ನಾಯಕನಾದ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಟಾಂಗ್ ನೀಡಿದ್ರಾ ಸೂರ್ಯಕುಮಾರ್?

First Published | Nov 27, 2023, 11:47 AM IST

ಐಸಿಸಿ ವಿಶ್ವಕಪ್ ಫೈನಲ್ ಸೋಲಿನ ನೋವು ಮಾಸಿಲ್ಲ. ಸೋಲಿಗೆ ಕಾರಣಗಳ ಚರ್ಚೆ ಇನ್ನೂ ಮುಗಿದಿಲ್ಲ. ಇದರ ಬೆನ್ನಲ್ಲೇ ಭಾರತ ಟಿ20 ತಂಡಕ್ಕೆ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ನೀಡಿದ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸೂರ್ಯಕುಮಾರ್, ವಿರಾಟ್ ಕೊಹ್ಲಿಗೆ ಟಾಂಗ್ ನೀಡಿದ್ದಾರೆ ಅನ್ನೋ ವಿವಾದವೂ ಶುರುವಾಗಿದೆ.
 

ಐಸಿಸಿ ವಿಶ್ವಕಪ್ ಫೈನಲ್ ಸೋಲಿನ  ಬಳಿಕ ಟೀಂ ಇಂಡಿಯಾ ಟಿ20 ತಂಡ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡುತ್ತಿದೆ.  5 ಪಂದ್ಯಗಳ ಸರಣಿಯಲ್ಲಿ ಆರಂಭಿಕ 2 ಪಂದ್ಯ ಗೆದ್ದು ಭರ್ಜರಿ ಮುನ್ನಡೆ ಸಾಧಿಸಿದೆ. ಇದರ ನಡುವೆ ವಿವಾದವೊಂದು ಶುರುವಾಗಿದೆ.

ಪಿಚ್, ಕಂಡೀಷನ್ ಅರಿಯುವಲ್ಲಿ ವಿಫಲ, ಬ್ಯಾಟಿಂಗ್ ವೈಫಲ್ಯದಿಂದ ಬೌಲರ್ ಮೇಲೆ ಒತ್ತಡ ಸೇರಿದಂತೆ  ಐಸಿಸಿ ಫೈನಲ್ ಪಂದ್ಯದ ಸೋಲಿಗೆ ಕೆಲ ಕಾರಣಗಳಿದೆ. ಇದರ ನಡುವೆ ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ. 
 

Latest Videos


ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ವೇಳೆ ಮಹತ್ವದ ಹೇಳಿಕೆ ನೀಡಿದ್ದಾರೆ. ತಂಡದ ಎಲ್ಲರೂ ತಮ್ಮ ವೈಯುಕ್ತಿಕ ದಾಖಲೆಗಳಿಗೆ ಆಡುವುದನ್ನು ಬಿಟ್ಟು ತಂಡಕ್ಕಾಗಿ ಆಡಬೇಕು ಎಂದಿದ್ದಾರೆ.

ಮೈದನಕ್ಕಿಳಿದಾಗ ನಿಸ್ವಾರ್ಥರಾಗಿ ಆಡಬೇಕು. ಮೊದಲು ತಂಡ, ಬಳಿಕ ನಿಮ್ಮ ದಾಖಲೆ. ನಾನು ವೈಯುಕ್ತಿಕ ದಾಖಲೆಗಿಂತ ತಂಡದ ಗುರಿಯ ಕುರಿತು ಹೆಚ್ಚು ಯೋಚಿಸುತ್ತೇನೆ. ತಂಡಕ್ಕಾಗಿ ಆಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಸೂರ್ಯಕಮಾರ್ ಯಾದವ್ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ವೈಯುಕ್ತಿಕ ದಾಖಲೆಗಾಗಿ ಆಡುತ್ತಿದ್ದಾರೆ ಆನ್ನೋ ಟೀಕೆ ಕೇಳಿಬಂದಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಜೊತೆ ಹೋಲಿಕೆ ಕೂಡ ಮಾಡಲಾಗಿತ್ತು.
 

ರೋಹಿತ್ ನಿಸ್ವಾರ್ಥರಾಗಿ ಆಡುತ್ತಿದ್ದಾರೆ. ಕೊಹ್ಲಿ ತಮ್ಮ ಸ್ವಾರ್ಥಕ್ಕಾಗಿ ಆಡುತ್ತಿದ್ದಾರೆ ಅನ್ನೋ ಟೀಕೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿತ್ತು. ಇದು ಕೂಡ ಸೋಲಿಗೆ ಕಾರಣವಾಗಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. 
 

ಯುವ ಆಟಗಾರರು ಫಿಯರ್‌ಲೆಸ್ ಕ್ರಿಕೆಟ್ ಆಡಬೇಕು, ಕ್ರಿಕೆಟ್ ಅಸ್ವಾದಿಸುತ್ತಾ ಆಡಬೇಕು. ಇದರ ನಡುವೆ ಮತ್ತೇನು ಮಾಡುವ ಯೋಚನೆ ಬೇಡ ಎಂದು ಸೂರ್ಯಕುಮಾರ್ ಯಾದವ್ ತಂಡದ ಯುವ ಕ್ರಿಕೆಟಿಗರಿಗೆ ಸಲಹೆ ನೀಡಿದ್ದಾರೆ.

ಈ ಟೀಕೆ ಆರೋಪದ ನಡುವೆ ಸೂರ್ಯಕುಮಾರ್ ಯಾದವ್ ನೀಡಿರುವ ನಿಸ್ವಾರ್ಥ ಆಟದ ಹೇಳಿಕೆ ಕೊಹ್ಲಿ ಗುರಿಯಾಗಿಸಿ ಹೇಳಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

click me!