IPL 2026 Winner: ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್, ಆರ್‌ಸಿಬಿ ನಡುವೆ ಮ್ಯಾಚ್ ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್ ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್ ಅಪ್, ಉಳಿದವರಿಗೆ ಎಷ್ಟು ಪ್ರೈಜ್ ಸಿಗುತ್ತೆ?
ಕಳೆದ ವರ್ಷ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು. 2022ರ ಬಳಿಕ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ನೆಟ್ ರನ್ ರೇಟ್ ಹೊಂದಿತ್ತು, ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.
25
ಫಸ್ಟ್ ಎಷ್ಟು ಹಣ ಕೊಡಲಾಗುತ್ತಿತ್ತು?
2008 ರಲ್ಲಿ IPL ಶುರು ಆದಾಗ, ವಿಜೇತರಿಗೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. 2014-15ರಲ್ಲಿ 15 ಕೋಟಿ ರೂಪಾಯಿ ಸಿಕ್ಕಿತು. ಈಗ 20 ಕೋಟಿ ರೂಪಾಯಿ ಆಗಿದೆ.
ಬಿಸಿಸಿಐ (BCCI) ಐಪಿಎಲ್ 2026ರಲ್ಲಿ ಒಟ್ಟು ₹46.5 ಕೋಟಿಗಿಂತಲೂ ಹೆಚ್ಚಿನ ಹಣವನ್ನು ನೀಡಲಿದೆಯಂತೆ.
35
ವಿಜೇತರಿಗೆ ಎಷ್ಟು ಹಣ ಸಿಗುವುದು?
ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡಕ್ಕೆ 20 ಕೋಟಿ ರೂಪಾಯಿ ನೀಡಲಾಗುವುದು
ರನ್ನರ್ಸ್-ಅಪ್ (ದ್ವಿತೀಯ ಸ್ಥಾನ) ಪಡೆದವರಿಗೆ 13 ಕೋಟಿ ರೂಪಾಯಿ ಸಿಗುವುದು
ಕ್ವಾಲಿಫೈಯರ್ 2 ರಲ್ಲಿ ಸೋಲುವ ತಂಡಕ್ಕೆ (ಮೂರನೇ ಸ್ಥಾನ) ಕೋಟಿ ರೂಪಾಯಿ ಸಿಗುತ್ತದೆ
ಎಲಿಮಿನೇಟರ್‌ನಲ್ಲಿ ಹೊರಬೀಳುವ ತಂಡ (ನಾಲ್ಕನೇ ಸ್ಥಾನ 6.5 ಕೋಟಿ ರೂಪಾಯಿ ಸಿಗುವುದು
5 ರಿಂದ 10 ನೇ ಸ್ಥಾನ ಪಡೆಯುವ ತಂಡಕ್ಕೆ ಯಾವುದೇ ಹಣ ಸಿಗೋದಿಲ. ಆದರೆ ಅವರು Broadcasting deals, Sponsorship, ಟಿಕೆಟ್ ಮಾರಾಟದ ಮೂಲಕ ಒಂದಿಷ್ಟು ಹಣ ಪಡೆಯುತ್ತಾರೆ.
55
ಆರೇಂಜ್, ಪರ್ಪಲ್ ಕ್ಯಾಪ್ ಗೆದ್ದವ್ರಿಗೆ?
ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ತಲಾ ₹10 ಲಕ್ಷ ಸಿಗುತ್ತದೆ,
ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ (MVP) ಅವರಿಗೆ ₹10 ಲಕ್ಷ ರೂಪಾಯಿ ಸಿಗುತ್ತದೆ
ಉದಯೋನ್ಮುಖ ಆಟಗಾರ ಎಂಬ ಪಟ್ಟ ಪಡೆದವರಿಗೆ ₹20 ಲಕ್ಷ ರೂಪಾಯಿ ಸಿಗುತ್ತದೆ
ರಾಜಸ್ಥಾನ್ ರಾಯಲ್ಸ್ ಟೀಂ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರೆ, ಗುಜರಾತ್ ಟೈಟಾನ್ಸ್ ಟೀಂನ ವೇಗಿ ಕಗಿಸೊ ರಬಾಡ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.