ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ದಾಳಿ ಮೂಲಕ ದಾಖಲೆ ಬರೆದ ವೇಗಿ ಮೊಹಮ್ಮದ್ ಶಮಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಶಮಿ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಭಾರಿ ಚರ್ಚೆಯಾಗುತ್ತಿದೆ.
ಈ ಚರ್ಚೆಗೆ ಮುಖ್ಯ ಕಾರಣ ಮೊಹಮ್ಮದ್ ಶಮಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ. ದೆಹಲಿಯಲ್ಲಿ ಶಮಿ ಹಾಗೂ ಅಮಿತ್ ಶಾ ಭೇಟಿಯಾಗಿದ್ದಾರೆ.
ಇಗಾಸ್ ಬಗ್ವಾಲ್ ಹಬ್ಬಕ್ಕಾಗಿ ಅಮಿತ್ ಶಾ ಬಿಜೆಪಿ ಸಂಸದ, ರಾಷ್ಟ್ರೀಯ ವಕ್ತಾರ ಅನಿಲ್ ಬಲೌನಿ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಮೊಹಮ್ಮದ್ ಶಮಿಯನ್ನು ಭೇಟಿಯಾಗಿದ್ದರು.
ಅನಿಲ್ ಬಲೌನಿ ಆಮಂತ್ರಣದ ಮೇರೆಗೆ ಮೊಹಮ್ಮದ್ ಶಮಿ ಕೂಡ ನಿವಾಸಕ್ಕೆ ಆಗಮಿಸಿದ್ದರು. ಅಮಿತ್ ಶಾ ಭೇಟಿ ಬಳಿಕ ಫೋಟೋ ಹಂಚಿಕೊಂಡಿದ್ದಾರೆ. ಅಹ್ವಾನಿಸಿದ ಅನಿಲ್ ಸರ್‌ಗೆ ಧನ್ಯವಾದ. ಅಮಿತ್ ಶಾ ಭೇಟಿ ಸಂತಸ ಕ್ಷಣ ಎಂದು ಶಮಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಯೋಗಿ ಸರ್ಕಾರ, ಮೊಹಮ್ಮದ್ ಶಮಿ ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಇದೀಗ ಅಮಿತ್ ಶಾ ಭೇಟಿ ಬಿಜೆಪಿ ಸೇರಿಕೊಳ್ಳುತ್ತಾರೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡಿದೆ.
ಆದರೆ ಈ ಭೇಟಿ ಯಾವುದೇ ರಾಜಕೀಯ ಭೇಟಿ ಅಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅದ್ಭುತ ಬೌಲಿಂಗ್ ಪ್ರದರ್ಶವನ್ನು ಅಭಿನಂದಿಸಲು ಅಮಿತ್ ಶಾ, ಶಮಿ ಭೇಟಿ ಮಾಡಿದ್ದರೆ.
ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗು ಮೊಹಮ್ಮದ್ ಶಮಿ ರಿಯಲ್ ಹೀರೋ ಆಗಿ ಮಿಂಚಿದ್ದಾರೆ. ಇಂದು ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಶಮಿ ನೆರವು ನೀಡಿದ್ದರು.
2023ರ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಕೇವಲ 7 ಪಂದ್ಯದಿಂದ 24 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಅತೀ ವೇಗದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.