ಗುಜರಾತ್ ಟೈಟಾನ್ಸ್‌ಗೆ ಶಾಕ್, ರೀಟೈನ್ ಆದರೂ ಮುಂಬೈ ಇಂಡಿಯನ್ಸ್‌ಗೆ ಹಾರಿದ ಹಾರ್ದಿಕ್ ಪಾಂಡ್ಯ!

First Published Nov 26, 2023, 8:03 PM IST

ಐಪಿಎಲ್ ಟೂರ್ನಿ ಹರಾಜಿಗೂ ಮೊದಲು ಅತೀ ದೊಡ್ಡ ಟ್ವಿಸ್ಟ್ ಎದುರಾಗಿದೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಚಾಂಪಿಯನ್ ಕಿರೀಟ ತಂದುಕೊಟ್ಟ ಹಾರ್ದಿಕ್ ಪಾಂಡ್ಯನನ್ನು ಗುಜರಾತ್ ಟೈಟಾನ್ಸ್ ಉಳಿಸಿಕೊಂಡು ರೀಟೈನ್ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಎರಡು ಗಂಟೆ ಅಂತರದಲ್ಲಿ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಖರೀದಿಸಿದೆ.
 

ಐಪಿಎಲ್ 2024ರ ಟೂರ್ನಿಗಾಗಿ ಇಂದು(ನ.26) ಆಟಗಾರರನ್ನು ಉಳಿಸಿಕೊಳ್ಳಲು, ಬಿಡುಗಡೆ ಮಾಡಲು ಕೊನೆಯ ದಿನವಾಗಿದೆ. ಪ್ರತಿ ಬಾರಿ ಹಲವು ಅಚ್ಚರಿ ಸಹಜ. ಆದರೆ ಈ ಬಾರಿ ಅಚ್ಚರಿ ಜೊತೆಗೆ ಅತೀ ದೊಡ್ಡ ಟ್ವಿಸ್ಟ್ ಕೂಡ ಎದುರಾಗಿದೆ. ಕಾರಣ ಹಾರ್ದಿಕ್ ಪಾಂಡ್ಯ.

ಗುಜರಾತ್ ಟೈಟಾನ್ಸ್ ತಂಡ ಸಂಜೆ 5.25ರ ವೇಳೆ ತಂಡದಲ್ಲಿ ಉಳಿಸಿಕೊಂಡ ಹಾಗೂ ರಿಲೀಸ್ ಮಾಡಿದ ಆಟಗಾರರ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮೊದಲಿಗರಾಗಿದ್ದರು. ಗುಜರಾತ್ ಟೈಟಾನ್ಸ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಪಾಂಡ್ಯ.

Latest Videos


ಗುಜರಾತ್ ಟೈಟಾನ್ಸ್ ತಂಡದ ಘೋಷಣೆ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಸೇರಿಕೊಳ್ಳುವ ಸುದ್ದಿಗೆ ಬ್ರೇಕ್ ಹಾಕಿತ್ತು. ಆದರೆ ಎರಡೇ ಗಂಟೆಯಲ್ಲಿ ಅತೀ ದೊಡ್ಡ ಟ್ವಿಸ್ಟ್ ಎದುರಾಗಿದೆ. ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಖರೀದಿಸಿದೆ.
 

15 ಕೋಟಿ ರೂಪಾಯಿ ನೀಡಿ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ. ಇದೀಗ ಮುಂಬೈ ಬಲಿ ಕೇವಲ 25 ಲಕ್ಷ ರೂಪಾಯಿ ಮಾತ್ರ ಬಾಕಿ ಉಳಿದಿದೆ. ಈ ಮೊತ್ತದಲ್ಲಿ ಇದೀಗ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ.

ಸಂಜೆ 5.25ಕ್ಕೆ ಗುಜರಾತ್ ತಂಡದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿದ್ದ ಹಾರ್ದಿಕ್ ಪಾಂಡ್ಯ, ಸಂಜೇ 7.25ರ ವೇಳೆಗೆ ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಹಾರ್ದಿಕ್ ಪಾಂಡ್ಯ ಖರೀದಿಸಿ ಒಪ್ಪಂದ ಮಾಡಿಕೊಂಡಿದೆ.

ಹಾರ್ದಿಕ್ ಪಾಂಡ್ಯ ದಿಢೀರ್ ಮುಂಬೈ ತಂಡ ಸೇರಿಕೊಳ್ಳುವ ಮೂಲಕ ಗುಜರಾತ್ ಟೈಟಾನ್ಸ್  ಆಘಾತಕ್ಕೊಳಗಾಗಿದೆ. ಇದೀಗ 2024ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ  ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.

ಆಟಗಾರರ ರೀಟೇನ್ ಹಾಗೂ  ರಿಲೀಸ್ ಘೋಷಣೆ ಮಾಡಲು ನವೆಂಬರ್ 26 ಕೊನೆಯ ದಿನವಾಗಿತ್ತು. ಆದರೆ ಟ್ರೇಡ್ ವಿಂಡೋ ಡಿಸೆಂಬರ್ 12ರ ವರಗೆ ಇರಲಿದೆ. ಮಾತುಕತೆಯಲ್ಲಿದ್ದ ಮುಂಬೈ ಇಂಡಿಯನ್ಸ್ ಗುಜರಾತ್ ರಿಟೈನ್ ಪಟ್ಟಿ ಘೋಷಣೆಯಾಗುತ್ತಿದ್ದಂತ ತರಾತುರಿಯಲ್ಲಿ ಪಾಂಡ್ಯ ಖರೀದಿಸಿದೆ.
 

ಮುಂಬೈ ತಂಡ ಜೋಫ್ರಾ ಆರ್ಚರ್ ಸೇರಿದಂತೆ ಬೌಲರ್ ರಿಲೀಸ್ ಮಾಡಿದೆ. ಇದೀಗ ಹರಾಜಿನಲ್ಲಿ ವೇಗಿಗಳನ್ನು ಖರೀದಿ ಅತೀ ಅವಶ್ಯಕವಾಗಿದೆ. ಆದರೆ ಹರಾಜಿನಲ್ಲಿ ಮುಂಬೈ ಯಾವ ತಂತ್ರ ಉಪಯೋಗಿಸಲಿದೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.
 

click me!