅವನ ಕ್ಯಾಪ್ಟನ್ಸಿಯಲ್ಲಿ ಆಡೋಕೆ ನನಗೆ ತುಂಬಾ ಖುಷಿ ಆಗ್ತಿದೆ” ಅಂತ ಸ್ಪಿನ್ನರ್ ಹೇಳಿದ್ದಾರೆ.
ಯುಜುವೇಂದ್ರ ಚಹಲ್ 2011 ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ತಮ್ಮ ಐಪಿಎಲ್ ಜರ್ನಿಯನ್ನು ಶುರು ಮಾಡಿದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದರು. ಈಗ ಪಂಜಾಬ್ ಕಿಂಗ್ಸ್ ಪರ ಆಡ್ತಿದ್ದಾರೆ. 34 ವರ್ಷದ ಚಹಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 113 ಪಂದ್ಯಗಳಲ್ಲಿ 139 ವಿಕೆಟ್ ಪಡೆದಿದ್ದಾರೆ.
ಚಹಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರು. ಅವರು 163 ಪಂದ್ಯಗಳಲ್ಲಿ 7.88 ಸರಾಸರಿಯಲ್ಲಿ 206 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 6 ಬಾರಿ ನಾಲ್ಕು ವಿಕೆಟ್ ಮತ್ತು ಒಂದು ಬಾರಿ ಐದು ವಿಕೆಟ್ ಪಡೆದಿದ್ದಾರೆ.
ಚಹಲ್ ಮತ್ತು ಕುಲದೀಪ್ ಯಾದವ್ ಸ್ಪಿನ್ನರ್‌ಗಳಾಗಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. 2017 ರಿಂದ 2019 ರವರೆಗೆ ಟೀಮ್ ಇಂಡಿಯಾದ ಸಕ್ಸಸ್‌ನಲ್ಲಿ ಇವರಿಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು.
ಕುಲದೀಪ್ ಜೊತೆಗಿನ ಬಾಂಡಿಂಗ್ ಯಾವತ್ತೂ ಮುರಿಯಲ್ಲ. ಕುಲದೀಪ್ ಚೆನ್ನಾಗಿ ಆಡ್ತಿರೋದಕ್ಕೆ ಖುಷಿ ಇದೆ. ಕುಲದೀಪ್ ನಂಬರ್ ಒನ್ ಸ್ಪಿನ್ನರ್ ಅಂತ ಚಹಲ್ ಹೇಳಿದ್ದಾರೆ.
“ಕುಲ್-ಚಾ ಅನ್ನೋ ಹೆಸ್ರು ಕೇಳಿದ್ರೆ ನನಗೆ ತುಂಬಾ ಖುಷಿಯಾಗುತ್ತೆ. ಕುಲದೀಪ್ (ಯಾದವ್) ಜೊತೆಗಿನ ನನ್ನ ಪಾರ್ಟ್ನರ್‌ಶಿಪ್ ಯಾವತ್ತೂ ಸ್ಪೆಷಲ್” ಅಂತ ಪಿಬಿಕೆಎಸ್ ಸ್ಪಿನ್ನರ್ ಹೇಳಿದ್ದಾರೆ.
“ಕುಲದೀಪ್ ಈಗ ತುಂಬಾ ಚೆನ್ನಾಗಿ ಆಡ್ತಿದ್ದಾನೆ. ನನಗೆ ತುಂಬಾ ಖುಷಿ ಇದೆ. ಅವನು ಬೆಸ್ಟ್. ನನ್ನ ಪ್ರಕಾರ ಅವನು ಪ್ರಪಂಚದ ನಂಬರ್ ಒನ್ ರಿಸ್ಟ್-ಸ್ಪಿನ್ನರ್. ಈಗ ಐಪಿಎಲ್ ನಡೀತಿದೆ. ಮುಂದೆ ಏನಾಗುತ್ತೋ ನೋಡೋಣ” ಅಂತ ಅವರು ಹೇಳಿದ್ದಾರೆ.