ಕೆಎಲ್ ರಾಹುಲ್ ಆಥಿಯಾ ಶೆಟ್ಟಿ ಮದುವೆ ಗೆಸ್ಟ್‌ ಲಿಸ್ಟ್‌ನಲ್ಲಿ ಯಾರಾರಿದ್ದಾರೆ?

Published : Jan 12, 2023, 05:53 PM IST

ಸುನೀಲ್ ಶೆಟ್ಟಿ (Suniel Shetty) ಪುತ್ರಿ ಅಥಿಯಾ ಶೆಟ್ಟಿ (Athiya Shetty)  ಮತ್ತು ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಇದೇ ತಿಂಗಳು ಜನವರಿ 23 ರಂದು ಮದುವೆಯಾಗಲಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ಮೂರು ದಿನಗಳ ಕಾಲ ಎಲ್ಲಾ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ಆದರೆ, ಇದುವರೆಗೂ ಶೆಟ್ಟಿ ಅಥವಾ ಕೆಎಲ್ ರಾಹುಲ್ ಕುಟುಂಬದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಥಿಯಾ ಮತ್ತು ಕೆಎಲ್ ರಾಹುಲ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಜೋಡಿಯ ವಿವಾಹ ವಿಧಿ ವಿಧಾನಗಳು ಜನವರಿ 21 ರಿಂದ 23 ರವರೆಗೆ ನಡೆಯಲಿದೆ.  

PREV
18
ಕೆಎಲ್ ರಾಹುಲ್  ಆಥಿಯಾ ಶೆಟ್ಟಿ  ಮದುವೆ ಗೆಸ್ಟ್‌ ಲಿಸ್ಟ್‌ನಲ್ಲಿ ಯಾರಾರಿದ್ದಾರೆ?

ವರದಿಗಳ ಪ್ರಕಾರ, ಜನವರಿ 21 ಮತ್ತು ಜನವರಿ 23 ರ ನಡುವೆ ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಎಲ್ಲಾ ವಿವಾಹ ಸಮಾರಂಭಗಳು ನಡೆಯಲಿವೆ. ಜನವರಿ 21-22 ರಂದು ಹಲ್ದಿ, ಮೆಹೆಂದಿ ಮತ್ತು ಸಂಗೀತ ಸಮಾರಂಭಗಳು ನಡೆಯಲಿವೆ.

28

ಅದೇ ಸಮಯದಲ್ಲಿ, ಜನವರಿ 23 ರಂದು, ಇಬ್ಬರೂ 7 ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲಾ ವಿವಾಹ ವಿಧಿವಿಧಾನಗಳು ಖಂಡಾಲಾದಲ್ಲೇ ನಡೆಯಲಿವೆ.
 

38

ಕೆಎಲ್ ರಾಹುಲ್ ಮತ್ತುಆಥಿಯಾ ಶೆಟ್ಟಿ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರಲ್ಲದೇ, ಬಾಲಿವುಡ್ (Bollywood) ಮತ್ತು ಕ್ರೀಡೆಯ ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.

48

ಈ ಹೈ-ಪ್ರೊಫೈಲ್ ಮದುವೆಯಲ್ಲಿ ಸಲ್ಮಾನ್ ಖಾನ್, ಜಾಕಿ ಶ್ರಾಫ್, ಬಾಲಿವುಡ್‌ನ ಅಕ್ಷಯ್ ಕುಮಾರ್, ಮಹೇಂದ್ರ ಸಿಂಗ್ ಧೋನಿ ಮತ್ತು ಕ್ರಿಕೆಟ್ ಜಗತ್ತಿನ ವಿರಾಟ್ ಕೊಹ್ಲಿಯಂತಹ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.

 
 

58

ಕೆಎಲ್ ರಾಹುಲ್ ಅವರ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈ ಜೋಡಿ ಶೀಘ್ರದಲ್ಲಿಯೇ ತಮ್ಮ ಆಪ್ತರಿಗೆ ಮತ್ತು ಸ್ನೇಹಿತರಿಗೆ ಮದುವೆಯ ಆಮಂತ್ರಣಗಳನ್ನು ಕಳುಹಿಸಲಿದ್ದಾರೆ. ಇತ್ತೀಚೆಗೆ ಖ್ಯಾತ ವೆಡ್ಡಿಂಗ್ ಪ್ಲಾನರ್ ಕೂಡ ತಮ್ಮ ತಂಡದೊಂದಿಗೆ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದ್ದರು. 
 

68

 ಪ್ರಸ್ತುತ  ಕೆಎಲ್ ರಾಹುಲ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ಈ ಸರಣಿಯು ಜನವರಿ 15 ರಂದು ಕೊನೆಗೊಳ್ಳಲಿದೆ.

 
 

78

ಮಾಧ್ಯಮ ವರದಿಗಳ ಪ್ರಕಾರ, ಲವ್ ಬರ್ಡ್ಸ್ ಕೆಲವು ತಿಂಗಳ ಹಿಂದೆ ಮುಂಬೈನ ಬಾಂದ್ರಾದಲ್ಲಿ ಹೊಸ ಮನೆಯನ್ನು ಖರೀದಿಸಿದ್ದು, ಶೀಘ್ರದಲ್ಲಿಯೇ ಸ್ಥಳಾಂತರಗೊಳ್ಳಲಿದ್ದಾರೆ. ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಬಹಳ ಸಮಯದಿಂದ ಪರಸ್ಪರ ರಿಲೆಷನ್‌ಶಿಪ್‌ನಲ್ಲಿದ್ದಾರೆ. 
 

88

ಇವರ ಸಂಬಂಧಕ್ಕೆ ಇಬ್ಬರ ಕುಟುಂಬದವರಿಂದ ಕೂಡ ಯಾವುದೇ ಅಭ್ಯಂತರವಿಲ್ಲ. ಕೆಲ ದಿನಗಳ ಹಿಂದೆ ಕೆ.ಎಲ್.ರಾಹುಲ್ ತಮ್ಮ ಬೆನ್ನಿನ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾಗ ಅವರೊಂದಿಗೆ ಅಥಿಯಾ ಕೂಡ ಜೊತೆಯಾಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories