ಟೆಸ್ಟ್, ಟಿ20ಗೆ ವಿದಾಯ ಹೇಳಿದರೂ ಬಿಸಿಸಿಐನಿಂದ ರೋಹಿತ್ ಶರ್ಮಾ ಪಡೆಯುವ ಸ್ಯಾಲರಿ ಎಷ್ಟು?

Published : May 16, 2025, 11:52 PM IST

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಳೆದ ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಮಾದರಿಗೂ ವಿದಾಯ ಹೇಳಿದ್ದಾರೆ. ಸದ್ಯ ಏಕದಿನದಲ್ಲಿ ಮಾತ್ರ ಮುಂದುವರಿದ್ದಾರೆ. ಆದರೂ ರೋಹಿತ್ ಶರ್ಮಾ ಬಿಸಿಸಿಐನಿಂದ ಪಡೆಯುವ ಆದಾಯವೆಷ್ಟು? 

PREV
15
ಟೆಸ್ಟ್, ಟಿ20ಗೆ ವಿದಾಯ ಹೇಳಿದರೂ ಬಿಸಿಸಿಐನಿಂದ ರೋಹಿತ್ ಶರ್ಮಾ ಪಡೆಯುವ ಸ್ಯಾಲರಿ ಎಷ್ಟು?

ಟೆಸ್ಟ್ ಕ್ರಿಕೆಟ್ ವಿದಾಯದ ಬಳಿಕ ರೋಹಿತ್ ಶರ್ಮಾ ಭಾರಿ ಟ್ರೆಂಡ್ ಆಗಿದ್ದಾರೆ. . ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಹೆಸರಿನ ಸ್ಟ್ಯಾಂಡ್ ನಿರ್ಮಾಣವಾಗಿದೆ. ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ20 ಮಾದರಿಯಿಂದ ನಿವೃತ್ತಿಯಾಗಿದ್ದಾರೆ. ಇದೀಗ ಏಕದಿನದಲ್ಲಿ ಮಾತ್ರ ಉಳಿದುಕೊಂಡಿದ್ದಾರೆ. ಕೇವಲ ಏಕದಿನ ಮಾತ್ರ ಆಡುತ್ತಿದ್ದರೂ ರೋಹಿತ್ ಶರ್ಮಾ ಆದಾಯ ಕಡಿಮೆಯಾಗಿಲ್ಲ. ಟೆಸ್ಟ್, ಟ20 ಆದಾಯ ಇಲ್ಲದೇ ಇದ್ದರೂ ರೋಹಿತ್ ಮಾತ್ರ ಕೋಟಿ ಕೋಟಿ ರೂಪಾಿ ಗಳಿಸುತ್ತಾರೆ.  

25

ರೋಹಿತ್ ಶರ್ಮಾ ಏಕದಿನ ತಂಡದ ನಾಯಕ. ಇಷ್ಟೇ ಅಲ್ಲ ಬಿಸಿಸಿಐ ವಾರ್ಷಿಕ ಆಟಗಾರರ ಒಪ್ಪಂದದಲ್ಲಿ ಎ ಪ್ಲಸ್ ಗ್ರೇಡ್ ಆಟಗಾನಾಗಿ ಗುರುತಿಸಿಕೊಂಡಿದ್ದಾರೆ.  ಬಿಸಿಸಿಐ ಕಾಂಟ್ರಾಕ್ಟ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎ ಪ್ಲಸ್ ಕ್ರಿಕೆಟಿಗ.  ಎ ಪ್ಲಸ್ ಕೆಟಗರಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ಬಿಸಿಸಿಐ ವಾರ್ಷಿಕವಾಗಿ  7  ಕೋಟಿ ರೂಪಾಯಿ ೇವೇತನ ನೀಡುತ್ತದೆ. ಹೀಗಾಗಿ ರೋಹಿತ್ ಶರ್ಮಾ ಇನ್ನು ಮುಂದೆ ವಾರ್ಷಿಕವಾಗಿ 7 ಕೋಟಿ ರೂಪಾಯಿ ಪಡೆಯುತ್ತಾರೆ.

 

 

35

 ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿರುವ ರೋಹಿತ್ ಶರ್ಮಾ BCCIಯಿಂದ 7 ಕೋಟಿ ವೇತನ ಪಡೆಯುತ್ತಾರೆ. ರೋಹಿತ್ ಶರ್ಮಾ ಏಕದಿನ ಹಾಗೂ ಐಪಿಎ ಲ್ ಟೂರ್ನಿಯಲ್ಲಿ ಮಾತ್ರ ಪಾಲ್ಗೊಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 

45

ರೋಹಿತ್ ಶರ್ಮಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ ರೋಹಿತ್ ಶರ್ಮಾ ನಾಯಕನಾಗಿ, ಬ್ಯಾಟ್ಸ್‌ಮನ್ ಆಗಿ ದಿಟ್ಟಹೋರಾಟ ನೀಡಿದ್ದಾರೆ. ಇದೀಗ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಆಟ ಕಣ್ತುಂಬಿಕೊಳ್ಳಲು  ಪ್ರಯತ್ನ ಮಾಡುತ್ತಿದೆ.

 

55

ರೋಹಿತ್ ಶರ್ಮಾ ಟೀಂ ಇಂಡಿಯಾ ಕಂಡ ಮತ್ತೊಬ್ಬ ಉತ್ತಮ ನಾಯಕ. ಟಿ20 ವಿಶ್ವಕಪ್ ಟ್ರೋಫಿ, ಚಾಂಪಿಯನ್ಸ್ ಟ್ರೋಫಿ ಟೂರ್ನಿ ಗೆಲ್ಲಸಿಕೊಟ್ಟ ನಾಯಕನಾಗಿ ರೋಹಿತ್ ಶರ್ಮಾ ಗುರುತಿಸಿಕೊಂಡಿದ್ದಾರೆ. 

Read more Photos on
click me!

Recommended Stories