ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ಮುಂಬೈ ಇಂಡಿಯನ್ಸ್ ಪರ ಅತಿ ವೇಗದ ಶತಕದ ಸನತ್ ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದರು. ಇದೇ ಪಂದ್ಯದಲ್ಲಿ, ಸತತ ವೈಫಲ್ಯದ ನಂತರ ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಯಶಸ್ಸು ಕಂಡರು.
ಗುಜರಾತ್ ಟೈಟಾನ್ಸ್ ವಿರುದ್ಧ ಸೋಮವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ ಅಬ್ಬರದ ಶತಕ ಸಿಡಿಸಿದ್ದು, ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದಿದ್ದಾರೆ. ಕೇವಲ 45 ಎಸೆತಗಳಲ್ಲೇ ಶತಕ ಪೂರೈಸಿದ ಅವರು, ಮುಂಬೈ ಪರ ಜಂಟಿ ಅತಿ ವೇಗದ ಶತಕದ ದಾಖಲೆಯನ್ನೂ ಬರೆದಿದ್ದಾರೆ.
24
ಎರಡು ಶೇಡ್‌ಗಳಲ್ಲಿ ತಿಲಕ್ ಆಟ
ತಾವೆದುರಿಸಿದ ಮೊದಲ 22 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ್ದ ತಿಲಕ್ ಬಳಿಕ 23 ಎಸೆತಗಳಲ್ಲೇ ಬರೋಬ್ಬರಿ 83 ರನ್ ಸಿಡಿಸಿದರು. ಇನ್ನಿಂಗ್ಸ್‌ನ ಕೊನೆ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರ್ಣಗೊಳಿಸಿದರು. ಈ ಮೂಲಕ ಸನತ್ ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದ್ದಾರೆ.
34
45 ಎಸೆತಗಳಲ್ಲಿ ಶತಕ
ಜಯಸೂರ್ಯ ಅವರು 2008ರಲ್ಲಿ ಸಿಎಸ್‌ಕೆ ವಿರುದ್ಧ ವಾಂಖೆಡೆಯಲ್ಲಿ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಉಳಿದಂತೆ ಕ್ಯಾಮರೂನ್ ಗ್ರೀನ್ 2023ರಲ್ಲಿ ಸನ್‌ರೈಸರ್ಸ್ ವಿರುದ್ಧ 47 ಎಸೆತಕ, ಸೂರ್ಯಕುಮಾರ್ 2023ರಲ್ಲಿ ಗುಜರಾತ್ ವಿರುದ್ಧ 49 ಎಸೆತಕ್ಕೆ ಶತಕ ಬಾರಿಸಿದ್ದಾರೆ.
ಈ ಬಾರಿ ಐಪಿಎಲ್‌ನಲ್ಲಿ ವಿಕೆಟ್ ಪರ ಎದುರಿಸುತ್ತಿದ್ದ ಬೂಮ್ರಾ ಗುಜರಾತ್ ವಿರುದ್ಧ ಪಂದ್ಯದಲ್ಲಿ ಯಶಸ್ಸು ಪಡೆದರು. ಆರಂಭಿಕ 5 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ವಿಫಲವಾಗಿದ್ದ ಬೂಮ್ರಾ, ಸೋಮವಾರ ತಮ್ಮ ಮೊದಲ ಎಸೆತದಲ್ಲೇ ಸಾಯಿ ಸುದರ್ಶನ್ ವಿಕೆಟ್ ಪಡೆದರು. ಅವರು 3 ಓವರ್ ಎಸೆದು ಕೇವಲ 15 ರನ್ ನೀಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.