ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್‌ ಯಾದವ್‌ಗೂ ತುಳುನಾಡಿಗೂ ಇದೆ ಸಂಬಂಧ!

Published : Jan 09, 2023, 05:55 PM IST

T20  ಕ್ರಿಕೆಟ್‌ನಲ್ಲಿ  ತಮ್ಮ ಬ್ಯಾಟ್‌ ಮೂಲಕ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ ಸೂರ್ಯಕುಮಾರ್ ಯಾದವ್. ರಾಜ್‌ಕೋಟ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ದ ನಡೆದ 3ನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ ಅಜೇಯ 112  ರನ್ ಸಿಡಿಸುವ ಮೂಲಕ ಮತ್ತೊಮ್ಮೆ  ತಾವು SKY ಎಂದು ಸಾಬೀತು ಪಡಿಸಿದ್ದಾರೆ.  ಮೂಲತಃ ಉತ್ತರ ಪ್ರದೇಶದವರಾದ ಸೂರ್ಯ ಕುಮಾರ್‌ಗೂ ನಮ್ಮ ಕರ್ನಾಟಕಕ್ಕೂ ಬಾರೀ ನಂಟಿದೆ ಎಂದರೆ ಆಶ್ಚರ್ಯವಾಗುವುದು ಸಹಜ. ಆದರೆ ಇದು ನಿಜ. ಹಾಗಾದರೆ ಸೂರ್ಯ ಕುಮಾರ್‌ ಯಾದವ್‌ಗೂ ಕರ್ನಾಟಕಕ್ಕೂ ಏನು ಸಂಬಂಧ?

PREV
18
ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್‌ ಯಾದವ್‌ಗೂ ತುಳುನಾಡಿಗೂ ಇದೆ ಸಂಬಂಧ!

ಶ್ರೀಲಂಕಾದ ವಿರುದ್ಧ  ಭರ್ಜರಿ ಶತಕ ಗಳಿಸಿದಾಗ ಕೆ ಎಲ್‌ ರಾಹುಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ 'ಬಾರಿ ಎಡ್ಡೆ ಗೊಬ್ಬಿಯ' (ತುಂಬಾ ಚೆನ್ನಾಗಿ ಆಡಿದೆ) ಎಂದು ತುಳುವಿನಲ್ಲಿ ಸೂರ್ಯ ಕುಮಾರ್‌ ಅವರಿಗೆ  ಅಭಿನಂದಿಸಿದ್ದರು.  

28
(Photo Source: Instagram)

ಸೂರ್ಯ ಕುಮಾರ್‌ ಯಾದವ್‌ ಅವರ  ಪತ್ನಿ ದೇವಿಶಾ ಶೆಟ್ಟಿ  'ಇನ್ನು ಸ್ಪಲ್ಪ ತುಳು ಕಲಿಸಬೇಕು ಅವರಿಗೆ' ಎಂದು ತುಳುವಿನಲ್ಲೇ ಕೆ ಎಲ್‌ ರಾಹುಲ್‌ ಅವರಿಗೆ  ಪ್ರತಿಕ್ರಿಯಿಸಿ ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್‌ ಮಾಡಿದ್ದರು.  

38

ವಾಸ್ತವವಾಗಿ ಉತ್ತರ ಪ್ರದೇಶದಲ್ಲಿ ಹುಟ್ಟಿದ್ದರೂ ಸೂರ್ಯ ಕುಮಾರ್‌ ಯಾದವ್‌ ಕ್ರಿಕೆಟ್‌ಗಾಗಿ ಆರಿಸಿಕೊಂಡಿದ್ದು ಮುಂಬೈ ಮತ್ತು ವರಿಸಿದ್ದು ಕರಾವಳಿಯ ಹುಡುಗಿ ದೇವಿಶಾ ಶೆಟ್ಟಿ ಅವರನ್ನು.

48

ಈಗ ಮುಂಬೈನಲ್ಲಿ ನೆಲೆಸಿರುವ ಸೂರ್ಯ ಕುಮಾರ್‌ ಅವರ ಪತ್ನಿ ದೇವಿಶಾ ಶೆಟ್ಟಿ ಅವರ ತಂದೆ ತಾಯಿ ಮೂಲತಃ ತುಳುನಾಡಿನವರು.  ಹೀಗೆ ಸೂರ್ಯಕುಮಾರ್‌ ಯಾದವ್‌ ತುಳು ನಾಡಿನ ಆಳಿಯ.

58

ಸೂರ್ಯಕುಮಾರ್ ಯಾದವ್ 2012 ರಲ್ಲಿ ಮುಂಬೈನ ಪೊದ್ದಾರ್ ಪದವಿ ಕಾಲೇಜಿನಲ್ಲಿ ತುಳುನಾಡಿನ ಹುಡುಗಿ ದೇವಿಶಾ ಶೆಟ್ಟಿಯನ್ನು ಭೇಟಿಯಾದರು.    

68

ದೇವೀಶಾ ಅವರ ರ ನೃತ್ಯವನ್ನು ನೋಡಿ ಮೊದಲ ನೋಟದಲ್ಲೇ ಬೋಲ್ಡ್‌ ಆದ ಸೂರ್ಯಕುಮಾರ್‌ ನಿಧಾನವಾಗಿ ದೇವಿಶಾರಿಗೆ ಹತ್ತಿರವಾದರು.

78
(Photo Source: Instagram)

2012 ರಿಂದ 2016  ರವರೆಗೆ, ಸಂಬಂಧದಲ್ಲಿದ್ದ ಸೂರ್ಯಕುಮಾರ್‌ಮತ್ತು ದೇವಿಶಾ ದಕ್ಷಿಣ ಭಾರತದ ಪದ್ಧತಿಯಂತೆ 29 ಮೇ 2016 ರಂದು ವಿವಾಹವಾದರು. 

88

ದೇವಿಶಾ ಸಾಮಾಜಿಕ ಕಾರ್ಯಕರ್ತೆ. 2013 ರಿಂದ 2015 ರವರೆಗೆ ಅವರು 'ದಿ ಲೈಟ್‌ಹೌಸ್ ಪ್ರಾಜೆಕ್ಟ್' ಎಂಬ ಎನ್‌ಜಿಒಗೆ ಸ್ವಯಂಸೇವಕರಾಗಿ ಕೆಲಸ ಮಾಡಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories